More

    ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳಿಗೆ ಉಸಿರು ತುಂಬಿ!

    ದಾವಣಗೆರೆ: ರಾಜ್ಯದಲ್ಲಿ ಸರಿಸುಮಾರು 3 ಸಾವಿರ ಸರ್ಕಾರಿ ಆಸ್ಪತ್ರೆಗಳಿದ್ದು, ನಿರ್ವಹಣೆ ಕೊರತೆ ಕಾರಣ ಬಹುತೇಕ ಆಸ್ಪತ್ರೆಗಳಲ್ಲಿನ ಉಪಕರಣಗಳು ಜೀವ ಕಳೆದುಕೊಂಡಿವೆ. ಹೀಗಾಗಿ ಸಾವಿರಾರು ರೋಗಿಗಳು ಸೂಕ್ತ ಚಿಕಿತ್ಸೆ ಸಿಗದೆ ಪರದಾಡುವಂತಾಗಿದೆ.

    2015-16ನೇ ಸಾಲಿನ ಹಾಗೂ ಅದರ ಹಿಂದಿನ ವರ್ಷಗಳ ಅವಧಿಯ ವೈದ್ಯಕೀಯ ಉಪಕರಣಗಳಿಗೆ ಸ್ಥಳೀಯವಾಗಿ ಎಎಂಸಿ ನೀಡುವುದನ್ನು ಸ್ಥಗಿತಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಳೆದ ಅಕ್ಟೋಬರ್​ನಲ್ಲಿ ಸುತ್ತೋಲೆ ಹೊರಡಿಸಿದೆ. ಜೀವವೈದ್ಯಕೀಯ ಉಪಕರಣಗಳ ನಿರ್ವಹಣೆಯನ್ನು ಟಿವಿಎಸ್ ಲಾಜಿಸ್ಟಿಕ್ಸ್ ಸರ್ವೀಸ್​ನವರಿಗೆ ನೀಡಲಾಗಿದ್ದು, ಆ ಸಂಸ್ಥೆಯು ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿರುವ ಉಪಕರಣಗಳನ್ನು ಸಿಎಂಸಿ ಗುತ್ತಿಗೆ ಮೂಲಕ ನಿರ್ವಹಣೆ ಮಾಡುತ್ತಿದೆ. ಗುತ್ತಿಗೆ ಪಡೆದಿರುವ ಸಂಸ್ಥೆ ಸಿಬ್ಬಂದಿ ಉಪಕರಣಗಳನ್ನು ಟ್ಯಾಗ್ ಮತ್ತು ಮ್ಯಾಪಿಂಗ್ ಮಾಡಿ ಹೋಗಿದ್ದನ್ನು ಬಿಟ್ಟರೆ ಮತ್ತೆ ಇತ್ತ ತಲೆಹಾಕಿಲ್ಲ. ಉಪಕರಣಗಳ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಬಾರಿ ಸಂರ್ಪಸಿದರೂ ಬಂದಿಲ್ಲ ಎಂಬ ಆರೋಪ ಕೇಳಿಬಂದಿದೆ.

    ಮೂಲೆಗೆ ಸೇರಿದ ಯಂತ್ರಗಳು: ಇಕೋ ಕಾರ್ಡಿಯೋಗ್ರಾಂ, ರೆಫ್ರಿಜರೇಟೆಡ್ ಸೆಂಟ್ರಿ ಫ್ಯೂಜ್ ಯಂತ್ರ, ಹಿಮೋಗ್ಲೋಬಿನ್ ಎಚ್​ಬಿ 1 ಎಸಿ, ಒಟಿ ಟೇಬಲ್ ಗೈನಿಕ್, ಇನ್​ಸ್ಪಿರೇಷನ್ ಆಂಡ್ ಟ್ವಿಸ್ಟರ್ ಇವೆಂಟ್, ಆಕ್ಸಿಜೆನ್ ಜನರೇಷನ್ ಪ್ಲಾಂಟ್, ವೆಂಟಿಲೇಟರ್ ಸೇರಿ ಹಲವು ಉಪಕರಣ ಮೂಲೆ ಸೇರಿವೆ.

    ರಮೇಶ ಜಹಗೀರದಾರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts