More

    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಅದ್ದೂರಿ ಗ್ರ್ಯಾಂಡ್​ ಫಿನಾಲೆ

    ಬೆಂಗಳೂರು:  ಡ್ಯಾನ್ಸ್ ರಿಯಾಲಿಟಿ ಶೋಗಳಲ್ಲಿ ಹೊಸ ಛಾಪು ಮೂಡಿಸಿರುವ ಜೀ ಕನ್ನಡ ವಾಹಿನಿಯ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಫ್ಯಾಮಿಲಿ ವಾರ್ ಸೀಜನ್ 2ನ ಗ್ರ್ಯಾಂಡ್​ ಫಿನಾಲೆ ಕೋಟೆನಾಡು ಚಿತ್ರದುರ್ಗದಲ್ಲಿ ಅದ್ದೂರಿಯಾಗಿ ನಡೆದಿದೆ.

    ಈಗಾಗಲೇ 22 ವಾರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಈ ಕಾರ್ಯಕ್ರಮ 13 ಕಲಾವಿದರ ಜೋಡಿಯೊಂದಿಗೆ ಆರಂಭವಾಗಿ, ನಂತರದಲ್ಲಿ ಕಾರ್ಯಕ್ರಮದ ನಿಯಮಾನುಸಾರ 20 ನೃತ್ಯ ಸುತ್ತುಗಳ ಬಳಿಕ 10 ಜೋಡಿಗಳ ನಡುವೆ ನೃತ್ಯ ಕಾದಾಟ ಮುಂದುವರಿಸುತ್ತ ಬಂದಿತ್ತು.

    ಕಳೆದ ಸೆಮಿಫೈನಲ್ಸ್ನಲ್ಲಿ 10 ಜೋಡಿಗಳ ಪೈಕಿ 5 ಜೋಡಿಗಳು ಅಂದರೆ ಅನೂಪ್-ದಿಂಪಿನ, ಪ್ರೇಕ್ಷಿತ್-ಅನ್ವಿಷ, ತೇಜಸ್-ಪ್ರಣತಿ, ವಿವೇಕ್-ಹಿರಣ್ಮಯಿ ಮತ್ತು ಅದಿತಿ ಗ್ರಾಂಡ್ ಫಿನಾಲೆ ವೇದಿಕೆ ಏರಿದ್ದಾರೆ. ಕೋಟೆ ನಾಡಿನಲ್ಲಿ ಅದ್ದೂರಿಯಾಗಿ ನಡೆದಿರುವ ಈ ಗ್ರ್ಯಾಂಡ್​ ಫಿನಾಲೆ ಭಾನುವಾರ ಸಂಜೆ 6.30ಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts