ಗ್ರಾಪಂ ನೌಕರರಿಗಿಲ್ಲ ನೇರ ವೇತನ ಪಾವತಿ

– ಶ್ರವಣ್‌ಕುಮಾರ್ ನಾಳ ಪುತ್ತೂರು
ಎರಡು ದಶಕಗಳಿಂದ ಗ್ರಾಮ ಪಂಚಾಯಿತಿಯಲ್ಲಿ ದುಡಿಯುತ್ತಿರುವ ನೌಕರರಿಗೆ ಸರ್ಕಾರದ ನಿಯಮದನ್ವಯ ದೊರೆಯಬೇಕಾದ ಮುಂಬಡ್ತಿ ದ.ಕ. ಜಿಲ್ಲೆಯಲ್ಲಿ ಮಾತ್ರ ಅನುಷ್ಠಾನಕ್ಕೆ ಬಂದಿಲ್ಲ.
ಜತೆಗೆ 2018ರ ಮಾರ್ಚ್‌ನಲ್ಲಿ ಗ್ರಾಮೀಣಾಭಿವದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಕನಿಷ್ಠ ಕಾರ್ಮಿಕ ವೇತನ ಕಾಯ್ದೆಯಂತೆ ವೇತನ ನಿಗದಿಗೊಳಿಸಿ ಸರ್ಕಾರದ ನಿಧಿಯಿಂದ ನೇರವಾಗಿ ಗ್ರಾಪಂ ನೌಕರರ ಖಾತೆಗೆ ಪಾವತಿ ಮಾಡುವಂತೆ ಆದೇಶ ಹೊರಡಿಸಿದರೂ ಅನುಷ್ಠಾನಕ್ಕೆ ಬಂದಿಲ್ಲ. ಇದರಿಂದಾಗಿ ಗ್ರಾಮ ಪಂಚಾಯಿತಿ ನೌಕರರು ತಮ್ಮ ವತ್ತಿ ಬದುಕಿನಲ್ಲಿ ಸಾಕಷ್ಟು ಪಡಿಪಾಟಲು ಅನುಭವಿಸುತ್ತಿದ್ದಾರೆ.
ಇ-ಎ್ಎಂಎಸ್ ಅನುಷ್ಠಾನವಿಲ್ಲ: ಗ್ರಾಪಂ ಸಿಬ್ಬಂದಿಗಳ ಸೇವಾ ಭದ್ರತೆ ಹಾಗೂ ಇ-ಎ್ಎಂಎಸ್ (ಎಲೆಕ್ಟ್ರಾನಿಕ್ ಂಡ್ ಮ್ಯಾನೇಜ್‌ಮೆಂಟ್ ಸಿಸ್ಟಂ) ಮೂಲಕ ವೇತನ ಪಡೆಯುವ ಕನಸನ್ನು ಸರ್ಕಾರ 2018ರ ಮಾರ್ಚ್‌ನಲ್ಲಿ ಈಡೇರಿಸಿತು. ಆದರೆ, ಅಧಿಕಾರಿಗಳ ವಿಳಂಬ ನೀತಿಯಿಂದಾಗಿ ಇನ್ನೂ ನೇರವಾಗಿ ನೌಕರರ ಖಾತೆಗೆ ವೇತನ ಪಾವತಿಯಾಗುತ್ತಿಲ್ಲ. ಈ ಹಿಂದೆ ನೀಡುತ್ತಿದ್ದಂತೆಯೇ ಗ್ರಾಪಂ ಅಧ್ಯಕ್ಷರು ಮತ್ತು ಪಿಡಿಒ ಚೆಕ್ ಮೂಲಕ ಸಂಬಳ ನೀಡುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಕೆಲ ಪಂಚಾಯಿತಿ ಸಿಬ್ಬಂದಿಗೆ ತಡವಾಗಿ ಅಂದರೆ ಮೂರು-ನಾಲ್ಕು ತಿಂಗಳಿಗೊಮ್ಮೆ ವೇತನ ಪಾವತಿಸಲಾಗುತ್ತಿದೆ. ಕೆಲ ಕುಂಟುನೆಪ ಮುಂದೊಡ್ಡಿ ಸಿಬ್ಬಂದಿ ವರ್ಗವನ್ನು ಸತಾಯಿಸುತ್ತಿರುವ ಪ್ರಸಂಗಗಳೂ ಇವೆ ಎಂದು ಗ್ರಾಪಂ ನೌಕರರು ದೂರುತ್ತಿದ್ದಾರೆ. ಜಿಲ್ಲೆಯ 203 ಪಂಚಾಯಿತಿಗಳ ನೌಕರರಿಗೆ ಇ-ಎ್ಎಂಎಸ್ ಸೌಲಭ್ಯ ದೊರೆಯಬೇಕಿತ್ತು.

ದ.ಕ. ಜಿಲ್ಲೆಯಲ್ಲಿ ಮುಂಬಡ್ತಿ ಇಲ್ಲ:  ಬುದ್ಧಿವಂತರ ಜಿಲ್ಲೆಯೆಂದು ಕರೆಯಲ್ಪಡುವ ದ.ಕ. ಜಿಲ್ಲೆಯಲ್ಲಿಯೇ ಸರ್ಕಾರದ ಆದೇಶಕ್ಕೆ ಕಿಮ್ಮತ್ತಿನ ಬೆಲೆ ಸಿಗುತ್ತಿಲ್ಲ. ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಗ್ರಾಪಂ ನೌಕರರಿಗೆ ಜೇಷ್ಠತಾ ಆಧಾರದ ಮೇಲೆ ಬಡ್ತಿ ನೀಡಬೇನ್ನುವ ನಿಯಮವಿದೆ. ಬಡ್ತಿ ದೊರೆತಲ್ಲಿ ನೌಕರರು ಪಂಚಾಯಿತಿ ಕಾರ್ಯದರ್ಶಿಯಾಗಿ ಅಥವಾ ಲೆಕ್ಕ ಪರಿಶೋಧಕರಾಗಿ ನೇಮಕಗೊಂಡು ಸರ್ಕಾರದಿಂದ ವೇತನ, ಇನ್‌ಕ್ರಿಮೆಂಟ್ ಸೇರಿದಂತೆ ಅನೇಕ ಸೌಲಭ್ಯ ಪಡೆಯಲಿದ್ದಾರೆ. ರಾಜ್ಯದ ಇತರ ಜಿಲ್ಲೆಗಳಲ್ಲಿ ಪ್ರತಿವರ್ಷ ಜನವರಿ ವೇಳೆ ಜೇಷ್ಠತಾ ಪಟ್ಟಿ ಆಧಾರದ ಮೇಲೆ ಹತ್ತು ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದ ನೌಕರರನ್ನು ಮುಂಬಡ್ತಿಗೆ ಪರಿಗಣಿಸಲಾಗುತ್ತಿದ್ದರೂ ನಮ್ಮ ಜಿಲ್ಲೆಯಲ್ಲಿ ಮಾತ್ರ ಮಾಡಲಾಗುತ್ತಿಲ್ಲ ಎಂದು 20 ವರ್ಷಗಳಿಂದ ಪಂಚಾಯಿತಿಯಲ್ಲಿ ದುಡಿಯುತ್ತಿರುವ ನೌಕರರೊರ್ವರು ನೋವು ಹೇಳಿಕೊಂಡರು.

263 ಮಂದಿ ಜೇಷ್ಠತಾ ಪಟ್ಟಿಗೆ ಅರ್ಹರು:  2012-13ರ ವೇಳೆಯಲ್ಲಿ ಸೇವಾ ಹಿರಿತನ ಹಾಗೂ ಅರ್ಹತೆ ಮೇರೆಗೆ ದ.ಕ. ಜಿಲ್ಲೆಯಲ್ಲಿ ಬಡ್ತಿ ನೀಡಲಾಗಿದ್ದು, ಬಳಿಕ ಬಡ್ತಿ ಪ್ರಕ್ರಿಯೆ ನಡೆದಿಲ್ಲ. ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಹಾಗೂ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಜೇಷ್ಠತಾ ಪಟ್ಟಿ ತಯಾರಿಸಿ ಅನುಮೋದನೆ ನೀಡುವುದು ಕಾರ್ಯವಿಧಾನ. ಆದರೆ ಅವರಿಂದ ಆದೇಶವಾಗಿಲ್ಲ. ಜಿಲ್ಲೆಯಲ್ಲಿ ಹತ್ತು ವರ್ಷ ಮೇಲ್ಪಟ್ಟು ದುಡಿದಿರುವ 208 ನೌಕರರಿದ್ದು, ಜೇಷ್ಠತಾ ಪಟ್ಟಿಯಲ್ಲಿ 263 ಮಂದಿ ಇದ್ದಾರೆ.

ಪಂಚಾಯಿತಿ ಸಿಬ್ಬಂದಿ ವರ್ಗ:  ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್, ವಾಟರ್‌ಮ್ಯಾನ್/ಪಂಪ್ ಆಪರೇಟರ್, ಜವಾನ, ಸ್ವಚ್ಛತಾಗಾರ ಹೀಗೆ ನೌಕರರ ನೇಮಕ ಮಾಡಿಕೊಳ್ಳಲಾಗುತ್ತಿದೆ. ಇವರಿಗೆ ಕ್ರಮವಾಗಿ 13,203 ರೂ., 13,203 ರೂ., 11,699 ರೂ., 11,091 ರೂ., 10,010 ರೂ. ಸಂದಾಯವಾಗುತ್ತಿದೆ. ಪಂಚಾಯಿತಿನ ಹಿರಿಯ ನೌಕರರಿಗೂ ಇದೇ ವೇತನವನ್ನು ಪಾವತಿಸಲಾಗುತ್ತಿದೆ. ಧ್ವಜಾರೋಹಣಗೈಯುವ ಸಿಬ್ಬಂದಿಗೆ ಪ್ರತಿದಿನ 30 ರೂ. ಹೆಚ್ಚುವರಿಯಾಗಿ ಪಾವತಿಸಲಾಗುತ್ತಿದೆ.

ಪಂಚಾಯಿತಿಗಳು ಅನುದಾನದ ಪಟ್ಟಿ ನೀಡುವುದು ವಿಳಂಬವಾದ ಕಾರಣ ಕೆಲವೆಡೆ ಇ-ಎ್ಎಂಎಸ್ ಮೂಲಕ ವೇತನ ಪಾವತಿಯಾಗಿಲ್ಲ. ಸದ್ಯದಲ್ಲೇ ಎಲ್ಲೆಡೆ ಇ-ಎ್ಎಂಎಸ್ ವೇತನ ಪಾವತಿಯಾಗಲಿದೆ. ಜೇಷ್ಠತಾ ಆಧಾರದ ಮೇರೆಗೆ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿಯವರು ಗ್ರೇಡ್ 2 ಹುದ್ದೆಗೆ ಬಡ್ತಿ ನೀಡಬಹುದಾಗಿದೆ.
– ಕೆಂಪೇ ಗೌಡ, ನಿರ್ದೇಶಕ, ಗ್ರಾಮೀಣಾಭಿವದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ, ಬೆಂಗಳೂರು