ಆರೋಗ್ಯದ ದೃಷ್ಟಿಯಿಂದ ತೆಂಗಿನ ತುರಿ ಬಹಳ ಒಳ್ಳೆಯದು

ನಮ್ಮ ದಿನನಿತ್ಯದ ಆಹಾರಪದಾರ್ಥಗಳ ತಯಾರಿಕೆಯಲ್ಲಿ ನಾವು ಸಾಮಾನ್ಯವಾಗಿ ಬಳಸುವಂತಹ ಪದಾರ್ಥ ತೆಂಗಿನಕಾಯಿ ತುರಿ. ತೆಂಗಿನಕಾಯಿಯನ್ನು ಒಡೆದು ಅದರಲ್ಲಿನ ತಿರುಳಿನ ಭಾಗವನ್ನು ತುರಿದು ಹಸಿಯಾಗಿಯೇ ಉಪಯೋಗಿಸುತ್ತೇವೆ. ಈ ಅಭ್ಯಾಸವು ಕರಾವಳಿ, ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಎಲ್ಲ ಪ್ರದೇಶಗಳಲ್ಲಿಯೂ ಇದನ್ನು ಉಪಯೋಗಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಹಾಗೆಯೇ ತಿನ್ನಲು ಕೂಡ ತೆಂಗಿನ ತುರಿಯು ಬಹಳ ರುಚಿಯಾಗಿರುತ್ತದೆ.

ಹಸಿ ತೆಂಗಿನಕಾಯಿ ತುರಿಯು ಒಣ ಕೊಬ್ಬರಿಗಿಂತಲೂ ಒಳ್ಳೆಯದು. ಇದು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದು ಇದಕ್ಕೆ ಕಾರಣ. ದೇಹವು ಕೂಡ ಹಸಿ ತೆಂಗಿನ ತುರಿಯನ್ನು ಸುಲಭವಾಗಿ ಉಪಯೋಗಿಸಿಕೊಳ್ಳುತ್ತದೆ. ಇದನ್ನು ರುಬ್ಬಿ ಹಾಲನ್ನು ತೆಗೆದು ಬಳಸುವುದು ಆರೋಗ್ಯಕ್ಕೆ ಹೆಚ್ಚಿನ ಅನುಕೂಲತೆಗಳನ್ನು ತಂದುಕೊಡುತ್ತದೆ. ಒಳ್ಳೆಯ ಕೊಬ್ಬಿನಂಶವನ್ನು ಇದು ಹೊಂದಿರುತ್ತದೆ. ಮೂರ್ಛೆ ರೋಗ ಇರುವವರು ಇದನ್ನು ಪ್ರತಿನಿತ್ಯ ಸೇವಿಸುವುದು ಬಹಳ ಪರಿಣಾಮಕಾರಿ. ಇದರಿಂದ ಪದೇಪದೆ ಪ್ರಜ್ಞೆ ತಪ್ಪುವುದು ಕ್ರಮೇಣ ಕಡಿಮೆಯಾಗುತ್ತದೆ.

ಸಾಂಬಾರು ಮಾಡಲು ಉಪಯೋಗಿಸುವುದರ ಜೊತೆಗೆ ಸಲಾಡ್, ಸೂಪ್, ಪಲ್ಯ, ಮಿಲ್ಕ್ ಶೇಕ್ – ತರಹದ ಪದಾರ್ಥಗಳ ತಯಾರಿಕೆಯಲ್ಲಿ ಕೂಡ ತೆಂಗಿನಕಾಯಿ ತುರಿಯನ್ನು ಬಳಸಬಹುದಾಗಿದೆ. ಮಕ್ಕಳಿಗೆ ಇದನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಅವಲಕ್ಕಿಯಂತಹ ತಿಂಡಿಗಳನ್ನು ತಯಾರಿಸುವಾಗ ತೆಂಗಿನ ತುರಿಯನ್ನು ಬಳಸುವುದರಿಂದ ಪದಾರ್ಥದ ರುಚಿಯ ಹೆಚ್ಚಳದ ಜೊತೆಗೆ ಆರೋಗ್ಯದ ಹೆಚ್ಚಳವೂ ಸಾಧ್ಯವಾಗುತ್ತದೆ. ತಾಯಿಯ ಹಾಲಿನಲ್ಲಿ ಇರುವಂತಹ ಪೋಷಕಾಂಶ ತೆಂಗಿನತುರಿಯ ಹಾಲಿನಲ್ಲಿದೆ. ಇದನ್ನೇ ಕೋಲ್ಡ್ ಕಂಪ್ರೆಸ್ (ಶೀತದಿಂದ ಕುಗ್ಗಿಸಿ) ಮಾಡಿ ಎಕ್ಸಾ್ಟ್ರ ವರ್ಜಿನ್ ಕೋಕೋನಟ್ ಆಯಿಲ್ ತಯಾರಿಸುತ್ತಾರೆ. ಎಕ್ಸಾ್ಟ್ರ ವರ್ಜಿನ್ ತೆಂಗಿನೆಣ್ಣೆಯ ಪ್ರಯೋಜನ ಅಪರಿಮಿತ ಅಪಾರ ಎಂದರೆ ತಪ್ಪಾಗಲಾರದು. ತೆಂಗಿನತುರಿಯೊಂದಿಗೆ ಹಸಿರು ಸೊಪ್ಪನ್ನು ಸೇರಿಸಿ ರುಬ್ಬಿ ತಯಾರಿಸುವ ತಂಬುಳಿಗಳಲ್ಲಿ ಸಾಕಷ್ಟು ಆರೋಗ್ಯ ಅನುಕೂಲಕಾರಿ ಗುಣಗಳಿವೆ. ಆದ್ದರಿಂದ ಈ ರೀತಿಯ ಆಹಾರ ಪದಾರ್ಥಗಳು ಹಾಗೂ ತೆಂಗಿನ ತುರಿಯ ನೇರ ಬಳಕೆ ಮಾಡೋಣ.

One Reply to “ಆರೋಗ್ಯದ ದೃಷ್ಟಿಯಿಂದ ತೆಂಗಿನ ತುರಿ ಬಹಳ ಒಳ್ಳೆಯದು”

Leave a Reply

Your email address will not be published. Required fields are marked *