ನವದೆಹಲಿ: ದೇಶದಲ್ಲಿ ಇಂಧನಗಳ ಬಳಕೆ ಹೆಚ್ಚಿದ್ದು, ಸೋಲಾರ್ ಅಳವಡಿಕೆ ಅವಶ್ಯವಾಗಿರುವುದರಿಂದ ಅದರತ್ತ ಹೆಚ್ಚಿನ ಒತ್ತು ನೀಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ವೇಳೆಯಲ್ಲಿ ಹೇಳಿದ್ದಾರೆ. ದೇಶದ 15 ಲಕ್ಷ ರೈತರಿಗೆ ಸೋಲಾರ್ ಪಂಪ್ ಅಳವಡಿಕೆಗೆ ಹಣ ನೀಡುವುದಾಗಿ ಅವರು ತಿಳಿಸಿದ್ದಾರೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಪ್ರಧಾನ ಮಂತ್ರಿ ಕಿಸಾನ್ ಉರ್ಜಾ ಸುರಕ್ಷಾ ಉತ್ಥಾನ್ ಮಹಾಭಿಯಾನ (ಪಿಎಂ ಕೆಯುಎಸ್ಯುಎಮ್) ಯೋಜನೆಯನ್ನು ಆರಂಭಿಸಲಾಗಿತ್ತು. 34,422 ಕೋಟಿ ಮೊತ್ತದ ಈ ಯೋಜನೆಯಲ್ಲಿ ಈಗಾಗಲೇ ಒಟ್ಟು 34,422 ಕೋಟಿ ರೈತರನ್ನು ಇಂಧನ ಮುಕ್ತ ಕೃಷಿಯತ್ತ ತರಲಾಗಿದೆ. ಬರಡು ಭೂಮಿಯಲ್ಲಿ ಸೋಲಾರ್ ಅಳವಡಿಕೆ ಮಾಡುವ ಮೂಲಕ ಆದಾಯ ತೆಗೆಯಲು ಸಹಾಯ ಮಾಡಲಾಗಿದೆ ಎಂದು ಸಚಿವೆ ತಿಳಿಸಿದ್ದಾರೆ.
ಪಿಎಂ ಕೆಯುಎಸ್ಯುಎಮ್ ಯೋಜನೆಯನ್ನು ಮೂರು ಘಟಕಗಳಾಗಿ ಕರೆಯಲಾಗಿದೆ. ಮೊದಲನೆಯ ಘಟಕದಲ್ಲಿ ಗ್ರಿಡ್ಗಳಿಂದ ಸಂಪರ್ಕಿತವಾದ ವಿಕೇಂದ್ರೀಕೃತ ಗ್ರೌಂಡ್ಗಳಲ್ಲಿ 10,000 ಮೆಗಾವ್ಯಾಟ್ ಸೌರಶಕ್ತಿ ತಯಾರಿಸಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಎರಡನೆಯ ಘಟಕದ ಅನುಸಾರ 17.5 ಲಕ್ಷ ಸ್ಟಾಂಡ್ ಅಲೋನ್ ಸೋಲಾರ್ ಕೃಷಿ ಪಂಪ್ಗಳು ಮತ್ತು ಮೂರನೆಯ ಘಟಕದಲ್ಲಿ 10 ಲಕ್ಷ ಗ್ರಿಡ್ ಕನೆಕ್ಟೆಡ್ ಸೋಲಾರ್ ಕೃಷಿ ಪಂಪ್ಗಳನ್ನು ನಿರ್ಮಿಸುವುದಾಗಿ ಬಜೆಟ್ನಲ್ಲಿ ತಿಳಿಸಲಾಗಿದೆ. ಮುರು ಘಟಕಗಳಿಂದ ಒಟ್ಟಾಗಿ 2022ರ ವೇಳೆಗೆ 25,750 ಮೆಗಾ ವ್ಯಾಟ್ ವಿದ್ಯುತ್ ತಯಾರಿಸುವುದಾಗಿ ಸಚಿವೆ ತಿಳಿಸಿದ್ದಾರೆ.