ಸಿನಿಮಾ

ಗ್ರಾಮದೇವಿ ಜಾತ್ರಾ ಮಹೋತ್ಸವ 25ರಿಂದ

ನವಲಗುಂದ (ಧಾರವಾಡ): ಪಟ್ಟಣದ ಗ್ರಾಮದೇವಿ ಪ್ರಾಣ ಪ್ರತಿಷ್ಠಾಪನೆ ಹಾಗೂ ಜಾತ್ರಾ ಮಹೋತ್ಸವ ಮೇ 25ರಿಂದ 29ರವರೆಗೆ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಸದಸ್ಯ ರಾಯನಗೌಡ ಪಾಟೀಲ ಹೇಳಿದರು.


ಪಟ್ಟಣದ ಗ್ರಾಮ ಚಾವಡಿಯಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಪ್ರತಿ 11 ವರ್ಷಕ್ಕೊಮ್ಮೆ ಜಾತ್ರೆ ನಡೆಸಲು ಸಂಕಲ್ಪ ಮಾಡಲಾಗಿದೆ. ಗ್ರಾಮದೇವಿ ತವರು ಮನೆ ಇಬ್ರಾಹಿಂಪುರ ಗ್ರಾಮವಾಗಿದೆ. ಆದ್ದರಿಂದ ಅಲ್ಲಿಂದ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.


ಅಡಿವೆಪ್ಪ ಶಿರಸಂಗಿ, ಎನ್.ಪಿ. ಕುಲಕರ್ಣಿ, ನರಸಿಂಹ ಇನಾಮತಿ, ಲಿಂಗರಾಜ ಸಿದ್ದರಾಮಶೆಟ್ಟರ, ಅಣ್ಣಪ್ಪ ಬಾಗಿ, ಬಸಣ್ಣ ಹರಿವಾಳದ ಇತರರು ಇದ್ದರು.

ಐದು ದಿನ ಕಾರ್ಯಕ್ರಮ

ಮೇ 25ರಂದು ಬೆಳಗ್ಗೆ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಪಂಚಗೃಹ ಹಿರೇಮಠದ ಶ್ರೀ ಸಿದ್ಧೇಶ್ವರ ಸ್ವಾಮೀಜಿ, ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ, ಅಜಾತ ನಾಗಲಿಂಗಮಠದ ಶೀ ವೀರೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಪಟ್ಟಣದಲ್ಲಿ ದೇವಿ ಮೂರ್ತಿ ಮೆರವಣಿಗೆ ನಡೆಸಿ ಗ್ರಾಮ ಚಾವಡಿಯಲ್ಲಿ ದೇವಿಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವದು.


ಅಂದು ರಾತ್ರಿ 7ಕ್ಕೆ ಧರ್ಮಸಭೆ ಜರುಗಲಿದ್ದು, ಹೊಸಳ್ಳಿಯ ಬೂದೀಶ್ವರ ಸ್ವಾಮೀಜಿ, ವೀರೇಂದ್ರ ಸ್ವಾಮೀಜಿ, ದಯಾನಂದ ಸ್ವಾಮೀಜಿ, ಶಾಸಕ ಎನ್.ಎಚ್. ಕೋರನಡ್ಡಿ ಇತರರು ಪಾಲ್ಗೊಳ್ಳುವರು.


26ರಂದು ದೇವಿಗೆ ವಿಶೇಷ ಪೂಜೆ, ಇಬ್ರಾಹಿಂಪುರದ ಭಕ್ತರಿಂದ ಉಡಿ ತುಂಬುವುದು. ರಾತ್ರಿ 7ಕ್ಕೆ ಸುಳ್ಳ ಗ್ರಾಮದ ಶ್ರೀ ಶಿವಸಿದ್ಧರಾಮೇಶ್ವರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಧರ್ಮಸಭೆ ಜರುಗಲಿದೆ. ಪಂಚಗೃಹ ಹಿರೇಮಠದ ಸಿದ್ದೇಶ್ವರ ಭಾಗವಹಿಸುವರು.


27 ಮತ್ತು 28ರಂದು ರಾತ್ರಿ 7ಕ್ಕೆ ಧರ್ಮಸಭೆ ನಡೆಯಲಿದೆ. 29ರಂದು ಬೆಳಗ್ಗೆ ಪೂಜೆ. ಮಧ್ಯಾಹ್ನ 12.26ಕ್ಕೆ ದೇವಸ್ಥಾನದಲ್ಲಿ ದೇವಿ ಮೂರ್ತಿ ಪ್ರತಿಷ್ಠಾಪನೆ, ಪೂಜೆಯೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

Latest Posts

ಲೈಫ್‌ಸ್ಟೈಲ್