ನಟಿ ಶ್ರುತಿ ಪುತ್ರಿಗೆ ಅಪ್ಪ ಎಸ್​.ಮಹೇಂದರ್​ ನೆನಪು: ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿ ಮಿಸ್​ ಯೂ ಎಂದ ಗೌರಿ

ಬೆಂಗಳೂರು: ಹಿರಿಯ ನಟಿ ಶ್ರುತಿ ಮಗಳು ಗೌರಿ ತಮ್ಮ ತಂದೆ ಮಹೇಂದರ್​ ಅವರಿಗೆ ಜನ್ಮದಿನದ ಶುಭಾಶಯ ಕೋರುವ ಮೂಲಕ ಭಾವನಾತ್ಮಕವಾಗಿ ಪೋಸ್ಟ್​ ಹಾಕಿದ್ದಾರೆ.

ಶ್ರುತಿ 1998ರಲ್ಲಿ ನಿರ್ದೇಶಕ ಎಸ್​. ಮಹೇಂದರ್​ ಅವರನ್ನು ವಿವಾಹವಾಗಿದ್ದರು. ನಂತರ 2009ರಲ್ಲಿ ಇವರಿಬ್ಬರೂ ಪರಸ್ಪರ ಒಪ್ಪಿ ವಿಚ್ಚೇದನ ಪಡೆಯಲು ನಿರ್ಧರಿಸಿದ್ದರು. ನಂತರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಡಿವೋರ್ಸ್​ ಪಡೆದಿದ್ದಾರೆ. ಸದ್ಯ ಶ್ರುತಿಯವರು ತಮ್ಮ ಮಗಳು ಗೌರಿಯವರೊಂದಿಗೆ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ. ಶ್ರುತಿ ರಾಜಕೀಯದಲ್ಲೂ ತೊಡಗಿಸಿಕೊಂಡಿದ್ದಾರೆ.

ಈಗ ಮಗಳು ಗೌರಿ ತಮ್ಮ ಇನ್ಸ್ಟಾಗ್ರಾಂನಲ್ಲಿ ತಂದೆಯ ಜನ್ಮದಿನದಂದು ಹಾಕಿದ ಪೋಸ್ಟ್​ ಮನಮಿಡಿಯುವಂತಿದೆ. ತಾವು ಚಿಕ್ಕವರಿದ್ದಾಗ ಅಪ್ಪನೊಂದಿಗೆ ಇರುವ ಬ್ಲ್ಯಾಕ್ ಆ್ಯಂಡ್​ ವೈಟ್​ ಫೋಟೊ ಶೇರ್​ ಮಾಡಿರುವ ಗೌರಿ, ಅಪ್ಪಾ ನಿಮಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಯಾವಾಗಲೂ ನೀವೇ ನನ್ನ ಮೊದಲ ಪ್ರೀತಿ. ನನ್ನ ಅಚ್ಚುಮೆಚ್ಚಿನ ಹೀರೋ. ನಾನು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು, ನಿಮ್ಮೊಂದಿಗೆ ಹೊಂದಿರುವ ಬಂಧವನ್ನು ಯಾರಿಂದಲೂ ಅರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ನಾನು ನಿಮ್ಮನ್ನು ಎಷ್ಟು ಮಿಸ್​ ಮಾಡಿಕೊಳ್ಳುತ್ತಿದ್ದೇನೆಂದು ಶಬ್ದಗಳಲ್ಲಿ ವಿವರಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮೊಂದಿಗೆ ಕೆಲ ಸಮಯ ಕಳೆಯಲು ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ.

ಇದನ್ನು ನೋಡಿದ ಗೌರಿಯ ಅನೇಕ ಫಾಲೋವರ್ಸ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಂಗೆ ಮಗಳ ಬಾಂಧವ್ಯದ ಬಗ್ಗೆ ಕಾಮೆಂಟ್​ ಮಾಡಿದ್ದಾರೆ.

ಮಹೇಂದರ್​ ಅವರು ಶ್ರುತಿಯಿಂದ ವಿಚ್ಚೇದನ ಪಡೆದ ಬಳಿಕ ಯಶೋದಾ ಎಂಬುವರನ್ನು ಮದುವೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗೌರಿ ಕೂಡ ಚಿತ್ರರಂಗ ಪ್ರವೇಶ ಮಾಡಲಿದ್ದಾರೆ ಎಂದು ಸುದ್ದಿಗಳು ಹರಡಿತ್ತು. ಆದರೆ ಅಧಿಕೃತವಾಗಿ ಇನ್ನೂ ಸ್ಪಷ್ಟವಾಗಿಲ್ಲ. ನಟಿ ಶ್ರುತಿ ಕೂಡ ಎಲ್ಲಿಯೂ ಈ ಬಗ್ಗೆ ತಿಳಿಸಿಲ್ಲ.

Leave a Reply

Your email address will not be published. Required fields are marked *