ವಿವಿಧ ಗ್ರಾ.ಪಂ. ಉಪಚುನಾವಣೆ

ಹಾವೇರಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಕಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಹಾವೇರಿ ತಾಲೂಕಿನ ಬಸಾಪುರ, ಕುರುಬಗೊಂಡ, ಬ್ಯಾಡಗಿ ತಾಲೂಕಿನ ಸೂಡಂಬಿ, ರಾಣೆಬೆನ್ನೂರ ತಾಲೂಕಿನ ಅಸುಂಡಿ, ಸವಣೂರ ತಾಲೂಕಿನ ಯಲವಿಗಿ ಹಾಗೂ ಹಾನಗಲ್ಲ ತಾಲೂಕಿನ ಅಕ್ಕಿಆಲೂರ ಗ್ರಾ.ಪಂ.ಗಳಿಗೆ ಉಪಚುನಾವಣೆ ಜರುಗಲಿದೆ.

ಹಾವೇರಿ ತಾಲೂಕು ಬಸಾಪುರ ಗ್ರಾ.ಪಂ.ಗೆ ಹಾವೇರಿ ಪಿಆರ್​ಇಡಿ ವ್ಯವಸ್ಥಾಪಕ ಶ್ರೀನಿವಾಸ ಇಟಗಿ ಚುನಾವಣಾಧಿಕಾರಿಯಾಗಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಎಇ ರಾಘವೇಂದ್ರ ನಾಯಕ್ ಸಹಾಯಕ ಚುನಾವಣಾ ಅಧಿಕಾರಿಯಾಗಿ, ಕುರುಬಗೊಂಡ ಗ್ರಾ.ಪಂ.ಗೆ ಸಮಾಜ ಕಲ್ಯಾಣ ಇಲಾಖೆ ವ್ಯವಸ್ಥಾಪಕ ನವೀನ ಕಟ್ಟಿ ಚುನಾವಣಾಧಿಕಾರಿಯಾಗಿ ಹಾಗೂ ಗ್ರಾಮೀಣ ನೀರು ಸರಬರಾಜು ವಿಭಾಗದ ಮಾಲತೇಶ ಬಸಾಪುರ ಸಹಾಯಕ ಚುನಾವಣಾಧಿಯಾಗಿ, ಬ್ಯಾಡಗಿ ತಾಲೂಕು ಸೂಡಂಬಿ ಗ್ರಾ.ಪಂ.ಗೆ ಬ್ಯಾಡಗಿ ಪಿಡಬ್ಲ್ಯೂಡಿ ಸಹಾಯಕ ಇಂಜನೀಯರ್ ಆರ್.ಎಚ್. ಹರಮಗಟ್ಟಿ ಚುನವಣಾಧಿಕಾರಿಯಾಗಿ ಹಾಗೂ ತಾ.ಪಂ. ಪ್ರ.ದ.ಸ ಎಂ.ಬಿ. ರಾಠಿ ಸಹಾಯಕ ಚುನಾವಣಾಧಿಕಾರಿಯಾಗಿ, ರಾಣೆಬೆನ್ನೂರು ತಾಲೂಕು ಅಸುಂಡಿ ಗ್ರಾ.ಪಂ.ಗೆ ರಾಣೆಬೆನ್ನೂರ ಅಕ್ಷರದಾಸೋಹದ ಲಿಂಗರಾಜ ಸುತ್ತಕೋಟೆ ಚುನಾವಣಾಧಿಕಾರಿಯಾಗಿ ಹಾಗೂ ಬಿ.ಆರ್.ಸಿ. ಕೇಂದ್ರದ ಜೆ.ವಿ. ಕಾಟಣ್ಣನವರ ಸಹಾಯಕ ಚುನಾವಣಾಧಿಕಾರಿಯಾಗಿ, ಸವಣೂರ ತಾಲೂಕಿನ ಯಲವಿಗಿ ಗ್ರಾ.ಪಂ.ಗೆ ಕಳಸೂರ ಗ್ರಾ.ಪಂ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶಂಭುಲಿಂಗಪ್ಪ ನಾಡರ ಚುನಾವಣಾಧಿಕಾರಿಯಾಗಿ ಹಾಗೂ ಸವಣೂರ ತಾ.ಪಂ.ನ ರಾಘವೇಂದ್ರ ಚಲವಾದಿ ಸಹಾಯಕ ಚುನಾವಣಾಧಿಕಾರಿಯಾಗಿ, ಹಾನಗಲ್ಲ ತಾಲೂಕು ಅಕ್ಕಿಆಲೂರ ಗ್ರಾ.ಪಂ.ಗೆ ಹಾನಗಲ್ಲ ನೀರಾವರಿ ಇಲಾಖೆ ಸಹಾಯಕ ಇಂಜನೀಯರ್ ಜಾವೀದ ಎಂ., ಚುನಾವಣಾಧಿಕಾರಿಯಾಗಿ ಹಾಗೂ ಕೃಷಿ ಇಲಾಖೆ ಸಹಾಯಕ ಕೃಷಿ ಅಧಿಕಾರಿ ಶ್ರೀದರ ದಾಸರ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.