ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಡಿ.ಕೆ.ಶಿವಕುಮಾರ್​ಗೆ ಹೃದಯಾಘಾತವಾಗುತ್ತಿತ್ತು, ಆರೋಗ್ಯ ಪರಿಗಣಿಸಿ ಜಾಮೀನು ಕೊಡಿ: ಅಭಿಷೇಕ್​ ಮನುಸಿಂಘ್ವಿ ಮನವಿ

ನವದೆಹಲಿ: ಅಕ್ರಮ ಹಣ ಪತ್ತೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇ.ಡಿ.ವಶದಲ್ಲಿರುವ ಕಾಂಗ್ರೆಸ್​ ನಾಯಕ ಡಿ.ಕೆ.ಶಿವಕುಮಾರ್​ ಅವರ ಜಾಮೀನು ಅರ್ಜಿ ವಿಚಾರಣೆ ಇ.ಡಿ.ನ್ಯಾಯಾಲಯದಲ್ಲಿ ನಡೆಯುತ್ತಿದ್ದು ಹಿರಿಯ ವಕೀಲ ಅಭಿಷೇಕ್​ ಮನುಸಿಂಘ್ವಿ ಡಿಕೆಶಿ ಪರ ವಾದ ಮಂಡಿಸಿದರು.

ಬೇರೆ ಆರೋಪಿಗಳ ಮನೆಯಲ್ಲೂ ಹಣ ಸಿಕ್ಕಿದೆಯಲ್ಲ. ದೆಹಲಿಯಲ್ಲಿ ಪತ್ತೆಯಾದ 8.50 ಕೋಟಿ ರೂಪಾಯಿ ಡಿ.ಕೆ.ಶಿವಕುಮಾರ್​ ಅವರದ್ದು ಅಲ್ಲ ಎಂದು ವಾದಿಸಿದರು.

ಇ.ಡಿ.ತನಖೆ ದುರುದ್ದೇಶ ಹಾಗೂ ಪೂರ್ವಾಗ್ರಹ ಪೀಡಿತವಾಗಿದೆ ಎಂದು ನೇರವಾಗಿ ಆರೋಪ ಮಾಡಿದ ಸಿಂಘ್ವಿ, ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬಾರದು ಎಂದು ಹೇಳಿದರು.

ಇ.ಡಿ.ಹೇಳುವಂತೆ ಯಾವುದೇ ಅವ್ಯವಹಾರ ನಡೆದಿಲ್ಲ. 20 ಖಾತೆಗಳಲ್ಲಿ 10 ವರ್ಷಗಳಿಂದ 64 ಲಕ್ಷ ರೂಪಾಯಿ ವ್ಯವಹಾರ ನಡೆದಿದೆ. ಆದರೆ ಡಿ.ಕೆ.ಶಿವಕುಮಾರ್​ ಅವರದ್ದು ಒಟ್ಟು 317 ಖಾತೆಗಳು ಇವೆ ಎಂದು ಇ.ಡಿ.ಕಾಲ್ಪನಿಕ ಕಥೆ ಹೇಳುತ್ತಿದೆ. ಅಲ್ಲದೆ 3 ಖಾತೆಗಳಿಂದ 200 ಕೋಟಿ ರೂಪಾಯಿ ವ್ಯವಹಾರ ನಡೆದಿದೆ ಎನ್ನುತ್ತಿದ್ದಾರೆ. ಇದೆಲ್ಲವೂ ಆಧಾರ ರಹಿತ ಎಂದು ಅಭಿಷೇಕ್​ ಮನುಸಿಂಘ್ವಿ ಕೋರ್ಟ್​ಗೆ ತಿಳಿಸಿದರು.

ಡಿಕೆಶಿ ಆರೋಗ್ಯ ಸ್ಥಿತಿಯ ಬಗ್ಗೆ ಕೋರ್ಟ್​ಗೆ ತಿಳಿಸಿದ ವಕೀಲರು, ಡಿ.ಕೆ.ಶಿವಕುಮಾರ್​ ಅವರಿಗೆ ರಕ್ತದೊತ್ತಡ ಕಡಿಮೆಯಾಗಿಲ್ಲ. ಅವರಿಗೆ ಹೃದಯಾಘಾತ ಆಗುವ ಸಂಭವ ಇತ್ತು. ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಹಾರ್ಟ್​ ಅಟ್ಯಾಕ್​ ಆಗುತ್ತಿತ್ತು. ಮಧುಮೇಹ, ರಕ್ತದೊತ್ತಡ, ಥೈರಾಯಿಡ್​ ಸಮಸ್ಯೆಯಿಂದ ಬಳಲುತ್ತಿದ್ದಾರೆ. 3 ದಿನಗಳಿಂದ ಆರ್ ಎಂಎಲ್ ಆಸ್ಪತ್ರೆಯಲ್ಲಿ ಇದ್ದರು. ಬಿಪಿ ನಿಯಂತ್ರಣಕ್ಕೆ ಬರುತ್ತಿಲ್ಲ. ಪರಿಣಾಮಕಾರಿ ಇಂಜಕ್ಷನ್​ ನೀಡಲಾಗಿದೆ. ವೈದ್ಯಕೀಯ ವರದಿ ಆಧರಿಸಿ ಅವರಿಗೆ ಜಾಮೀನು ನೀಡಬೇಕು ಎಂದು ಜಡ್ಜ್​ಗೆ ಮನವಿ ಮಾಡಿದರು.

ಅಪ್ಪನ ಆಸ್ತಿ ಸಹಜವಾಗಿ ಮಗನಿಗೆ ಬಂದಿದೆ. ಡಿ.ಕೆ.ಶಿವಕುಮಾರ್​ ಮಗಳು ಐಶ್ವರ್ಯಾ ಖಾತೆಯಲ್ಲಿ ಕೇವಲ 65 ಸಾವಿರ ರೂಪಾಯಿ ಇತ್ತು. ಡಿ.ಕೆ.ಸುರೇಶ್​ ಖಾತೆಯಲ್ಲಿ 70 ಲಕ್ಷ ರೂ.ಇತ್ತು. 2013ರಿಂದ 2018ರವರೆಗೆ ಆಸ್ತಿ ಪ್ರಮಾಣ ಏರಿಕೆಯಾಗಿದ್ದು ಅದೂ ಕೂಡ ಕಾನೂನುಬದ್ಧವಾಗಿಯೇ ಇದೆ ಎಂದು ಸಿಂಘ್ವಿ ವಾದ ಮಂಡಿಸಿದರು.

ಅದಕ್ಕೂ ಮೊದಲು ಇ.ಡಿ. ಅಡಿಷನಲ್ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ವಾದ ಮಂಡಿಸಿ, ನಾವು ಎರಡು ಅಪ್ಲಿಕೇಶನ್​ ಹಾಕುತ್ತಿದ್ದೇವೆ. ಮೊದಲನೆಯದಾಗಿ ಡಿ.ಕೆ.ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಬೇಕು ಹಾಗೂ ನ್ಯಾಯಾಂಗ ಬಂಧನದಲ್ಲಿದ್ದಂತೆ ನಮಗೆ ವಿಚಾರಣೆ ನಡೆಸಲು ಅನುಮತಿ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಡಿ.ಕೆ.ಶಿವಕುಮಾರ್ ಅವರ ಆರೋಗ್ಯ ಹದಗೆಟ್ಟಿದ್ದರಿಂದ ಆಸ್ಪತ್ರೆಗೆ ಸೇರಿಸಬೇಕಾಯಿತು. ಹಾಗಾಗಿ ತನಿಖೆ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ನ್ಯಾಯಾಂಗ ಬಂಧನದಲ್ಲಿ ಕೂಡ ತನಿಖೆ ನಡೆಸಲು ಅವಕಾಶ ಕೊಡಿ ಎಂದು ನಟರಾಜ್​ ಹೇಳಿದರು. ಅಲ್ಲದೆ,ಡಿ.ಕೆ.ಶಿವಕುಮಾರ್ ಅವರ ಆಡಿಟರ್​ ಅವರನ್ನೂ ಕರೆಸಿ ವಿಚಾರಣೆ ನಡೆಸಬೇಕಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

7 Replies to “ಸ್ವಲ್ಪ ಹೆಚ್ಚುಕಡಿಮೆಯಾಗಿದ್ದರೂ ಡಿ.ಕೆ.ಶಿವಕುಮಾರ್​ಗೆ ಹೃದಯಾಘಾತವಾಗುತ್ತಿತ್ತು, ಆರೋಗ್ಯ ಪರಿಗಣಿಸಿ ಜಾಮೀನು ಕೊಡಿ: ಅಭಿಷೇಕ್​ ಮನುಸಿಂಘ್ವಿ ಮನವಿ”

  1. ಅಕ್ರಮ ದುಡ್ಡು ಮಾಡುವಾಗ ಹೃದಯಘಾತ ಸಮೀಪ ಸುಳಿಯಲ್ಲ, ಅದ್ರೆ ವಿಚಾರಣೆ ಮಾಡುವಾಗ ಯಾಕೆ ಹೃದಯಘಾತ ಸಮೀಪಿಸುತ್ತೆ..??

  2. ಕಾನೂನು ಪ್ರಕಾರ ಕೆಲಸ ಮಾಡಲು ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಿ. ಹಾಗೂ ಇಡಿ ಅಧಿಕಾರಿಗಳಿಗೆ ಸ್ಪಂದಿಸುವ ಧೈರ್ಯ ಡಿ ಕೆ ಶಿವಕುಮಾರ ಅವರಿಗೆ ಆ ಭಗವಂತ ಕರುಣಿಸಲಿ ನ್ಯಾಯ ದೇವತೆ ಮುಂದೆ ನಾವೆಲ್ಲ ಯಾವ ಲೆಕ್ಕ. ಧನ್ಯವಾದಗಳು.

    1. If he’s correct should be co operate to enquiry . Please DKS tell us how to make money we’re all waiting for your suggestions because we should know how to become carodpathi in short time without making any looting the society fund and government.

  3. ಗೌರವಯುತ ವೃತ್ತಿಯೆಂದು ಪರಿಗಣಿಸುವ ವಕೀಲರೇ, ನಿಮ್ಮ ಕಕ್ಷಿದಾರನಿಗೆ ನ್ಯಾಯ ಸಿಗಲೆಂದು ಸುಳ್ಳು ಹೇಳುತ್ತಿರುವುದು ನಿಮ್ಮ ವೃತ್ತಿ ಗೆ ಶೋಭೆಯಲ್ಲ. ಅಕ್ರಮ ಆಸ್ತಿ ಮಾಡುವಾಗ ಜೋರು ಮಾಡಿ ಜಂಭ, ಸೊಕ್ಕಿನಿಂದ ಮೆರೆದ ನಿಮ್ಮ ಡಿ.ಕೆ‌.ಶಿ ಯ ಬಣ್ಣ ಬಯಲಾದ ಮೇಲೆ ಈ ನಾಟಕ ಸಾಕು ಮಾಡಿ.‌ನಿಮ್ಮ ಹೇಳಿಕೆ ನಂಬಲು ಜನರೇನು ದಡ್ಡರಲ್ಲ.

Leave a Reply

Your email address will not be published. Required fields are marked *