ಮೂರು ಸದಸ್ಯ ಸ್ಥಾನಗಳಿಗೆ ಇಲೆಕ್ಷನ್
ವೇಳಾಪಟ್ಟಿ ಆದೇಶ ಹೊರಡಿಸಿದ ಡಿಸಿ
ವಿಜಯವಾಣಿ ಸುದ್ದಿಜಾಲ ಉಡುಪಿ
ರಾಜ್ಯಾದ್ಯಂತ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಚುನಾವಣಾ ಆಯೋಗ ದಿನಾಂಕ ನಿಗದಿಪಡಿಸಿ ಸುತ್ತೋಲೆ ಹೊರಡಿಸಿದ್ದು, ಉಡುಪಿ ಜಿಲ್ಲೆಯ ಮೂರು ಗ್ರಾಪಂಗಳಲ್ಲಿ ಮೇ 25ರಂದು ಉಪಚುನಾವಣೆ ನಡೆಸಲು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ವೇಳಾಪಟ್ಟಿ ಆದೇಶ ಹೊರಡಿಸಿದ್ದಾರೆ.

ಉಡುಪಿ ತಾಲೂಕಿನ ಉದ್ಯಾವರ ಗ್ರಾಪಂ-1, ಕಾಪು ತಾಲೂಕಿನ ಬೆಳ್ಳೆ ಗ್ರಾಪಂ-1 ಹಾಗೂ ಪಡುಬಿದ್ರಿ ಗ್ರಾಪಂ-1 ಸದಸ್ಯ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಚುನಾವಣೆ ನಡೆಯಲಿರುವ ಮೂರು ಗ್ರಾಪಂಗಳ ಸೂಚನಾ ಫಲಕದಲ್ಲಿ ಕೂಡಲೇ ವೇಳಾಪಟ್ಟಿ ಲಗತ್ತಿಸುವಂತೆ ಸೂಚಿಸಿಲಾಗಿದೆ.
ಮೇ 14 ಕೊನೆಯ ದಿನ
ಮೇ 8 ನಾಮಪತ್ರ ಸ್ವೀಕರಿಸುವ ಆರಂಭದ ದಿನ, ಮೇ 14 ನಾಮಪತ್ರ ಸಲ್ಲಿಕೆಯ ಕೊನೆಯ ದಿನ, ಮೇ 15ರಂದು ನಾಮಪತ್ರ ಪರಿಶೀಲನೆ, ಮೇ 17 ಉಮೇದುವಾರಿಕೆ ಹಿಂಪಡೆಯಲು ಕೊನೆಯ ದಿನ, ಮತದಾನದ ಅವಶ್ಯಕತೆ ಇದ್ದಲ್ಲಿ ಮೇ 25ರಂದು ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಅವಕಾಶ ನೀಡಲಾಗಿದೆ.
ಗ್ರಾಪಂಗಳಲ್ಲಿ ಸದಸ್ಯರ ರಾಜೀನಾಮೆ, ನಿಧನ ಇನ್ನಿತರ ಕಾರಣಗಳಿಂದ ಆಕಸ್ಮಿಕವಾಗಿ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪಚುನಾವಣೆ ನಡೆಸಲು ಜಿಲ್ಲಾಡಳಿತಕ್ಕೆ ಆಯೋಗದಿಂದ ಅಧಿಸೂಚನೆ ಬಂದಿದೆ. ಉಡುಪಿ ಜಿಲ್ಲೆಯ ಮೂರು ಗ್ರಾಪಂಗಳಿಗೆ ಮೇ 25ರಂದು ಚುನಾವಣೆ ನಡೆಯಲಿದೆ. ಕಾರಣಾಂತರದಿಂದ ಮರು ಚುನಾವಣೆಯ ಅಗತ್ಯತೆ ಇದ್ದಲ್ಲಿ ಮೇ 27ರಂದು ಬೆಳಗ್ಗೆ 7ರಿಂದ ಮರುಮತದಾನ ನಡೆಸಲಾಗುವುದು.
| ಡಾ. ಕೆ.ವಿದ್ಯಾಕುಮಾರಿ. ಉಡುಪಿ ಜಿಲ್ಲಾಧಿಕಾರಿ