ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆ ಅಧಿಸೂಚನೆ ಒಕ್ಕಣೆಯ ಕರ್ನಾಟಕ ರಾಜ್ಯಪತ್ರದ ಅಸಲೀಯತ್ತಿನ ಬಗ್ಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಇಲಾಖೆಯಲ್ಲೇ ನಕಲಿ ಕುಮಾರಸ್ವಾಮಿ ಗ್ರಾ.ಪಂ.ಚುನಾವಣೆಯ ಗಜೆಟ್ ನೋಟಿಫಿಕೇಷನ್ ಹೊರಡಿಸಿದ್ದಾನೆ. ಇಲಾಖೆಯಿಂದ ಯಾವುದೇ ಚುನಾವಣೆ ಘೋಷಣೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಗ್ರಾಮ ಪಂಚಾಯತ್ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ನಕಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ್ದಾರೆ. ಇದನ್ನು ಕುಮಾರಸ್ವಾಮಿಯಂಥವ್ರ ಶಿಷ್ಯಂದಿರು ಮಾಡಿದ್ದಾರೋ, ಯಾರ್ ಮಾಡಿದ್ದಾರೋ ತನಿಖೆ ಮಾಡ್ತಿದ್ದೀವಿ ಎಂದು ಈಶ್ವರಪ್ಪ ಹೇಳಿದರು.
ಸಾಮಾಜಿಕ ತಾಣಗಳಲ್ಲಿ ವೈರಲ್ ಆಯ್ತು ಗ್ರಾಪಂ ಚುನಾವಣೆಯ ಕರ್ನಾಟಕ ರಾಜ್ಯಪತ್ರದ ಪ್ರತಿ: ನಕಲಿ ಪತ್ರ ಎಂಬ ಸ್ಪಷ್ಟೀಕರಣ ನೀಡಿತು ರಾಜ್ಯ ಚುನಾವಣಾ ಆಯೋಗ