More

    ಸರ್ಕಾರದ ಸಾಧನೆ ಮಾಹಿತಿ ಅನಾವರಣ

    ಹುಬ್ಬಳ್ಳಿ: ಸರ್ಕಾರದ ನೂರು ದಿನದ ಸಾಧನೆ ಮತ್ತು ನೆರೆ ಸಂತ್ರಸ್ತರ ಪರಿಹಾರಕ್ಕಾಗಿ ಕೈಗೊಂಡ ಕ್ರಮಗಳನ್ನು ಪ್ರದರ್ಶಿಸುವ ಮೂಲಕ ಜನರಿಗೆ ಮಾಹಿತಿ ತಲುಪಿಸುವ ಕಾರ್ಯ ಉತ್ತಮವಾಗಿದೆ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ವಿ.ಎಸ್.ಪಾಟೀಲ್ ಹೇಳಿದರು.

    ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ನಗರದ ಹೊಸ ಬಸ್ ನಿಲ್ದಾಣದಲ್ಲಿ ಏರ್ಪಡಿಸಿರುವ ರಾಜ್ಯ ಸರ್ಕಾರದ ನೂರು ದಿನಗಳ ಸಾಧನೆ ಮತ್ತು ಸರ್ಕಾರದ ಜನಪರ ಯೋಜನೆಗಳನ್ನು ಬಿಂಬಿಸುವ ಮೂರು ದಿನಗಳ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    22 ಜಿಲ್ಲೆಗಳ 103 ತಾಲೂಕುಗಳ ಪ್ರವಾಹ ಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರ 1200 ಕೋಟಿ ರೂ. ಪರಿಹಾರ ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರದಿಂದ 6,450 ಕೋಟಿ ರೂ. ಪರಿಹಾರ ಕಾರ್ಯಗಳಿಗೆ ಮಂಜೂರು ಮಾಡಿದ್ದು, ಸಂತ್ರಸ್ತರ ನೋವಿಗೆ ಸರ್ಕಾರ ಮಿಡಿದಿದೆ ಎಂದು ಹೇಳಿದರು.

    ಸಂಪರ್ಕ ಕಳೆದುಕೊಂಡಿದ್ದ 178 ರಸ್ತೆ ಹಾಗೂ ಸೇತುವೆಗಳ ಪೈಕಿ 142 ರಸ್ತೆ ಸಂಚಾರ ಮರು ನಿರ್ಮಾಣ ಕೈಗೊಂಡಿದೆ. ಬೆಳೆ ನಷ್ಟ ಅನುಭವಿಸಿದ್ದ 1,38,725 ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದರು.

    ವಾಕರಾರಸಾ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಜಿಲ್ಲಾಧಿಕಾರಿ ದೀಪಾ ಚೋಳನ್ ಅವರು ಪ್ರಗತಿ ವರದಿ ಬಿಡುಗಡೆ ಮಾಡಿದರು. ವಾಕರಸಾಸಂ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಭದ್ರತಾ ಜಾಗೃತಿ ಅಧಿಕಾರಿ ರಾಜೇಶ ಹುದ್ದಾರ, ನಿತಿನ್ ಹೆಗಡೆ, ಪಿ.ವೈ. ನಾಯಕ, ಜಯಕರಶೆಟ್ಟಿ, ನಾರಾಯಣಪ್ಪ, ಎಸ್.ಎಂ. ದೊಡ್ಡ ಲಿಂಗಣ್ಣವರ, ವಿಭಾಗೀಯ ನಿಯತ್ರಣಾಧಿಕಾರಿ ರಾಮನಗೌಡ್ರ, ಡಿ.ಬಿ. ಕೆಳಗೇರಿ, ನಿಯಂತ್ರಣಾಧಿಕಾರಿ ಅಶೋಕ ಪಾಟೀಲ, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ ಡೊಳ್ಳಿನ, ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್ ಪ್ರಕಾಶ ನಾಶಿ, ವಾರ್ತಾ ಇಲಾಖೆಯ ವಿನೋದಕುಮಾರ ಭಗವತಿ, ಸಿ.ಬಿ. ಭೋವಿ ಇತರರು ಇದ್ದರು.

    ಜನಪದ ಗೀತೆ ಪ್ರದರ್ಶನ: ತಂತ್ರ ಆರ್ಗನೈಜೇಶನ್ ಹಾಗೂ ಬಫೋ ವೆಂಚರ್ಸ್ ಸಂಸ್ಥೆಗಳ ಕಲಾವಿದೆಯರು, ಸರ್ಕಾರದ ಯೋಜನೆಗಳ ಕುರಿತು ಆಕರ್ಷಕ ಬೀದಿ ನಾಟಕ ಮತ್ತು ಜನಜಾಗೃತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts