More

    ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿ; ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಹೇಳಿಕೆ


    ಬೆಳಗಾವಿ: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣಕ್ಕೆ ಪಾಲಕರು, ಶಿಕ್ಷಕರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿಧಾನಪರಿಷತ್‌ನ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
    ಬೆಳಗಾವಿ ತಾಲೂಕಿನ ಬೆಂಡಿಗೇರಿ ಗ್ರಾಮದ ಸರ್ಕಾರಿ ಮಾದರಿ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಪಾಲಕರು ತಮ್ಮ ಮಕ್ಕಳನ್ನು ಪ್ರೀತಿಸಿ, ಪ್ರೋತ್ಸಾಹಿಸಿ ಅವರಿಗೆ ಒಳ್ಳೆಯ ಮಾರ್ಗದರ್ಶನ ನೀಡುವುದರೊಂದಿಗೆ ಶಾಲೆಯ ತರಗತಿಗಳನ್ನು ತಪ್ಪಿಸದಂತೆ ಜವಾಬ್ದಾರಿ ವಹಿಸಬೇಕು. ಜತೆಗೆ ಅವರ ಆಟ ಪಾಠದಲ್ಲಿ ಸ್ನೇಹಿತರಾಗಿ ವರ್ತಿಸುವ ಮೂಲಕ ಆಧ್ಯಾತ್ಮದ ಕಡೆಗೂ ಒಲವು ತೋರಿಸಬೇಕು ಎಂದರು.
    ಇದೇ ವೇಳೆ, ನೂತನವಾಗಿ ನಿರ್ಮಾಣಗೊಂಡ  ಶಾಲಾ ಕಟ್ಟಡವನ್ನು ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.   ಡಿಡಿಪಿಐ ಬಸವರಾಜ ನಾಲತ್ವಾಡ, ಎಸ್.ಡಿ. ಗಂಜಿ, ಬಿ.ಎಚ್. ಮೆಲನಟ್ಟಿ, ಲಕ್ಷ್ಮಣರಾವ್ ಯಕ್ಕುಂಡಿ, ಎ.ವೈ. ಬೆಂಡಿಗೇರಿ, ವೀರೇಂದ್ರ ಮೇಳೆದ್, ನೀಲವ್ವ ಹುಲಿಕವಿ, ಸಿದ್ದು ಹಾವಣ್ಣವರ, ಮುರುಸಿದ್ದ ಬಾಳೇಕುಂದ್ರಿ, ಪ್ರಕಾಶ ಪಾಟೀಲ, ರವಿ ಮೇಳೆದ್, ಬಸವ್ವ ಚೌಹ್ಹಾಣ, ಶಾಲಾ ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts