ಮನೆ ದಾಖಲಾತಿ ಕೇಳಿದ್ದಕ್ಕೆ ಮಂಚಕ್ಕೆ ಕರೆದ ಆರೋಪ: ಗ್ರಾ.ಪಂ ಸದಸ್ಯನ ವಿರುದ್ಧ ಮಹಿಳೆ ದೂರು

ಮೈಸೂರು: ಮನೆಗೆ ಸಂಬಂಧಿಸಿದ ದಾಖಲಾತಿ ಕೇಳಿದ್ದಕ್ಕೆ ಮಂಚಕ್ಕೆ ಕರೆದನೆಂದು ಆರೋಪಿಸಿ ಗ್ರಾಮ ಪಂಚಾಯಿತಿ ಸದಸ್ಯನ ವಿರುದ್ಧ ಮಹಿಳೆಯೊಬ್ಬಳು ದೂರು ದಾಖಲಿಸಿರುವ ಘಟನೆ ನಡೆದಿದೆ.

ಮೈಸೂರು ತಾಲೂಕಿನ ಧನಗಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪಿ.ಲಿಂಗರಾಜು ವಿರುದ್ಧ ಮಹಿಳೆ ದೂರು ದಾಖಲಿಸಿದ್ದಾಳೆ. ಮನೆಗೆ ಸಂಬಂಧಿಸಿದ ದಾಖಲಾತಿ ಕೊಡಿಸಿ ಎಂದು ಕೇಳಿದ್ದಕ್ಕೆ, ದಾಖಲಾತಿ ಕೊಡಿಸುತ್ತೇನೆ ಇವತ್ತು ಮನೆಗೆ ಬರುತ್ತೀಯ ಎಂದು ಕರೆದ, ಪ್ರಶ್ನಿಸಿದಕ್ಕೆ ಸಹಚರರ ಜತೆ ಸೇರಿ ಹಲ್ಲೆ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.

ಗ್ರಾ.ಪಂ. ಸದಸ್ಯ ಲಿಂಗರಾಜು ಸೇರಿ ಐವರ ವಿರುದ್ಧ ಜಯಪುರ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. (ದಿಗ್ವಿಜಯ ನ್ಯೂಸ್​)