ಪ್ರಾದೇಶಿಕ ನಾಯಕರ ಮೇಲೆ ಪ್ರಭಾವ ಬೀರಲು ರಾಗಾ ವಿಫಲ, ನಿಹಾರಿಕೆಯಂತೆ ಆಯ್ತು ಮಹಾಘಠಬಂಧನ!

ಗುವಾಹಟಿ: ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಪ್ರಾದೇಶಿಕ ಪಕ್ಷಗಳ ನಾಯಕರ ಮೇಲೆ ಪ್ರಭಾವ ಬೀರಲು ವಿಫಲರಾದರು. ಹಾಗಾಗಿ, ಬಿಜೆಪಿ ವಿರೋಧಿ ಮಹಾಘಠಬಂಧನ ಒಂದರ್ಥದಲ್ಲಿ ನಿಹಾರಿಕೆಯಂತೆ ಆಯಿತು ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್​ ಮುಖಂಡ ತರುಣ್​ ಗಗೊಯ್​ ಅಭಿಪ್ರಾಯಪಟ್ಟಿದ್ದಾರೆ.

6 ಬಾರಿ ಸಂಸದರಾಗಿ, ಕೇಂದ್ರ ಸಚಿವರಾಗಿ ಹಾಗೂ ಅಸ್ಸಾಂನ ಸಿಎಂ ಆಗಿ ಮೂರು ಬಾರಿ ಕಾರ್ಯನಿರ್ವಹಿಸಿರುವ ತರುಣ್​ ಗಗೋಯ್​, ಮಹಾಘಟಬಂಧನ ನಿಹಾರಿಕೆಯಂತೆ ಉಳಿದಿದ್ದರೂ, ಬಿಜೆಪಿಯನ್ನು ಸೋಲಿಸುವ ವಿಷಯದಲ್ಲಿ ಇಂದಿಗೂ ಒಗ್ಗಟ್ಟಾಗಿವೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿದ್ದಾರೆ.

ಮಹಾಘಟಬಂಧನದ ಮೂಲಕ ಒಗ್ಗಟ್ಟಾಗಿ ಹೋರಾಡುವ ಬಗ್ಗೆ ರಾಹುಲ್​ ಗಾಂಧಿ ಸಾಕಷ್ಟು ಒಲವು ಹೊಂದಿದ್ದರು. ಆದರೆ, ಪ್ರಾದೇಶಿಕ ಪಕ್ಷಗಳ ಮುಖಂಡರು ಈ ಬಗ್ಗೆ ಹೆಚ್ಚಿನ ಆಸಕ್ತಿ ತೋರಲಿಲ್ಲ. ನಮ್ಮ ಪಕ್ಷ ಪ್ರಾದೇಶಿಕ ಪಕ್ಷಗಳಿಗೆ ಹೆಚ್ಚಿನ ಮಾನ್ಯತೆ ನೀಡುವ ಕಾರಣ, ಬಹುತೇಕ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

Leave a Reply

Your email address will not be published. Required fields are marked *