ಶೃಂಗೇರಿ: ರೈತರ ಜಮೀನುಗಳು, ದೇವಸ್ಥಾನಗಳು ವಕ್ಛ್ ಭೂಮಿಯಾಗಿ ಪರಿವರ್ತನೆ ಆಗದಂತೆ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಮಂಡಲ ಹಾಗೂ ತಾಲೂಕು ರೈತ ಮೋರ್ಚಾ ಕಾರ್ಯಕರ್ತರು ಸೋಮವಾರ ಉಪತಹಸೀಲ್ದಾರ್ ಅನುಪ್‌ಗೆ ಮನವಿ ಸಲ್ಲಿಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ತಲಗಾರು ಉಮೇಶ್ ಮಾತನಾಡಿ, ಹಿಂದುಗಳ ಶ್ರದ್ಧಾ ಕೇಂದ್ರವಾದ ದೇವಾಲಯಗಳಿಗೆ ಸಂಬಂಧಪಟ್ಟ ದೇವಾಲಯಗಳನ್ನು ಹಂತ-ಹಂತವಾಗಿ ವಕ್ಛ್ ಮಂಡಳಿ ಕಬಳಿಸುವ ಪ್ರಯತ್ನದಲ್ಲಿದೆ. ಮಂಡಳಿಗೆ ಎಲ್ಲ ಸಹಕಾರ ನೀಡುತ್ತಿರುವ ಸರ್ಕಾರದ ಜನಸಾಮಾನ್ಯರ ಜಾಗ ಕಬಳಿಸಲು ಹೊರಟಿರುವುದು ಖಂಡನೀಯ. ನಮ್ಮದು ಜಾತ್ಯಾತೀತ ದೇಶ. ಎಲ್ಲರೂ ದೇಶದ ಸತ್ಪ್ರಜೆಗಳು. ಹಿಂದುಗಳ ಭಾವನೆಗಳ ಜತೆಗೆ ಸರ್ಕಾರ ಚೆಲ್ಲಾಟವಾಡುತ್ತಿದೆ.ಇದನ್ನು ಬಿಜೆಪಿ ಸಹಿಸುವುದಿಲ್ಲ. ಹೀಗೆ ಕಬಳಿಕೆ ಪ್ರಕ್ರಿಯೆ ಮುಂದುವರಿದರೆ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದರು.
ಪಪಂ ಉಪಾಧ್ಯಕ್ಷ ಪ್ರಕಾಶ್, ಬಿಜೆಪಿ ಮುಖಂಡರಾದ ನೂತನ್ ಕುಮಾರ್, ಶ್ರೀಧರ್ ಅಣ್ಣುಕೊಡಿಗೆ, ಬಿ.ಶಿವಶಂಕರ್, ಮನುಕೊಚ್ಚವಳ್ಳಿ, ವೆಂಕಟೇಶ್ ಮಿಗಿನಕಲ್ಲು ಉಪಸ್ಥಿತರಿದ್ದರು.
ಹಿಂದುಗಳ ಭಾವನೆ ಜತೆ ಸರ್ಕಾರದ ಚೆಲ್ಲಾಟ
ಅಣಬೆ ಖರೀದಿಸುವ ಅಗತ್ಯವಿಲ್ಲ.. ಮನೆಯಲ್ಲೆ ಬೆಳೆಯಿರಿ; ಸಿಂಪಲ್ ವಿಧಾನ ಇಲ್ಲಿದೆ | Health Tips
ಅಣಬೆಗಳು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರ ಜತೆಗೆ ಆರೋಗ್ಯಕರ ಮತ್ತು ರುಚಿಕರವಾಗಿರುತ್ತವೆ. ವಿಟಮಿನ್ ಡಿ, ಪ್ರೋಟೀನ್, ಫೈಬರ್, ಆಂಟಿಆಕ್ಸಿಡೆಂಟ್ಗಳು,…
ಸೀತಾಫಲ ತಿನ್ನುವ ಕ್ರಮ ಸರಿಯಾಗಿದ್ದರೆ ಮಾತ್ರ ಆರೋಗ್ಯಕ್ಕೆ ಪ್ರಯೋಜನ; ಇಲ್ಲಿದೆ ಹೆಲ್ತಿ ಮಾಹಿತಿ | Health Tips
ಹಣ್ಣುಗಳನ್ನು ತಿನ್ನುವುದರಿಂದ ಇಡೀ ದೇಹಕ್ಕೆ ಪೋಷಣೆ ದೊರೆಯುತ್ತದೆ. ಸಿಟ್ರಸ್ ಹಣ್ಣುಗಳು, ಸೇಬು ಮತ್ತು ಸೀತಾಫಲವು ಕಣ್ಣುಗಳಿಗೆ…
ಈ 3 ನಕ್ಷತ್ರದವರು ಕೋಟೇಶ್ವರ ಯೋಗದೊಂದಿಗೆ ಹುಟ್ತಾರೆ! ಇವರನ್ನು ಅರಸಿ ಬರುತ್ತೆ ಅಪಾರ ಸಂಪತ್ತು | Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…