GOWRI FILM REVIEW: ಗುರಿ ತಲುಪಲು ಹೊರಟ ‘ಗೌರಿ’ ಕಥೆ

ಶಿವ ಸ್ಥಾವರಮಠ

ಚಿತ್ರ: ಗೌರಿ
ನಿರ್ದೇಶನ: ಇಂದ್ರಜಿತ್ ಲಂಕೇಶ್
ತಾರಾಗಣ: ಸಮರ್ಜಿತ್ ಲಂಕೇಶ್, ಸಾನ್ಯಾ ಅಯ್ಯರ್, ಮಾನಸಿ ಸುಧೀರ್, ಸಂಪತ್ ಮೈತ್ರೇಯ, ಚಂದುಗೌಡ ಮತ್ತಿತರರು.
ರೇಟಿಂಗ್: 3

‘ಗುರಿ ಮುಟ್ಟದಿರುವಾಗ ದಾರಿ ಬದಲಾಯಿಸಬೇಕೆ ವಿನಾ, ಗುರಿಯನ್ನಲ್ಲ’ ಎನ್ನುತ್ತಾನೆ ಗೌರಿ. ಇದೊಂದೇ ಡೈಲಾಗ್ ಸಾಕು ಇಡೀ ಚಿತ್ರದ ಗುರಿಯೇನು ಎಂಬುದನ್ನು ತಿಳಿಸಲು. ಮನುಷ್ಯನಾದವನು ಹುಟ್ಟಿದ ಮೇಲೆ ಎಷ್ಟೇ ಕಷ್ಟವಿದ್ದರೂ ಅದನ್ನು ಮೀರಿ ಗುರಿ ಸಾಧಿಸಬೇಕು. ಅದೇ ಜೀವನದ ಸಾರ್ಥಕ ಎನ್ನುವುದನ್ನು ನಿರ್ದೇಶಕ ಇಂದ್ರಜಿತ್ ಲಂಕೇಶ್ ‘ಗೌರಿ’ ಮೂಲಕ ನಿರೂಪಿಸಿದ್ದಾರೆ

ಹಳ್ಳಿಯ ಹುಡುಗ ಗೌರಿಗೆ (ಸಮರ್ಜಿತ್), ಸಂಗೀತದಲ್ಲಿ ಅಸಾಧಾರಣ ಸಾಧನೆ ಮಾಡಬೇಕು ಎಂಬ ತುಡಿತ. ಆದರೆ, ಆತನಿಗೆ ಸರಿಯಾಗಿ ಕಿವಿ ಕೇಳಿಸುತ್ತಿರುವುದಿಲ್ಲ. ಹೀಗಾಗಿ ಸಾಕಷ್ಟು ಅವಮಾನಗಳನ್ನು ಎದುರಿಸುತ್ತಾನೆ. ಅಂದುಕೊಂಡದ್ದನ್ನು ಸಾಧಿಸಬೇಕು ಎಂದು ಕೊನೆಗೆ ತಾಯಿ ಆಶೀರ್ವಾದದೊಂದಿಗೆ ಸಿಟಿ ತಲುಪುತ್ತಾನೆ. ಆಗಷ್ಟೇ ಓದು ಮುಗಿಸಿರುವ ಸಮಂತಾ (ಸಾನ್ಯಾ ಅಯ್ಯರ್), ತೀರಿಕೊಂಡ ಗೆಳೆಯನ ನೆನಪಿಗೆ ಅಂಗವಿಕಲರನ್ನು ಕೂಡಿಸಿ ಸಂಗೀತ ತಂಡ ಕಟ್ಟಲು ಮುಂದಾಗುತ್ತಾಳೆ. ಆಕೆಗೆ ಒಬ್ಬ ಗಾಯಕನ ಅವಶ್ಯಕತೆ ಇರುತ್ತದೆ. ಆಗ ಸಮಂತಾಗೆ ಗೌರಿ ಸಿಗುತ್ತಾನೆ. ಮುಂದಿನ ಕಥೆಯನ್ನು ಚಿತ್ರಮಂದಿರದಲ್ಲಿ ನೋಡಿದರೆ ಚಂದ.

‘ಗೌರಿ’ ಮೂಲಕ ನಿರ್ದೇಶಕ ಇಂದ್ರಜಿತ್ ಸರಳ ಕಥೆ ಹೇಳಿದ್ದಾರೆ. ಕಥೆಯ ಮೊದಲರ್ಧ ಪಾತ್ರ ಪರಿಚಯಕ್ಕೆ ಸೀಮಿತ. ನೈಜ ಕಥೆ ತೆರೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಇಲ್ಲಿಯೇ ಮುಖ್ಯಕಥೆ, ನಾಲ್ಕು ಸಾಂಗ್, ಸಾಹಸ ದೃಶ್ಯಗಳನ್ನು ತೋರಿಸಲಾಗಿದೆ. ಒಂದು ಕಥೆಯಲ್ಲೇ ಹಲವು ಉಪಕಥೆಗಳಿವೆ. ಅವುಗಳಿಗೆ ಸಮರ್ಪಕವಾಗಿ ಪೂರ್ಣತೆ ಕೊಟ್ಟಿದ್ದರೆ ಸಿನಿಮಾ ಮತ್ತಷ್ಟು ಆಪ್ತವೆನಿಸುತ್ತಿತ್ತು. ಕೆಲವೆಡೆ ಹಿರೋಯಿಸಂಗೆ ಹೆಚ್ಚು ಒತ್ತು ನೀಡಲಾಗಿದೆ ಅಂತನಿಸಿದರೂ, ಅದರ ಜತೆ ಕಥೆಯನ್ನೂ ಸಮದೂಗಿಸಿದ್ದಾರೆ.

ಡಾನ್ಸ್ ಮತ್ತು ೈಟ್‌ಗಳಲ್ಲಿ ಸಮರ್ಜಿತ್ ಲಂಕೇಶ್ ಮಿಂಚಿದ್ದಾರೆ. ನಟನೆಯಲ್ಲಿ ಮತ್ತಷ್ಟು ಪಳಗಿದರೆ ಸ್ಯಾಂಡಲ್‌ವುಡ್‌ನಲ್ಲಿ ಉತ್ತಮ ಭವಿಷ್ಯವಿದೆ. ಸಾನ್ಯಾ ಅಯ್ಯರ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಮಾನಸಿ ಸುಧೀರ್, ಸಂಪತ್ ಮೈತ್ರೇಯ, ನವಾಜ್, ಗಿಲ್ಲಿನಟ ಗಮನಸೆಳೆಯುತ್ತಾರೆ. ಚಿತ್ರದಲ್ಲಿ ಅಂಗವಿಕಲ ಕಲಾವಿದರನ್ನು ಬಳಸಿಕೊಂಡಿರುವುದು ಶ್ಲಾಘನಾರ್ಹ. ಚಿತ್ರದಲ್ಲಿ ಸಂಗೀತ, ಸಂಭಾಷಣೆ ಚೆನ್ನಾಗಿ ಮೂಡಿಬಂದಿದೆ. ‘ಟೈಮ್ ಬರುತ್ತೆ’ ಸಾಂಗ್ ಹೆಜ್ಜೆ ಹಾಕಿಸದೆ ಬಿಡದು. ಛಾಯಾಗ್ರಹಣದ ಮೂಲಕ ಕೃಷ್ಣಕುಮಾರ್ ಹಳ್ಳಿ ವಾತಾವರಣ ನಿರ್ಮಿಸಿದ್ದಾರೆ.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…