2ನೇ ದಿನ ಸರ್ಕಾರಿ ನೌಕರರ ಭರ್ಜರಿ ಆಟೋಟ

Government Employees' Sports Meet

ಶಿವಮೊಗ್ಗ: ಸೋಮವಾರ ಇಡೀ ದಿನ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಪುರುಷರು ಮತ್ತು ಮಹಿಳೆಯರ ವೈಯಕ್ತಿಕ ಮತ್ತು ಗುಂಪು ವಿಭಾಗದ ಆಟೋಟಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಂಡರು. ವಿವಿಧ ಕ್ರೀಡೆಗಳಲ್ಲಿ ಸ್ಪರ್ಧಿಸಿ ದಣಿದಿದ್ದ ನೌಕರರು ಸಂಜೆ ಖ್ಯಾತ ಜಾನಪದ ಕಲಾವಿದರು ನಡೆಸಿಕೊಟ್ಟ ಜನಪದ ದಿಬ್ಬಣವನ್ನು ಕಣ್ತುಂಬಿಕೊಂಡು ಸಂಭ್ರಮದಲ್ಲಿ ಮಿಂದೆದ್ದರು.

blank

ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದಲ್ಲಿ ಸರ್ಕಾರಿ ನೌಕರರ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆ ಎರಡನೇ ದಿನದ ವಿಶೇಷತೆ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಆಗಮಿಸಿದ್ದ 11 ಸಾವಿರಕ್ಕೂ ಅಧಿಕ ನೌಕರರು ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ನೋಂದಣಿ ಮಾಡಿಕೊಂಡಿದ್ದು, ವಿವಿಧ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಗೆದ್ದು ಸಂಭ್ರಮಿಸಿದರು.
ಕ್ರೀಡಾಕೂಟದ ಕೇಂದ್ರ ಬಿಂದುವಾದ ನಗರದ ನೆಹರು ಕ್ರೀಡಾಂಗಣವು ಸರ್ಕಾರಿ ನೌಕರರಿಂದ ತುಂಬಿಕೊಂಡಿತ್ತು. ಒಳಾಂಗಣ ಮತ್ತು ಹೊರಾಂಗಣದಲ್ಲಿ ನೌಕರರ ಆಟೋಟಗಳು ಬಿರುಸಿನಿಂದ ನಡೆದವು. ಹೊರಾಂಗಣದಲ್ಲಿ ಬೆಳಗ್ಗೆ ವಿವಿಧ ಜಿಲ್ಲೆಗಳಿಂದ ಬಂದಿದ್ದ ನೌಕರರು ವಾಲಿಬಾಲ್, ಥ್ರೋಬಾಲ್, ಕಬ್ಬಡಿ, ಕುಸ್ತಿ, ಬಾಲ್ ಬ್ಯಾಂಡ್ಮಿಂಟನ್, ಖೋಖೋ, ಬಾಸ್ಕೆಟ್ ಬಾಲ್‌ನಂತಹ ಗುಂಪು ಕ್ರೀಡೆಗಳಲ್ಲಿ ಸ್ಪರ್ಧಿಸಿ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದರು.
ಒಳಾಂಗಣ ಕ್ರೀಡಾಂಗಣದಲ್ಲಿ ಅಥ್ಲೆಟಿಕ್, ಬಾರ ಎತ್ತುವಿಕೆ, ಟೆನ್ನಿ ಕಾಯ್ಡ, ಚೆಸ್, ದೇಹದಾರ್ಢ್ಯದಂತಹ ವೈಯಕ್ತಿಕ ಸ್ಪರ್ಧೆಗಳಲ್ಲಿ ನೌಕರರು ಮಿಂಚಿದರು. ಗೋಪಾಳದ ಕ್ರೀಡಾ ಸಂಕೀರ್ಣದಲ್ಲಿ ಈಜು, ಲಾನ್ ಟೆನ್ನಿಸ್, ಟೆಬಲ್ ಟೆನ್ನಿಸ್ ಹಾಗೂ ಯೋಗ ಸ್ಪರ್ಧೆಗಳು ನಡೆದವು. ಗೆದ್ದವರು ಖುಷಿಯಿಂದ ಸಂಭ್ರಮಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದರು.
ನಗರದ ಬಸವನಗುಡಿ ಚೌಡಮ್ಮನ ದೇವಸ್ಥಾನದ ಪಕ್ಕದ ಸರ್ಕಾರಿ ನೌಕರರ ವಿಕಾಸ ಕೇಂದ್ರದಲ್ಲಿ ನೌಕರರಿಗೆ ಕೇರಂ ಸ್ಪರ್ಧೆ ನಡೆಯಿತು. ಗುಂಡಪ್ಪ ಶೆಡ್‌ನ ರಾವ್ ಸ್ಫೋರ್ಟ್ಸ್‌ನಲ್ಲಿ ಷಟಲ್ ಬ್ಯಾಡ್ಮಿಂಟನ್, ಸೆಕ್ರೆಡ್‌ಹಾರ್ಟ್ ಹಿಂಭಾಗದ ಮೈದಾನ ಮತ್ತು ಜೆಎನ್‌ಎನ್‌ಸಿ ಇಂಜಿನಿಯರ್ ಕಾಲೇಜು ಮೈದಾನದಲ್ಲಿ ಫುಟ್‌ಬಾಲ್ ಹಣಾಹಣಿ ನಡೆದವು. ಪತ್ರಿಕಾ ಭವನದಲ್ಲಿ ನೌಕಕರರಿಗೆ ಪಾಶ್ಚಿಮಾತ್ಯ ಗಾಯನ, ವಾದ್ಯ ಹಾಗೂ ನೃತ್ಯ ಸ್ಪರ್ಧೆಗಳು ನಡೆದವು. ವಿವಿಧ ವೇಷಗಳಲ್ಲಿ ನೌಕರರು ಭಾಗಿಯಾಗಿ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank