ಕಂಪ್ಲಿ: ಖಾಸಗಿ ಶಾಲೆಗಳ ಆರಂಭಕ್ಕೆ ಸರ್ಕಾರ ಅನುಮತಿ ನೀಡಬಾರದೆಂದು ಎಂದು ಕರ್ನಾಟಕ ನವ ನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ತಿಳಿಸಿದರು.
ಇದನ್ನೂ ಓದಿ:ಸರ್ಕಾರಿ ನೌಕರರ ಬೇಡಿಕೆ ಈಡೇರಿಸಲು ಸ್ಪಂದಿಸಿ
ಪಟ್ಟಣದಲ್ಲಿ ಸೇನೆ ತಾಲೂಕು ಘಟಕಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು. ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಎಲ್ಲ ಕನ್ನಡ ಪರ ಸಂಘಟನೆಗಳ ಮೇಲಿದೆ. ಶಾಲೆಗಳ ವೃದ್ಧಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.
ಕನ್ನಡ ವಿವಿ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು ಅಗತ್ಯ ಅನುದಾನ ನೀಡಬೇಕು. ಜಿಂದಾಲ್ ಕೈಗಾರಿಕೆಯಲ್ಲಿ ಸ್ಥಳೀಯ ಕನ್ನಡಿಗರಿಗೆ ಉದ್ಯೋಗ ನೀಡಬೇಕು. ಸಂಡೂರಿನ ನೈಸರ್ಗಿಕ ಸಂಪತ್ತು ರಕ್ಷಿಸಲು ದೇವಗಿರಿಯಲ್ಲಿ ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಬಾರದು. ಈ ಎಲ್ಲ ವಿಚಾರಗಳ ಕುರಿತು ರಾಜ್ಯಮಟ್ಟದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸೇನೆಯ ತಾಲೂಕು ಅಧ್ಯಕ್ಷ ಶಂಭುಲಿಂಗ ಪವಾಡಶೆಟ್ಟಿ, ಪ್ರಮುಖರಾದ ಬಿ.ನಾರಾಯಣಪ್ಪ, ಎನ್.ಎಂ.ಪತ್ರೆಯ್ಯಸ್ವಾಮಿ, ಸಿ.ಎ.ಚನ್ನಪ್ಪ, ಹರೀಶ್ ಚಿತ್ರಗಾರ್, ಎಚ್.ಎಂ.ಜಡೆಯ್ಯಸ್ವಾಮಿ, ಮನೋಜ್, ಹರೀಶ್ ಚಿತ್ರಗಾರ್, ಮಂಜುನಾಥ, ಗಣೇಶ ಹಕ್ಕಿಪಿಕ್ಕಿ, ವೀರೇಶ ಕೊಟಗಿ, ಸತೀಶ್, ವಿ.ಬಿ.ನಾಗರಾಜ, ರಾಕೇಶ, ಪ್ರಕಾಶ ಕುಕನೂರು, ಬಾಬು ಚಿತ್ರಗಾರ್ ಇತರರಿದ್ದರು.