ಗ್ರಾಕೂಸ್ ಸಂಘಟನೆ ಕಾರ್ವಿುಕರ ಪ್ರತಿಭಟನೆ

ಹುನಗುಂದ: ಗ್ರಾಪಂನಲ್ಲಿ ಎನ್​ಆರ್​ಇಜಿ ಸೇರಿ ವಿವಿಧ ಯೋಜನೆಯಡಿ ಕೆಲಸ ಮಾಡಿದ ಕೂಲಿ ಕಾರ್ವಿುಕರಿಗೆ ಕೂಲಿ ಕೊಡಬೇಕು ಗ್ರಾಮಕ್ಕೆ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಗ್ರಾಕೂಸ್ ಸಂಘಟನೆ ಕಾರ್ವಿುಕರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ಪಟ್ಟಣದ ಪ್ರವಾಸಿ ಮಂದಿರದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭಿಸಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕು ಪಂಚಾಯಿತಿ ಕಚೇರಿ ಎದುರು ಸೇರಿದರು. ಕಾರ್ವಿುಕ ಮುಖಂಡ ಮಹಾಂತೇಶ ಹೊಸಮನಿ, ಸರೋಜಾ ಭದ್ರಶೆಟ್ಟಿ ಮಾತನಾಡಿ, ಆರು ತಿಂಗಳ ಹಿಂದೆ ದುಡಿದ ಕೂಲಿ ನೀಡಿಲ್ಲ. ಮೂರು ತಿಂಗಳಿಂದ ಕೆಲಸವನ್ನೂ ನೀಡಿದೆ ಅಧಿಕಾರಿಗಳು ಕೂಲಿ ಕಾರ್ವಿುಕರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಇಂಜಿನಿಯರ್ ಹಾಗೂ ಮೇಲಧಿಕಾರಿಗಳು ಮಾಡಿದ ಕೆಲಸಕ್ಕಿಂತ ಕಡಿಮೆ ಅಳತೆ ರಿಪೋರ್ಟ್ ನೀಡುತ್ತಾರೆ. ಕೆಲಸ ಮಾಡುವಾಗ ಮೂಲಸೌಲಭ್ಯ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.

ಅರ್ಜಿ ಸಲ್ಲಿಸಿದ 16ದಿನದೊಳಗೆ ಕೆಲಸ ನೀಡಬೇಕೆಂಬ ಕಾನೂನಿದ್ದರೂ ಪಂಚಾಯಿತಿ ಸಿಬ್ಬಂದಿ ಕೆಲಸ ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಬಡವರು ಬದುಕು ಸಾಗಿಸಲು ಗುಳೆಹೋಗುವ ಪರಿಸ್ಥಿತಿ ನಿರ್ವಣವಾಗಿದೆ. ನಮ್ಮ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಸ್ಥಳಕ್ಕೆ ಜಿಪಂ ಸಿಇಒ ಬರಬೇಕೆಂದು ಪಟ್ಟು ಹಿಡಿದರು. ಶಂಕರ ಹೂಗಾರ, ತಾಪಂ ಅಧ್ಯಕ್ಷ ಅರವಿಂದ ಈಟಿ, ಮುರಳೀಧರ ದೇಶಪಾಂಡೆ, ಸಿಪಿಐ ಸಂಜಯ ಬಳಿಗಾರ, ನೂರಾರು ಕೂಲಿ ಕಾರ್ವಿುಕರು ಇದ್ದರು.