ಭಾರತ ಸೇವಾ ದಳದಿಂದ ಆಂದೋಲನ

ವಿಜಯಪುರ : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವಂತೆ ಸಾರ್ವಜನಿಕರ ಮನವೊಲಿಸುವ ನಿಟ್ಟಿನಲ್ಲಿ ಭಾರತ ಸೇವಾದಳ ಜಿಲ್ಲಾ ಮತ್ತು ತಾಲೂಕು ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಶನಿವಾರ ಉಚಿತ ಮತ್ತು ಕಡ್ಡಾಯ ಶಿಕ್ಷಣ ಆಂದೋಲನ ನಡೆಸಿದರು.
ನಗರದ ದರ್ಗಾ ಬಡಾವಣೆ ಸೇರಿ ಕೆಎಚ್‌ಬಿ ಕಾಲನಿ, ಗ್ಯಾಂಗ್ ಬಾವಡಿ, ಜೋರಾಪುರ ಪೇಠ ಇನ್ನಿತರ ಕಡೆಗಳಲ್ಲಿ ಜಾಗೃತಿ ಮೂಡಿಸಲಾಯಿತು.
ಭಾರತ ಸೇವಾದಳದ ಜಿಲ್ಲಾಧ್ಯಕ್ಷ ಎಸ್.ಪಿ. ಬಿರಾದಾರ (ಕಡ್ಲೇವಾಡ) ಮಾತನಾಡಿ, ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳು ಸರ್ಕಾರಿ ಶಾಲೆಗಳಲ್ಲೂ ಲಭ್ಯವಿವೆ. ನುರಿತ ಶಿಕ್ಷಕರಿದ್ದಾರೆ. ಅನೇಕ ಸರ್ಕಾರಿ ಶಾಲೆಗಳು ಪ್ರತಿವರ್ಷ ನೂರಕ್ಕೆ ನೂರರಷ್ಟು ಲಿತಾಂಶ ಪಡೆಯುತ್ತಿವೆ ಎಂದು ಪಾಲಕರಲ್ಲಿ ಅರಿವು ಮೂಡಿಸಿದರು.
ವಿಜಯಪುರ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಕೆ.ಚಿಕ್ಕಮಠ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಸಮವಸ, ಬಿಸಿಯೂಟ, ಲೇಖನ ಸಾಮಗ್ರಿಗಳು, ಶೂ, ಸಾಕ್ಸ್, ವಿದ್ಯಾರ್ಥಿ ಭತ್ಯೆ ಹಾಗೂ ಕಂಪ್ಯೂಟರ್ ತರಬೇತಿ ಸೇರಿ ಅನೇಕ ಸೌಲಭ್ಯಗಳನ್ನು ನೀಡುವುದರ ಜತೆಗೆ ಉಚಿತ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ತಿಳಿಸಿದರು.

ಡಾ.ಎಚ್.ಎಂ.ಮುಜಾವರ, ನಾಗೇಶ ಡೋಣೂರ, ರಾಜು ಹಿಪ್ಪರಗಿ, ಶಿವನಗೌಡ ಎಸ್. ಪಾಟೀಲ(ಬಬಲಾದ), ಉಮೇಶ ಮಣ್ಣೂರ, ಅಶೋಕ ಗುಡದಿನ್ನಿ, ಎಂ.ಎಂ. ತೆಲಗಿ, ಎಂ.ಐ. ಬೇಪಾರಿ, ಎಲ್.ಎಲ್. ತೊರವಿ, ಎಂ.ಎಸ್. ಮಸೂತಿ, ಹಣಮಂತ ಗಂಜಾಳ, ಬಿ.ಜಿ. ಕಲಗೊಂಡ, ಪಿ.ಎಸ್. ಕಣಬೂರ, ಎಂ.ಎಸ್. ಗುಡ್ಡಳ್ಳಿ, ಎಸ್.ಎಸ್. ಬಗಲಿ ಹಾಗೂ ಸೇವಾದಳದ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *