ಇಳಕಲ್ಲ(ಗ್ರಾ): ನಗರದ ಅತ್ಯಂತ ಹಳೆಯ ಸರ್ಕಾರಿ ಹಿರಿಯ ಪ್ರಾಥಮಿಕ ಕೇಂದ್ರ ಶಾಲೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ ಎಂದು ಬಾಗಲಕೋಟೆ ಜಿಪಂ ಸಿಇಒ ಶಶಿಧರ ಕರೇರ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಾಥಮಿಕ ಕೇಂದ್ರ ಶಾಲೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.
ಅವಶ್ಯಕವಿರುವ ಇಂಗ್ಲಿಷ್ ಶಿಕ್ಷಕರನ್ನು ಕೂಡಲೇ ನಿಯೋಜಿಸಲಾಗುವುದು. ಮುಂದಿನ ವರ್ಷದಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಆರಂಭಿಸಲು ಅನುಮೋದನೆ ಪಡೆಯಲಾಗುವುದು ಎಂದು ತಿಳಿಸಿದರು.
ಅಂದಾಜು 70 ವರ್ಷಗಳ ಹಳೆಯದಾದ ಈ ಶಾಲೆಯಲ್ಲಿ ಕಲಿತವರು ಸಾಕಷ್ಟು ಜನರು ಉನ್ನತ ಹುದ್ದೆಯಲ್ಲಿದ್ದಾರೆ. ಈ ಹಿಂದೆ ಪ್ರತಿವರ್ಷವೂ ಈ ಶಾಲೆಯಲ್ಲಿ 500 ರಿಂದ 600 ವಿದ್ಯಾರ್ಥಿಗಳು ಕಲಿತ ಉದಾಹರಣೆಗಳಿವೆ. ಆದ್ದರಿಂದ ಇಂತಹ ಶಾಲೆ ಪುನರುಜ್ಜೀವನಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಕ್ಷೇತ್ರ ಸಮನ್ವಾಧಿಕಾರಿ ಸದಾಶಿವ ಗುಡುಗುಂಟಿ, ವಲಯ ಶಿಕ್ಷಣ ಸಂಯೋಜಕ ವಿನೋದ ಭೋವಿ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಸೋಮಲಿಂಗಪ್ಪ ಅಂಟರದಾನಿ, ಮುಖ್ಯಶಿಕ್ಷಕ ಶ್ರೀಧರ ಜೋಗಿನ ಇದ್ದರು.