ಹಾಸ್ಟೆಲ್, ವಸತಿ ಶಾಲೆ ಊಟಕ್ಕೆ ಜಿಪಿಎಸ್ ಕಣ್ಣು; ಪಾಲಕರಿಗಿದೆ ಮೇಲ್ವಿಚಾರಣೆ ಅಧಿಕಾರ, ದೂರುಗಳಿಗಾಗಿ 24/7 ಸಹಾಯವಾಣಿ ಸ್ಥಾಪನೆ

Midday Meals

ರಮೇಶ್ ಮೈಸೂರು ಬೆಂಗಳೂರು
ರಾಜ್ಯ ಸರ್ಕಾರದ ವಸತಿ ಶಾಲೆಗಳಲ್ಲಿ ಪ್ರವೇಶಕ್ಕೆ ಈಗ ಇನ್ನಿಲ್ಲದ ಬೇಡಿಕೆಯಿದೆ. ಪ್ರಸ್ತುತ ಎರಡೂ ಲಕ್ಷಕ್ಕೂ ಅಧಿಕ ಮಕ್ಕಳು ಈ ವಸತಿ ಶಾಲೆಗಳಲ್ಲಿ ಕಲಿಯುತ್ತಿದ್ದಾರೆ. ಇದರ ಜತೆಗೆ, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್​ಗಳಲ್ಲಿ ಇಷ್ಟೇ ಸಂಖ್ಯೆಯ ವಿದ್ಯಾರ್ಥಿಗಳಿದ್ದಾರೆ. ಇವುಗಳಲ್ಲಿ ಪ್ರವೇಶ ಪಡೆದಿರುವ ಮಕ್ಕಳ ಪಾಲಕರ ಚಿಂತೆಯೊಂದನ್ನು ದೂರವಾಗಿಸಲು ಇಲಾಖೆ ವಿಶೇಷ ಯೋಜನೆಯನ್ನು ಜಾರಿಗೊಳಿಸಿದೆ. ತಮ್ಮ ಮಕ್ಕಳು ನಿತ್ಯ ಯಾವ ಆಹಾರವನ್ನು ಸೇವಿಸುತ್ತಿದ್ದಾರೆ ಎಂಬುದನ್ನು ಪಾಲಕರು ತಾವಿದ್ದಲ್ಲಿಂದಲೇ ದಿನದ ಯಾವುದೇ ಸಮಯದಲ್ಲಿ ಪರಿಶೀಲಿಸಬಹುದು. ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ರಾತ್ರಿ ಊಟಕ್ಕೆ ಏನನ್ನು ನೀಡಲಾಗಿದೆ ಎಂಬುದನ್ನು ಆನ್​ಲೈನ್ ಮೂಲಕ ತಿಳಿಯಬಹುದು.

ಸರ್ಕಾರಿ ಶಾಲೆ ಹಾಗೂ ಹಾಸ್ಟೆಲ್​ಗಳಲ್ಲಿ ಮಕ್ಕಳಿಗೆ ಪೂರೈಸಲಾಗುವ ಊಟದ ಗುಣಮಟ್ಟದ ಮೇಲೆ ನಿಗಾ ಇಡಲು ಸಮಾಜ ಕಲ್ಯಾಣ ಇಲಾಖೆ ಪಾಲಕರಿಗೆ ಅಧಿಕಾರ ನೀಡಿದೆ. ಇದಕ್ಕಾಗಿ https://foodswdgok.in/kn ವೆಬ್​ಪೋರ್ಟಲ್ ತೆರೆದಿದ್ದು, ತಮ್ಮ ಮಕ್ಕಳು ಕಲಿಯುತ್ತಿರುವ ವಸತಿ ಶಾಲೆ ಅಥವಾ ಹಾಸ್ಟೆಲ್​ನಲ್ಲಿ ಈ ಹೊತ್ತು ಯಾವ ಆಹಾರ ನೀಡ ಲಾಗಿದೆ ಎಂಬ ಮಾಹಿತಿಯನ್ನು ಪಡೆಯಬಹುದು.

ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ಯೋಜನೆ ಜಾರಿಗೆ ತಂದಿದೆ. ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (ಕ್ರೖೆಸ್) ಶಾಲೆಗಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧೀನದ ಹಾಸ್ಟೆಲ್​ಗಳಿಗೆ ಈ ಯೋಜನೆ ಅನ್ವಯಿಸಲಾಗಿದೆ. ವಿದ್ಯಾರ್ಥಿಗಳ ಪೋಷಣೆ ಕುರಿತಾಗಿ ವಿವರಗಳನ್ನು ಒದಗಿಸುವುದಲ್ಲದೆ, ಸಾರ್ವಜನಿಕ ನಂಬಿಕೆ ಯನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿದೆ. ಜತೆಗೆ, ಊಟದ ಗುಣಮಟ್ಟವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುವ ಮೂಲಕ ಪಾರ ದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ಹೆಚ್ಚಿಸುವ ಆಶಯ ಹೊಂದಲಾಗಿದೆ.

ಎಕ್ಸ್ ಖಾತೆಯಲ್ಲಿ ಫೋಟೋ: ಆಯಾ ವಸತಿ ಶಾಲೆ ಹಾಗೂ ಹಾಸ್ಟೆಲ್​ಗಳು ತಮ್ಮ ಅಧಿಕೃತ ಎಕ್ಸ್ ಖಾತೆಗಳಲ್ಲಿ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿಯ ಊಟದ ಫೋಟೋಗಳನ್ನು ಹಂಚಿಕೊಳ್ಳುತ್ತವೆ. ವೆಬ್​ಪೋರ್ಟಲ್ ಮೂಲಕ ಅದರ ಮೇಲೆ ನಿಗಾ ವಹಿಸಲಾ ಗುತ್ತದೆ. ಈ ಮೂಲಕ ಪಾಲಕರು ಹಾಗೂ ಅಧಿಕಾರಿಗಳಿಗೆ ಯಾವ ಊಟ ನೀಡಲಾಗಿದೆ? ಆ ದಿನದ ಮೆನುವಿನಲ್ಲಿ ಏನಿತ್ತು? ಎಂಬುದರ ಜತೆಗೆ ಊಟದ ಗುಣಮಟ್ಟವನ್ನು ಟ್ರ್ಯಾಕ್ ಮಾಡುವುದು ಸುಲಭವಾಗುತ್ತದೆ. ಈ ಬಗ್ಗೆ ಯಾವುದೇ ದೂರುಗಳಿದ್ದರೂ ಸಮಾಜ ಕಲ್ಯಾಣ ಇಲಾಖೆಯ 24/7 ಸಹಾಯವಾಣಿ ಸಂಖ್ಯೆ 9482300400 ಸಂರ್ಪಸಬಹುದು.

234 ಕಡೆಗಳಲ್ಲಿ ಪ್ರಾಯೋಗಿಕ ಜಾರಿ: ಚಾಮರಾಜನಗರ, ಬೀದರ್, ರಾಯಚೂರು ಜಿಲ್ಲೆಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಚಾಮರಾಜನಗರದ 5 ತಾಲೂಕುಗಳ 79 ಹಾಸ್ಟೆಲ್, ವಸತಿ ಶಾಲೆಗಳು, ಬೀದರ್​ನ 5 ತಾಲೂಕಿನ 71 ಕಡೆಗಳಲ್ಲಿ ಹಾಗೂ ರಾಯಚೂರು ಜಿಲ್ಲೆಯ ಒಟ್ಟು 5 ತಾಲೂಕಿನ 84 ವಿದ್ಯಾರ್ಥಿ ನಿಲಯ ಹಾಗೂ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಒಟ್ಟು 234 ಕಡೆಗಳಲ್ಲಿ ಮೇಲ್ವಿಚಾರಣೆಗೆ ಅವಕಾಶ ನೀಡಲಾಗಿದೆ

ಜಿಪಿಎಸ್ ಕ್ಯಾಮರಾ ಬಳಕೆ: ಊಟ, ತಿಂಡಿಯ ಫೋಟೋ ಸೆರೆ ಹಿಡಿಯುವಲ್ಲಿ ಯಾವುದೇ ಲೋಪ ವಾಗದಿರಲು ಹಾಗೂ ಅಕ್ರಮ ಮಾರ್ಗಗಳನ್ನು ಅನುಸರಿಸದಿರಲು ಜಿಪಿಎಸ್ ಕ್ಯಾಮರಾಗಳನ್ನು ಬಳಕೆ ಮಾಡಲಾಗುತ್ತಿದೆ. ಸಮಯ ಹಾಗೂ ಯಾವ ಸ್ಥಳದಲ್ಲಿ ಫೋಟೋ ಸೆರೆ ಹಿಡಿಯಲಾಗಿದೆ ಎಂಬುದನ್ನು ಇವುಗಳು ನಿಖರವಾಗಿ ತಿಳಿಸುತ್ತವೆ. ಆ ಫೋಟೋಗಳನ್ನೇ ಎಕ್ಸ್ ಖಾತೆಯಲ್ಲಿ ಎಲ್ಲ ವಿವರಗಳ ಸಮೇತ ಅಪ್​ಲೋಡ್ ಮಾಡಲಾಗುತ್ತದೆ. ಇದರ ಜತೆಗೆ ವಿದ್ಯಾರ್ಥಿಗಳಿಗೆ ಊಟ ಬಡಿಸುವುದು, ವಿದ್ಯಾರ್ಥಿಗಳು ಊಟ ಮಾಡುತ್ತಿರುವುದು ಹಾಗೂ ಅಧಿಕಾರಿ ಹಾಗೂ ಸಿಬ್ಬಂದಿ ಸ್ಥಳದಲ್ಲಿರುವುದನ್ನು ಇದು ಖಚಿತಪಡಿಸುತ್ತದೆ.

ಸುವ್ಯವಸ್ಥಿತ ಪ್ರಕ್ರಿಯೆ

  • ಉತ್ತಮ ಗುಣಮಟ್ಟದ ಕಚ್ಚಾ ವಸ್ತುಗಳ ಸಂಗ್ರಹ
  • ಪ್ರಮಾಣಿತ ಅಡುಗೆ ವಿಧಾನಗಳು ಮತ್ತು ಪ್ರಕ್ರಿಯೆಗಳು
  • ಆರೋಗ್ಯಕರ ಆಹಾರ ತಯಾರಿಕೆ ಅಭ್ಯಾಸಗಳು
  • ಗುಣಮಟ್ಟದ ತಪಾಸಣೆ ಮತ್ತು ಆಹಾರ ಪರೀಕ್ಷೆ

ನಮ್ಮ ಇಲಾಖೆಯ ಶಾಲೆಗಳು ಮತ್ತು ಹಾಸ್ಟೆಲ್​ಗಳಲ್ಲಿನ ಮಕ್ಕಳ ಆರೋಗ್ಯವು ನಮ್ಮ ಮೊದಲ ಆದ್ಯತೆಯಾಗಿದೆ. ಅವರು ಸ್ವೀಕರಿಸುವ ಆಹಾರದ ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ಯಾವುದೇ ರಾಜಿ ಇಲ್ಲ. ಅವರ ಯೋಗಕ್ಷೇಮವನ್ನು ಉತ್ತೇಜಿಸುತ್ತೇವೆ.

| ಡಾ.ಎಚ್.ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವ

Border-Gavaskar ಟ್ರೋಫಿಯ ಮೂರನೇ ಪಂದ್ಯಕ್ಕೆ ಎದುರಾಯ್ತು ಮಳೆ ಭೀತಿ; ಗಾಬಾ ಪಿಚ್​ ಯಾರಿಗೆ ಸಹಕಾರಿ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Rohit Sharma ಕ್ರಿಕೆಟ್​ನಲ್ಲಿ ಹೆಚ್ಚು ದಿನ ಆಡುವ ಸಾಧ್ಯತೆಗಳಿಲ್ಲ; ಹಿಟ್​ಮ್ಯಾನ್​ ಕುರಿತು ಶಾಕಿಂಗ್​​ ಹೇಳಿಕೆ ನೀಡಿದ ಮಾಜಿ ಕ್ರಿಕೆಟಿಗ

Share This Article

ಗ್ಯಾಸ್​ಗೆ ವಾಸನೆಯೇ ಇಲ್ಲ! ಹೀಗಿದ್ದರೂ​ ಸಿಲಿಂಡರ್​ ಲೀಕ್​ ಆಗ್ತಿದೆ ಅಂತ ತಿಳಿಸೋದು ಈ ಕೆಮಿಕಲ್​ ಮಾತ್ರ​ | Gas Leakage

Gas Leakage: ಇಂದು ಪ್ರತಿಯೊಬ್ಬರ ಮನೆಯಲ್ಲಿಯೂ ಎಲ್​ಪಿಜಿ ಗ್ಯಾಸ್​ ಸಿಲಿಂಡರ್​ಗಳನ್ನು ಬಳಕೆ ಮಾಡಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ…

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …