ಕೇಕ್ ಕತ್ತರಿಸಿ, ಸಿಹಿ ತಿಂದು ಸಡಗರ |, ಹೊಸ ವರ್ಷಕ್ಕೆ ಸಂಭ್ರಮ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಗರ ಸೇರಿ ಜಿಲ್ಲಾದ್ಯಂತ ೨೦೨೪ರ ಹೊಸ ವರ್ಷವನ್ನು ಭಾನುವಾರ ಮಧ್ಯರಾತ್ರಿ ಸಡಗರ, ಹರ್ಷೋದ್ಘಾರದೊಂದಿಗೆ ಸ್ವಾಗತಿಸಲಾಯಿತು. ರಾತ್ರಿ ೧೨ ಗಂಟೆಗೆ ಮುನ್ನ ಮತ್ತು ನಂತರ ಕೇಕ್ ಕತ್ತರಿಸಿ ಸಿಹಿ ತಿಂದು ಜನತೆ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಬೆಳಗ್ಗೆಯಿAದಲೇ ಕುಟುಂಬಸ್ಥರು, ಸ್ನೇಹಿತರ ತಂಡಗಳು ಸಿದ್ಧತೆಯಲ್ಲಿ ತೊಡಗಿದ್ದು, ರಾತ್ರಿಯಲ್ಲಿ ಡಿಜೆ, ಸೌಂಡ್ ಬಾಕ್ಸ್ ಹಚ್ಚಿ ಗಾಯನಕ್ಕೆ ನೃತ್ಯ ಮಾಡಿದ್ದಲ್ಲದೆ ಪಟಾಕಿ ಸಿಡಿಸಿದರು. ವಿವಿಧೆಡೆ ಯುವಕರು ಗೆಳೆಯರೊಂದಿಗೆ ಹೊಲ, ಊರ ಹೊರವಲಯದಲ್ಲಿ ಅಡುಗೆ ಮಾಡಿ ಕೇಕ್ ಕತ್ತರಿಸಿ ಮೋಜು ಮಸ್ತಿ ಮಾಡಿದರು. ಎಲ್ಲೆಡೆ ಮದ್ಯ ಮಾರಾಟವೂ ಜೋರಾಗಿತ್ತು.
ಹೊಸ ವರ್ಷಾಚರಣೆ ನಿಮಿತ್ತ ನಗರದಲ್ಲಿ ಇಬ್ಬರು ಡಿಸಿಪಿ, ನಾಲ್ವರು ಎಸಿಪಿ, ೧೮ ಪಿಐ, ೩೦ ಪಿಎಸ್‌ಐ ಸೇರಿ ೫೦೦ ಪೊಲೀಸರಿಂದ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ನಗರದಲ್ಲಿ ೪೦ ಕಡೆ ನಾಕಾಬಂದಿ ಸ್ಥಾಪಿಸಿ ತಪಾಸಣೆ ನಡೆಸಲಾಯಿತು.
ಕೇಕ್ ಭರ್ಜರಿ ಮಾರಾಟ
ಸೂಪರ್ ಮಾರ್ಕೆಟ್, ಎನ್.ವಿ. ಕಾಲೇಜ್ ಬಳಿ, ರಾಮಮಂದಿರ, ಶಹಾಬಜಾರ್, ಜಯನಗರ ಸೇರಿ ವಿವಿಧೆಡೆ ಬೇಕರಿಗಳಲ್ಲಿ ಸಿದ್ಧಪಡಿಸಿದ್ದ ಭಿನ್ನ ವಿಭಿನ್ನವಾದ ಕೇಕ್ ಖರೀದಿ ಜೋರಾಗಿತ್ತು. ಬೇಕರಿಗಳ ಎದುರು ಕೇಕ್ ಮೇಳ ಆಯೋಜಿಸಿ ಮಾರಾಟಕ್ಕೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಕೇಕ್ ಜತೆಗೆ ಚಿಪ್ಸ್, ಆಲೂ ಚಿಪ್ಸ್, ಖಾರ, ಘಾಟಿ, ಮಿಕ್ಶರ್, ಚಕ್ಕುಲಿ, ಪಾಪಡ್, ಪೇಢಾ, ಕಲಾಖನ್ ಸೇರಿ ವಿವಿಧ ಖಾದ್ಯಗಳ ಖರೀದಿ ಕಂಡಿತು. ವಿಶೇಷವಾಗಿ ಕೂಲ್ ಕೇಕ್‌ಗೆ ಹೆಚ್ಚಿನ ಬೇಡಿಕೆ ಕಂಡು ಬಂದಿತು.
ವಿಶೇಷ ಆಯೋಜನೆ
ಕಲಬುರಗಿ ನಗರ ಸೇರಿ ತಾಲೂಕಿನ ವಿವಿಧ ರೆಸ್ಟೋರೆಂಟ್, ಹೋಟೆಲ್, ಧಾಬಾಗಳಲ್ಲಿ ಹೊಸ ವರ್ಷ ವಿಶಿಷ್ಟ ರೀತಿಯಿಂದ ಆಚರಿಸಲಾಯಿತು. ಮ್ಯೂಸಿಕಲ್ ನೈಟ್, ನೃತ್ಯ ಆಯೋಜನೆ, ಊಟ, ಮದ್ಯ ಸೇವನೆ ಸೇರಿ ವಿವಿಧ ವ್ಯವಸ್ಥೆ ಒಂದೇ ಕಡೆ ಮಾಡಿ ಪ್ರವೇಶಕ್ಕೆ ಹಣ ನಿಗದಿಪಡಿಸಿದ್ದು