More

    ಮೈಸೂರು ವಿಮಾನ ನಿಲ್ದಾಣಕ್ಕೂ ಹೆಚ್ಚಿನ ಭದ್ರತೆ

    ಮೈಸೂರು: ಮಂಡಕಳ್ಳಿಯಲ್ಲಿರುವ ಮೈಸೂರು ವಿಮಾನ ನಿಲ್ದಾಣಕ್ಕೂ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದ್ದು, ಬಾಂಬ್ ನಿಷ್ಕ್ರಿಯಗೊಳಿಸುವ ಸಿಬ್ಬಂದಿ ತೊಡುವ ಬಾಂಬ್ ನಿರೋಧಕ ಜಾಕೆಟ್‌ವೊಂದನ್ನು (ಬಾಂಬ್ ಸೂಟ್) ವಾರದ ಹಿಂದೆಯೇ ತರಿಸಲಾಗಿದೆ.

    25 ಲಕ್ಷ ರೂ.ಮೌಲ್ಯದ ಅತ್ಯಾಧುನಿಕ ಜಾಕೆಟ್ ಇದಾಗಿದೆ. ತರಬೇತಿ ಪಡೆದ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗೆ ಈ ಜಾಕೆಟ್ ತೊಡಿಸಿ ಕಾರ್ಯಾಚರಣೆಗೆ ಇಳಿಸಲಾಗುತ್ತದೆ.

    ಅಲ್ಲದೆ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯನ್ನು (ಕೆಎಸ್‌ಐಎಸ್‌ಎಫ್) ವಿಮಾನ ನಿಲ್ದಾಣಕ್ಕೆ ನಿಯೋಜಿಸಲಾಗುತ್ತಿದೆ. ನಿಲ್ದಾಣಕ್ಕೆ ಸದಾ ಭದ್ರತೆ ಒದಗಿಸಲಾಗುತ್ತಿದೆ. ಪ್ರತಿಯೊಬ್ಬ ಪ್ರಯಾಣಿಕರನ್ನೂ ಮೆಟಲ್, ಹ್ಯಾಂಡ್ ಡಿಟೆಕ್ಟರ್‌ನೊಂದಿಗೆ ತಪಾಸಣೆ ಮಾಡಲಾಗುತ್ತಿದೆ. ಸಿಸಿ ಕ್ಯಾಮೆರಾ ಕಣ್ಗಾವಲು ಇರಿಸಲಾಗಿದೆ. ಇದೇ ವ್ಯವಸ್ಥೆ ರೈಲ್ವೆ ನಿಲ್ದಾಣ, ಮೈಸೂರು ಅರಮನೆಯಲ್ಲೂ ಇದೆ.

    ಆದರೆ, ಸಿಟಿ ಬಸ್ ನಿಲ್ದಾಣ ಮತ್ತು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಮೆಟಲ್, ಹ್ಯಾಂಡ್ ಡಿಟೆಕ್ಟರ್ ವ್ಯವಸ್ಥೆಯೊಂದಿಗೆ ತಪಾಸಣೆ ಮಾಡಲ್ಲ. ಸಿಸಿ ಕ್ಯಾಮೆರಾ ಮೂಲಕ ಪ್ರಯಾಣಿಕರ ಚಲನ ವಲನದ ಮೇಲೆ ನಿಗಾ ವಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts