ಮತ್ತೆ ಐದು ವರ್ಷಗಳಿಗೆ ನನಗೆ ಆಶೀರ್ವಾದ ಮಾಡಿದ ಕಾಶಿಯ ಜನತೆಗೆ ಕೃತಜ್ಞತೆ ಅರ್ಪಿಸಲು ಬಯಸುತ್ತೇನೆ…

ವಾರಾಣಸಿ: ವಾರಾಣಸಿ ಲೋಕಸಭೆ ಕ್ಷೇತ್ರದಿಂದ ಮತ್ತೆ ಐದು ವರ್ಷಗಳ ಅವಧಿಗೆ ನನಗೆ ಆಶೀರ್ವಾದ ಮಾಡಿದ ಕಾಶಿಯ ಜನತೆಗೆ ಕೃತಜ್ಞತೆ ಅರ್ಪಿಸಲು ಬಯಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಾರಾಣಸಿ ಕ್ಷೇತ್ರದಿಂದ ಮರುಆಯ್ಕೆ ಬಯಸಿ ಶುಕ್ರವಾರ ನಾಮಪತ್ರ ಸಲ್ಲಿಸಿದ ನಂತರದಲ್ಲಿ ಅವರು ಸುದ್ದಿಗಾರರ ಜತೆ ಮಾತನಾಡಿದರು. ಗುರುವಾರದ ರೋಡ್​ ಶೋ ಅತ್ಯುದ್ಭುತವಾಗಿತ್ತು. ಲಕ್ಷಾಂತರ ಜನರು ರೋಡ್​ ಶೋನಲ್ಲಿ ಪಾಲ್ಗೊಂಡು ಆಶೀರ್ವದಿಸಿದ್ದು ಖುಷಿ ತಂದಿತು ಎಂದರು.

ಮೋದಿ ಅವರು ಈಗಾಗಲೆ ಗೆದ್ದಾಗಿದೆ. ನಾವು ಹೋಗಿ ವೋಟು ಹಾಕಬೇಕೆಂದೇನಿಲ್ಲ ಎಂಬ ರೀತಿಯ ವಾತಾವರಣವನ್ನು ಕೆಲವರು ಸೃಷ್ಟಿಸುತ್ತಿದ್ದಾರೆ. ಹಾಗೆಂದು ಯಾರೂ ತಪ್ಪಾಗಿ ಭಾವಿಸಿ ಮನೆಯಲ್ಲಿ ಕೂರಬೇಡಿ. ಇಂಥವರ ಮಾತಿಗೆ ಬೆಲೆಕೊಡದೆ, ಮತಗಟ್ಟೆಗಳಿಗೆ ಹಚ್ಚಿನ ಸಂಖ್ಯೆಯಲ್ಲಿ ಬಂದು ಮತದಾನ ಮಾಡಿ, ಮತದಾನ ನಿಮ್ಮ ಹಕ್ಕು ಎಂಬುದನ್ನು ಮರೆಯಬೇಡಿ. ಇದು ಪ್ರಜಾತಂತ್ರ ವ್ಯವಸ್ಥೆಯ ಹಬ್ಬವಾಗಿದ್ದು, ಹೆಚ್ಚೆಚ್ಚು ಜನರು ಇದರಲ್ಲಿ ಪಾಲ್ಗೊಳ್ಳಬೇಕು. ಹಾಗೂ ದೇಶವನ್ನು ಬಲಪಡಿಸಬೇಕು ಎಂದು ಹೇಳಿದರು. (ಏಜೆನ್ಸೀಸ್​)

Leave a Reply

Your email address will not be published. Required fields are marked *