ಜಿಪಿಎಸ್ ಫೋಟೋ ಅಪ್ಲೋಡ್‌ಗೆ ಹರಸಾಹಸ

1 Min Read
ಜಿಪಿಎಸ್ ಫೋಟೋ ಅಪ್ಲೋಡ್‌ಗೆ ಹರಸಾಹಸ
ಉದ್ಯೋಗ ಖಾತ್ರಿ ಯೋಜನೆ ತಂತ್ರಾಂಶ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಗುಂಡೂರು ಗ್ರಾಮದಲ್ಲಿ ಕೂಲಿಕಾರರು ಜಿಪಂ ಹಾಗೂ ತಾಪಂ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.

ಸಿದ್ದಾಪುರ: ತಂತ್ರಾಂಶ ಸಮಸ್ಯೆ ನಿವಾರಣೆಗೆ ಆಗ್ರಹಿಸಿ ಗುಂಡೂರಿನ ನರೇಗಾ ಕೂಲಿ ಕಾರ್ಮಿಕರು ಜಿಪಂ ಹಾಗೂ ತಾಪಂ ಅಧಿಕಾರಿಗಳ ವಿರುದ್ಧ ಬುಧವಾರ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಟ್ರೆಡಿಷನಲ್‌ ವೇರ್‌ ಧರಿಸಿ ಫೋಟೋ ಶೂಟ್‌ ಮಾಡಿಸಿದ ‘ದಿ ಕೇರಳಾ ಸ್ಟೋರಿ’ ನಾಯಕಿ ಆದಾ ಶರ್ಮಾ

ನ್ಯಾಷನಲ್ ಮೊಬೈಲ್ ಮಾನಿಟರಿಂಗ್ ಸಿಸ್ಟಮ್ ಅಪ್ಲಿಕೇಶನ್ ಬಳಕೆಯಲ್ಲಿನ ಬದಲಾವಣೆಯಿಂದ ಕೂಲಿಕಾರರು ಪರದಾಡುವಂತಾಗಿದೆ. ಗ್ರಾಮದಿಂದ ಜೀರಾಳ ಕೆರೆಗೆ ಕೂಲಿ ಕೆಲಸಕ್ಕೆ ಬೆಳಗ್ಗೆ 9ಕ್ಕೆ ತೆರಳಿದ್ದು, ಮಧ್ಯಾಹ್ನ 12.30 ಗಂಟೆಯಾದರೂ ಜಿಪಿಎಸ್ ಫೋಟೋ ಅಪ್ಲೊಂಡಿಗ್ ಕಾರ್ಯ ಮುಗಿದಿಲ್ಲ. ಸಾವಿರಾರು ಜನರ ಜಿಪಿಎಸ್ ಮಾಡುವ ಕಾರ್ಯ ಇಬ್ಬರು ಸಿಬ್ಬಂದಿಗೆ ವಹಿಸಿದ್ದರಿಂದ ಕೆಲಸ ವಿಳಂಬವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಮೊದಲು ಮೇಟಿಗಳೇ ಜಿಪಿಎಸ್ ಫೋಟೋ ಅಪ್ಲೋಡ್ ಮಾಡುತ್ತಿದ್ದರು. ಈಗ ಮೇಟಿಗಳಿಗೆ ಅವಕಾಶ ನೀಡದೆ ಗ್ರಾಪಂ ಸಿಬ್ಬಂದಿಯೇ ಅಪ್ಲೊಡ್ ಮಾಡಬೇಕಿದೆ. ಎರಡ್ಮೂರು ಗಂಟೆಗೆ 100 ಜನರನ್ನು ಮಾತ್ರ ಜಿಪಿಎಸ್ ಮಾಡಲು ಸಾಧ್ಯವಾಗುತ್ತಿದೆ.

ಸಾವಿರಾರು ಜನರ ಜಿಪಿಎಸ್ ಮಾಡಲು ರಾತ್ರಿಯಾಗುತ್ತದೆ. ಜಿಪಂ ಅವೈಜ್ಞಾನಿಕ ತಂತ್ರಾಂಶದಿಂದ ಸಮಯಕ್ಕೆ ಸರಿಯಾಗಿ ಮನೆಗೆ ತೆರಳಲು ಆಗುತ್ತಿಲ್ಲ. ಕೆಲಸಕ್ಕೆ ಬಂದರೂ ಹಾಜಾರಾತಿ ವಿಳಂಬ ಆಗುತ್ತಿದೆ. ಕೆಲಸದ ಸ್ಥಳದಲ್ಲಿ ನೆರಳು, ಕುಡಿವ ನೀರಿನ ವ್ಯವಸ್ಥೆ ಇಲ್ಲ ಎಂದು ಅಸಮಾಧಾನ ಹೊರಹಾಕಿದರು.

ಈ ಮೊದಲು ಮೇಟಿಗಳು ನರೇಗಾ ಕೆಲಸಕ್ಕೆ ಬಾರದವರಿಗೂ ಹಾಜರಾತಿ ನೀಡಿದ್ದಾರೆ. ಇದು ಗಮನಕ್ಕೆ ಬಂದ ಮೇಲೆ ಸರ್ಕಾರಕ್ಕೆ ಈ ಬಗ್ಗೆ ತಿಳಿಸಲಾಗಿದೆ. ಹೀಗಾಗಿ ಪರಾದರ್ಶಕತೆಯಿಂದ ಕೂಡಿರಲು ಗ್ರಾಪಂ ಸಿಬ್ಬಂದಿಗೆ ಹಾಜರಾತಿ ಹಾಗೂ ಜಿಪಿಎಸ್ ಫೋಟೋ ಅಪ್ಲೋಡ್ ಮಾಡುವ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಅರ್ಧ ಅಥವಾ ಒಂದು ಗಂಟೆ ತಡವಾಗಬಹುದು.
ನರಸಪ್ಪ ತಾಪಂ ಇಒ, ಕಾರಟಗಿ

See also  ಹೀಗೆ ತಬ್ಬಿಕೊಂಡಿರುವ ಇವರ್ಯಾರು?; ಇವನಿದ್ರೆ ಬೇಸರ ಒಂದು ಕ್ಷಣವೂ ಹತ್ತಿರ ಸುಳಿಯಲ್ಲ ಅಂತಾರೆ ಈ ನಟಿ
Share This Article