ಆಕಸ್ಮಿಕ ಬೆಂಕಿಗೆ ಹುಲ್ಲಿನ ಮೆದೆ ಭಸ್ಮ

ಬೈಲಕುಪ್ಪೆ: ಪಿರಿಯಾಪಟ್ಟಣ ತಾಲೂಕು ಐಚನಹಳ್ಳಿ ಗ್ರಾಮದಲ್ಲಿ ಭತ್ತ ಹಾಗೂ ರಾಗಿ ಹುಲ್ಲಿನ ಮೆದೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಸಂರ್ಪೂಣವಾಗಿ ಭಸ್ಮವಾಗಿದೆ. ಐಚನಹಳ್ಳಿ ಗ್ರಾಮದ ಕುಳ್ಳನಾಯಕನ ಮಗ ಕಾಳಪ್ಪನಾಯಕನಿಗೆ ಹುಲ್ಲಿನ ಮೆದೆ ಸೇರಿದ್ದು, ಸುಮಾರು 4 ಎಕರೆಯಲ್ಲಿ ಬೆಳೆದಿದ್ದ ಹುಲ್ಲು ನಾಶವಾಗಿದೆ. ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ಕೆಡಿಸಲು ಮುಂದಾದರೂ ಅಷ್ಟರಲ್ಲಾಗಲೇ ಹುಲ್ಲು ಸಂಪೂರ್ಣ ಭಸ್ಮವಾಗಿತ್ತು.