ಸ್ನೇಹಿತನ ಜತೆ ಮಾತನಾಡುತ್ತ ನಿಂತಿದ್ದ ಗ್ರಾಮ ಪಂಚಾಯಿತಿ ಸದಸ್ಯ ಸಾವು

ಕೊಡಗು: ರಸ್ತೆ ಬದಿ ನಿಂತಿದ್ದ ಗ್ರಾಪಂ ಸದಸ್ಯನಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

ಕೊಡಗು ಜಿಲ್ಲೆಯ ಹರಿಶ್ಚಂದ್ರಪುರದಲ್ಲಿ ಅಪಘಾತ ನಡೆದಿದ್ದು, ಗೋಣಿಕೊಪ್ಪಲು ಗ್ರಾಪಂ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡ ಕಲೀಮುಲ್ಲಾ ಸಾವು (44) ಮೃತಪಟ್ಟಿದ್ದಾರೆ.

ಸ್ನೇಹಿತನ ಜತೆ ಮಾತನಾಡುತ್ತ ರಸ್ತೆ ಬದಿಯಲ್ಲಿ ನಿಂತಿದ್ದ ವೇಳೆ ಬಂದ ಕಾರು ಏಕಾಏಕಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಲೀಮುಲ್ಲ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ. ಮತ್ತೊಬ್ಬರಿಗೆ ಗಂಭೀರವಾಗಿ ಗಾಯವಾಗಿದ್ದು, ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗೋಣಿಕೊಪ್ಪ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)