blank

ಸೂರ್ಯ ಗ್ರಹಣದ ನಂತರ ಈ ವಸ್ತುಗಳನ್ನು ದಾನ ಮಾಡಿ; ನಿಮ್ಮ ಅದೃಷ್ಟವೇ ಬದಲಾಗುತ್ತದೆ! Eclipse

blank
ಈ ವರ್ಷದ ಮೊದಲ ಸೂರ್ಯ ಗ್ರಹಣ ಇದೇ ತಿಂಗಳ 29 ಮಾರ್ಚ್​ರಂದು ಸಂಭವಿಸಲಿದೆ. ಇನ್ನೂ ಈ ಗ್ರಹಣ 
ಭಾರತದಲ್ಲಿ ಗೋಚರವಾಗುವುದಿಲ್ಲ. ಆದರೆ ಅದರ ಜ್ಯೋತಿಷ್ಯ ಪ್ರಭಾವ ಭಾರತದ ಮೇಲೆ ಬೀಳಲಿದೆ.
ಹಾಗಾಗಿ ಆ ದಿನ ಈ ಕೆಳಗೆ ತಿಳಿಸಿರುವ ಸೂಕ್ತ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ.

ಗ್ರಹಣದಿಂದ ಉಂಟಾಗುವ ದುಷ್ಪರಿಣಾಮಗಳನ್ನು ತಪ್ಪಿಸಲು ಗ್ರಹಣ ಮುಗಿದ ನಂತರ ಸ್ನಾನ ಮಾಡುವುದು, ದಾನ ಮಾಡುವುದು ಇತ್ಯಾದಿಗಳನ್ನು ಮಾಡುವ ಸಂಪ್ರದಾಯವಿದೆ. ಇಲ್ಲದಿದ್ದರೆ ನಕಾರಾತ್ಮಕ ಶಕ್ತಿ ಹೆಚ್ಚಾಗಿ, ಇದು ಜನರ ಜೀವನ ಮತ್ತು ಮಾನಸಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಿಂದೂ ಧರ್ಮದಲ್ಲಿ ಗ್ರಹಣವನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಚೈತ್ರ ಮಾಸದ ಶನಿ ಅಮವಾಸ್ಯೆಯಂದು ಈ ಗ್ರಹಣ ಸಂಭವಿಸಲಿದ್ದು, ಈ ಬಾರಿ ಸಂಭವಿಸುವ ಸೂರ್ಯಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ ಎನ್ನಲಾಗಿದೆ. ಆದರೂ ಸಹ ಗ್ರಹಣ ಗೋಚರಿಸಿದಾಗ ಮಾಡುತ್ತಿದ್ದಂತಹ ಕಾರ್ಯಗಳನ್ನು ತಪ್ಪದೇ ಮಾಡಬೇಕಾಗಿರುತ್ತದೆ.

blank

ಸೂರ್ಯಗ್ರಹಣದ ನಂತರ ಸ್ನಾನ ಮಾಡಿ, ದಾನ ಮಾಡಬೇಕಾಗಿರುತ್ತದೆ. ಯಾಕೆಂದರೆ ಈ ರೀತಿ ಮಾಡುವುದರಿಂದ ನಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚುತ್ತದೆ ಎಂದು ನಂಬಲಾಗಿದೆ. ಇದರಿಂದ ನಮ್ಮ ಪೂರ್ವಜರು ಸಂತೋಷವಾಗಿರುತ್ತಾರೆ ಹಾಗೂ ಸೂರ್ಯ ದೇವರ ಆಶೀರ್ವಾದ ನಮಗೆ ಸಿಗುತ್ತದೆ ಎನ್ನಲಾಗಿದೆ.

ಯಾವಾಗ ಸೂರ್ಯಗ್ರಹಣ ಸಂಭವಿಸುತ್ತದೆ?

ಇದೇ ಮಾರ್ಚ್​ 30 ರಿಂದ ಚೈತ್ರ ನವರಾತ್ರಿ ಆರಂಭವಾಗ್ತಾ ಇದೆ. ಇದಕ್ಕೂ ಒಂದು ದಿನ ಮೊದಲು ಅಂದರೆ ಮಾರ್ಚ್ 29 ರಂದು, ವರ್ಷದ ಮೊದಲ ಸೂರ್ಯಗ್ರಹಣ ನಡೆಯಲಿದೆ. ಇದೇ ದಿನ ಚೈತ್ರ ಮಾಸದ ಅಮಾವಾಸ್ಯೆ ಇರಲಿದೆ. ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ 29, ಮಾರ್ಚ್ ರಂದು ಮಧ್ಯಾಹ್ನ 2:20 ರಿಂದ ಸಂಜೆ 6:16 ರವರೆಗೆ ಸೂರ್ಯಗ್ರಹಣ ಸಂಭವಿಸುತ್ತದೆ ಎನ್ನಲಾಗಿದೆ. ಈ ಸೂರ್ಯಗ್ರಹಣವು ಮುಖ್ಯವಾಗಿ ಏಷ್ಯಾ, ಆಸ್ಟ್ರೇಲಿಯಾ, ಮತ್ತು ಹಿಂದೂ ಮಹಾಸಾಗರದಲ್ಲಿ ಸಂಭವಿಸಲಿದೆ.

ಗ್ರಹಣ ಮುಗಿದ ಮೇಲೆ ಏನು ಮಾಡಬೇಕು?

ಗೌರವ : ನೀವು ಹಲವು ವರ್ಷಗಳಿಂದ ಒಂದು ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದವರಾಗಿದ್ದು, ನಿಮಗೆ ನೀವು ಅಂದುಕೊಂಡಂತೆ ಪ್ರಮೋಷನ್​, ವೇತನ ಹೆಚ್ಚಳದ ಕೊರತೆ ಕಾಡುತ್ತಿದ್ದರೆ ಈ ಒಂದು ನಿಯಮ ಪಾಲಿಸಿ. ಸೂರ್ಯಗ್ರಹಣದ ನಂತರ ನಿಂಬೆಹಣ್ಣು ಹಾಗೂ ಹಣ್ಣಾದ ಪಪ್ಪಾಯಿಯನ್ನು ಕೆಲವರಿಗೆ ದಾನ ಮಾಡಬೇಕು. ಹೀಗೆ ಮಾಡುವುದರಿಂದ ನೀವು ನಿಮ್ಮ ಸ್ಥಾನದಿಂದ ಇನ್ನೂ ಉತ್ತಮ ಸ್ಥಾನಕ್ಕೆ ಏರುತ್ತೀರಿ. ಹಾಗೂ ನಿಮ್ಮನ್ನು ನೋಡಿದವರು ನಿಮಗೆ ಹೆಚ್ಚು ಗೌರವವನ್ನು ನೀಡುತ್ತಾರೆ.

ಸೂರ್ಯ ಗ್ರಹಣದ ನಂತರ ಈ ವಸ್ತುಗಳನ್ನು ದಾನ ಮಾಡಿ; ನಿಮ್ಮ ಅದೃಷ್ಟವೇ ಬದಲಾಗುತ್ತದೆ! Eclipse

ಗೆಲುವು : ನೀವೇನಾದರೂ ತಮ್ಮ ಜೀವನದಲ್ಲಿ ಬಹಳ ಪ್ರಯತ್ನ ಪಟ್ಟರೂ ಯಶಸ್ಸು ಕಾಣುತ್ತಿಲ್ಲವೆಂದರೆ ಈ ರೀತಿ ಮಾಡಿ. ಸೂರ್ಯಗ್ರಹಣದ ನಂತರ ಸ್ನಾನ ಮಾಡಿ ಪೂಜೆ ಮಾಡಿ. ಬಡವರಿಗೆ ಕಡಲೆ, ಗೋಧಿ, ಬೆಲ್ಲ ಹಾಗೂ ಇತರ ದ್ವಿದಳ ಧಾನ್ಯಗಳನ್ನು ದಾನ ಮಾಡಿ. ಹೀಗೆ ಮಾಡುವುದರಿಂದ ವ್ಯಕ್ತಿಯು ತನ್ನ ಎಲ್ಲಾ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾನೆ ಮತ್ತು ಸೂರ್ಯಗ್ರಹಣದ ಪರಿಣಾಮಗಳಿಂದ ರಕ್ಷಿಸಲ್ಪಡುತ್ತಾನೆ ಎಂದು ನಂಬಲಾಗಿದೆ.

ಹಣಕಾಸು ಸ್ಥಿತಿ: ಪ್ರತಿದಿನ ಕಷ್ಟಪಟ್ಟು ಕೆಲಸ ಮಾಡಿದರೂ ನೀವು ಆರ್ಥಿಕ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂದಾದರೆ ಈ ನಿಯಮ ಪಾಲಿಸಿ. ಗ್ರಹಣ ಮುಗಿದ ನಂತರ ಬಾಳೆಹಣ್ಣು, ಕಡಲೆ ಹಿಟ್ಟು, ಲಡ್ಡು ಮತ್ತು ಪೇಡವನ್ನು ದಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮಲಿರುವ ಎಲ್ಲಾ ನೋವು ಮತ್ತು ಸಂಕಟಗಳು ದೂರವಾಗಿ ನಿಮ್ಮಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ ಎಂದು ಪುರಾಣಗಳಲ್ಲಿ ವಿವರಿಸಲಾಗಿದೆ.
(ಏಜೆನ್ಸೀಸ್​)

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank