ಬಿರುಗಾಳಿ ಮಳೆಗೆ ಭಾರಿ ನಷ್ಟ

ಬೇಲೂರು: ತಾಲೂಕಿನ ಗಂಗಾವರ ಹಾಗೂ ಹೊಸಪೇಟೆ ಗ್ರಾಮದಲ್ಲಿ ಗುರುವಾರ ಸಂಜೆ ಬಿರುಗಾಳಿ ಮಳೆಗೆ ಎರಡು ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಕೆಲ ಮನೆಗಳ ಛಾವಣಿ ಹಾರಿಹೋಗಿವೆ.

9 ಮರಗಳು ಹಾಗೂ 12 ವಿದ್ಯುತ್ ಕಂಬಗಳು ಧರೆಗುರುಳಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ್ದು, ಗ್ರಾಮಸ್ಥರು ರಾತ್ರಿಪೂರ್ತಿ ಕತ್ತಲೆಯಲ್ಲಿ ಕಾಲ ಕಳೆದಿದ್ದಾರೆ. ಸಾಕಷ್ಟು ಮನೆಗಳ ಶೀಟ್, ಹೆಂಚುಗಳು ಹಾರಿಹೋಗಿವೆ. ಇದರಿಂದ ಗಂಗಾವರ ಹಾಗೂ ಹೊಸಪೇಟೆ ಗ್ರಾಮಸ್ಥರ ಜನಜೀವನ ಅಸ್ತವ್ಯಸ್ತವಾಗಿದೆ.

ಗಂಗಾವರ ಗ್ರಾಮದ ಲೋಲಾಕ್ಷಿ ಹಾಗೂ ಹೇಮಾಲತಾ ಅವರ ಮನೆಗಳು ಸಂಪೂರ್ಣವಾಗಿ ಜಖಂಗೊಂಡಿದ್ದು, ಮನೆಯ ತುಂಬೆಲ್ಲ ನೀರು ತುಂಬಿ ಆಹಾರ ಪದಾರ್ಥಗಳು, ಬಟ್ಟೆ, ಹಾಸಿಗೆಗಳು ನೀರು ಪಾಲಾಗಿವೆ. ನಾಗರಾಜು, ಉಮಾ, ನಾಗರತ್ನಾ ಇನ್ನಿತರರ ಮನೆಗಳ ಛಾವಣಿ ಹಾರಿಹೋಗಿವೆ. 10ಕ್ಕೂ ಹೆಚ್ಚು ಶೌಚಗೃಹಗಳ ಗೋಡೆಗಳು ಬಿದ್ದು ಹೋಗಿವೆ.

Leave a Reply

Your email address will not be published. Required fields are marked *