ಈ ಬಾರಿ ಸರಳವಾಗಿ ದಸರಾ ಹಬ್ಬ ಆಚರಿಸಲು ನಿರ್ಧಾರ; ಪೂರ್ವಭಾವಿ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ

ಬೆಂಗಳೂರು: ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ಇದೆ. ಹಾಗೇ ರಾಜ್ಯದ ಇನ್ನೂ ಹಲವು ಜಿಲ್ಲೆಗಳಲ್ಲಿ ಮಳೆ, ಪ್ರವಾಹದಿಂದ ಅಪಾರ ಹಾನಿಯುಂಟಾದ ಕಾರಣ ಈ ಬಾರಿ ಅದ್ಧೂರಿ ದಸರಾ ಮಹೋತ್ಸವ ಬೇಡ. ಸಾಂಪ್ರದಾಯಿಕ ಆಚರಣೆಗೆ ಯಾವುದೇ ಅಡ್ಡಿಯಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವಸ್ತು ಪ್ರದರ್ಶನ ಇರುತ್ತದೆ. ಕಲಾವಿದರಿಗೆ ಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ವಿದೇಶಿ ಪ್ರವಾಸಿಗರು ಸೇರಿ ಯಾರಿಗೂ ತೊಂದರೆ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.
ಸಭೆಯಲ್ಲಿ ಮೈಸೂರು ಡಿಸಿ, ಪೊಲೀಸ್​ ಆಯುಕ್ತರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿಗಳು, ಮೈಸೂರು ಸಂಸದರು, ಶಾಸಕರು ಭಾಗಿಯಾಗಿದ್ದರು. ಉತ್ಸವದ ಪೂರ್ವಭಾವಿ ಸಿದ್ಧತೆಗಳ ಕುರಿತು ಚರ್ಚೆ ನಡೆಸಲಾಯಿತು.

ಎಸ್​.ಎಲ್​ ಭೈರಪ್ಪ ಉದ್ಘಾಟಕರು?
ಸೆಪ್ಟೆಂಬರ್​ 28ರಿಂದ ಪ್ರಾರಂಭವಾಗಲಿರುವ ದಸರಾ ಮಹೋತ್ಸವದ ಉದ್ಘಾಟನೆ ಮಾಡುವಂತೆ ಸಾಹಿತಿ ಎಸ್​.ಎಲ್​.ಭೈರಪ್ಪನವರಿಗೆ ಸರ್ಕಾರ ಆಹ್ವಾನ ನೀಡಲು ನಿರ್ಧರಿಸಿದೆ ಎನ್ನಲಾಗಿದೆ. ಹಲವು ವರ್ಷಗಳಿಂದಲೂ ಅವರ ಹೆಸರು ಮುನ್ನೆಲೆಗೆ ಬರುತ್ತಲೇ ಇದೆ. ಕಳೆದ ಬಾರಿ ದಸರಾ ಉದ್ಘಾಟನೆಗೆ ಭೈರಪ್ಪನವರನ್ನು ಕರೆಸಬೇಕು ಎಂದು ಸಂಸದ ಪ್ರತಾಪ್​ ಸಿಂಹ ಒತ್ತಾಯಿಸಿದ್ದರು.

Leave a Reply

Your email address will not be published. Required fields are marked *