ಬಿಹಾರ: ಇಲ್ಲಿನ ಸರ್ಕಾರಿ ಶಿಕ್ಷಕನಿಗೆ ಒಂದು ವಾರಗಳ ಕಾಲ ಹೆರಿಗೆ ರಜೆ (Maternity Leave) ಮಂಜೂರು ಮಾಡುವ ಮೂಲಕ ರಾಜ್ಯ ಸರ್ಕಾರ ಮುಜುಗರಕ್ಕಿಡಾಗಿದೆ.
ವೈಶಾಲಿ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಿಕ್ಷಕ ಜಿತೇಂದ್ರ ಕುಮಾರ್ ಸಿಂಗ್ ಎಂಬುವವರು ಒಂದು ವಾರ ಹೆರಿಗೆ ರಜೆ ತೆಗೆದುಕೊಂಡಿದ್ದಾರೆ. ಈ ಘಟನೆ ಕಳೆದ ಮೂರು ದಿನಗಳ ಹಿಂದೆ ನಡೆದಿದೆ ಎಂದು ವರದಿಯಾಗಿದೆ.
ಅನ್ಲೈನ್ನಲ್ಲಿ ರಜೆಗಾಗಿ ಅರ್ಜಿ ಸಲ್ಲಿಸಿರುವ ಶಿಕ್ಷಕನ ಸ್ಕ್ರೀನ್ಶಾಟ್ ಅನ್ನು ಸಹ ಶಿಕ್ಷಕರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇಂತಹ ವಿಲಕ್ಷಣ ಘಟನೆ ಬೆಳೆಕಿಗೆ ಬಂದಿದೆ.
ಹೆರಿಗೆ ರಜೆಗಳನ್ನು ಮಹಿಳೆಯರಿಗೆ ಮಾತ್ರ ನೀಡಲಾಗುತ್ತದೆ. ಆದರೆ, ಇಲ್ಲಿನ ಸರ್ಕಾರ ಗಂಡುಮಕ್ಕಳಿಗೂ ಹೆರಿಗೆ ರಜೆ ನೀಡುತ್ತದೆ. ಇಂತದೊಂದು ಯೋಜನೆ ಸರ್ಕಾರ ಯಾವಾಗ ಜಾರಿ ಮಾಡಿತ್ತು ನಮಗೆ ತಿಳಿದಿಲ್ಲ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಅನೇಕ ಹೀರೋಗಳು ಕೀರ್ತಿ ಸುರೇಶ್ ಅವರ… ಅಚ್ಚರಿ ಹೇಳಿಕೆ ನೀಡಿದ ಬಾಲಿವುಡ್ ನಟ ವರುಣ್ ಧವನ್! Keerthy Suresh
ಇನ್ನು ಕೆಲ ನೆಟ್ಟಿಗರು ಸರ್ಕಾರವನ್ನು ಟೀಕೆ ಮಾಡಿದ್ದು, ನಮಗೂ ಸಲ್ಪ ತಿಂಗಳು ಹೆರಿಗೆ ರಜೆ ನೀಡಿ ಎಲ್ಲದರೂ ಟ್ರಿಪ್ ಹೋಗುತ್ತೇವೆ ಎಂದಿದ್ದಾರೆ. ಇದೆಲ್ಲದ ಬಳಿಕ ಎಚ್ಚೆತ್ತ ಸರ್ಕಾರದ ಅಧಿಕಾರಿಗಳು ಈ ಪ್ರಕರಣ ಕುರಿತು ಮಾತನಾಡಿದ್ದು, ಇದು ತಾಂತ್ರಿಕದೋಷ ಕಾರಣದಿಂದ ರಜೆ ಮಾರ್ಪಾಡಾಗಿದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಈ ಕುರಿತು ವೈಶಾಲಿ ಜಿಲ್ಲೆಯ ಮಹುವಾ ಬ್ಲಾಕ್ನ ಪ್ರಭಾರಿ ಶಿಕ್ಷಣಧಿಕಾರಿ ಅರ್ಚನಾ ಕುಮಾರಿ ಮಾತನಾಡಿ, ಅನ್ಲೈನ್ನಲ್ಲಿ ಅರ್ಜಿ ತುಂಬುವ ವೇಳೆ ತಪ್ಪಾಗಿ ರಜೆಯ ಬಗ್ಗೆ ನಮೂದಿಸಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ, ಇದು ಮೇಲ್ನೋಟಕ್ಕೆ ತಾಂತ್ರಿಕದೋಷದಿಂದಾ ಹೀಗಾಗಿರಬಹದು ಇಲ್ಲವೇ, ಸ್ವಯಂ ಶಿಕ್ಷಕನಾ ತಪ್ಪಾ ಅಥವಾ ತಾಂತ್ರಿಕದೋಷನಾ ಎಂದು ಪರಿಶೀಲಿಸುತ್ತೇವೆ ಎಂದು ಹೇಳಿದ್ದಾರೆ.
ಹೆರಿಗೆ ರಜೆಗಳನ್ನು ಮಹಿಳೆ ಮಾತ್ರ ಸೀಮಿತ, ಗಂಡು ಮಕ್ಕಳಿಗೆ ತಮ್ಮ ನವಜಾತು ಶಿಶುಗಳನ್ನು ನೋಡಿಕೊಳ್ಳಲು ‘ಪಿತೃತ್ವ ರಜೆ’ ತಗೆದುಕೊಳ್ಳಬಹುದು. ಆದರೆ, ಅವರ ರಜೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಶಿಕ್ಷಣಾಧಿಕಾರಿ ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್).