ಮಳೆ ಹಾನಿ ಸಂತ್ರಸ್ತರೊಂದಿಗೆ ಸರ್ಕಾರವಿದೆ: ಮಧು

Madhu Bangarappa

ಶಿವಮೊಗ್ಗ: ಮಳೆ ಹಾನಿಯಿಂದ ರಾಜ್ಯದ ವಿವಿಧೆಡೆ ಸಾವಿರಾರು ಮಂದಿ ನಷ್ಟ ಅನುಭವಿಸಿದ್ದಾರೆ. ಸಂತ್ರಸ್ತರ ನೆರವಿಗೆ ಸರ್ಕಾರ ಸದಾ ಬದ್ಧವಿದೆ. ನಾವು ನೊಂದವರ ಜತೆಗಿದ್ದೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಮಳೆಯಿಂದಾಗಿ ಎಲ್ಲ ಜಲಾಶಯಗಳು ಭರ್ತಿಯಾಗಿವೆ. ಕೆರೆಕಟ್ಟೆಗಳು ತುಂಬಿವೆ. ರೈತರು ಹರ್ಷಿತರಾಗಿದ್ದಾರೆ. ಇದರ ಜತೆಗೆ ಸಾವು ನೋವುಗಳು ಸಂಭವಿಸಿವೆ. ಅನೇಕ ಕಡೆ ಗುಡ್ಡಗಳು ಕುಸಿದಿವೆ. ಬೆಳೆ ಹಾನಿಯಾಗಿದೆ. ಹಲವು ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಶಿವಮೊಗ್ಗ ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ಮಲೆನಾಡು ಭಾಗಗಳೂ ಸೇರಿದಂತೆ ಭದ್ರಾವತಿಯಲ್ಲೂ ಸಾಕಷ್ಟು ಹಾನಿಯಾಗಿದೆ. ಜಿಲ್ಲಾಧಿಕಾರಿ ಸೇರಿದಂತೆ ಆಯಾ ಭಾಗದ ಅಧಿಕಾರಿಗಳು ಕ್ರಿಯಾಶೀಲವಾಗಿ ಕೆಲಸ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಮಳೆಹಾನಿಯಿಂದ ಜಿಲ್ಲೆಯಲ್ಲಿ ಅನೇಕ ಮನೆಗಳಿಗೆ ಸಂಪೂರ್ಣ ಇಲ್ಲವೇ ಭಾಗಶಃ ಹಾನಿಯಾಗಿದೆ. ಈ ಹಿಂದೆ ಮನೆ ಹಾನಿಗೆ ಬಿಜೆಪಿ ಸರ್ಕಾರ 5 ಲಕ್ಷ ರೂ. ನೀಡಿತ್ತು. ಇದನ್ನು ಹಲವರು ದುರುಪಯೋಗ ಪಡಿಸಿಕೊಂಡಿದ್ದರು. ಅದು ಗಮನಕ್ಕೆ ಬಂದಿದೆ. ಈ ಬಾರಿ ಹಾನಿಯಾದ ಪ್ರತಿ ಮನೆಗೆ 1.20 ಲಕ್ಷ ರೂ. ನೀಡಲು ತೀರ್ಮಾನಿಸಿದ್ದೇವೆ. ತುರ್ತು ಜೀವನ ನಿರ್ವಹಣೆಗೆ ಐದು ಸಾವಿರ ರೂ. ನೀಡಲಾಗುವುದು. ಕೇಂದ್ರ ಸರ್ಕಾರ 6,500 ರೂ. ಜೀವನ ನಿರ್ವಹಣೆಗೆಂದು ನೀಡುತ್ತದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ವಿವಿಧ ವಸತಿ ಯೋಜನೆಯಡಿ ಸರ್ಕಾರ ಅಲ್ಲಿಯೇ ಮನೆ ನಿರ್ಮಿಸಿಕೊಡಲಿದೆ ಎಂದು ಹೇಳಿದರು.

Share This Article

ತೂಕ ಇಳಿಸಿಕೊಳ್ಳಬೇಕಾ? ಸುಮ್ಮನೆ ಈ ಹಣ್ಣು, ಸೊಪ್ಪಿನ ವಾಸನೆಯನ್ನು ಒಮ್ಮೆ ಉಸಿರಾಡಿದ್ರೆ ಸಾಕು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…

ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಎಳನೀರು ಕುಡಿದು ನೋಡಿ; ಆರೋಗ್ಯ ಸಮಸ್ಯೆಗೆ ಸಿಗುತ್ತೆ ಪರಿಹಾರ …

 ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…