20.4 C
Bangalore
Monday, December 9, 2019

ಐಟಿ-ಬಿಟಿ ಅಭಿವೃದ್ಧಿಗೆ ಸರ್ಕಾರದ ಸಹಕಾರ: ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ, ಬೆಂಗಳೂರು ಟೆಕ್ ಸಮಿಟ್​ಗೆ ಅದ್ದೂರಿ ಚಾಲನೆ

Latest News

ಬೈ ಎಲೆಕ್ಷನ್ ರಿಸಲ್ಟ್​| ಯಲ್ಲಾಪುರದಲ್ಲಿ ಮೂರನೇ ಸುತ್ತು ಮತ ಎಣಿಕೆ ಅಂತ್ಯ

ಕಾರವಾರ: ರಾಜ್ಯದ ಉಪಚುನಾವಣಾ ಸಮರದಲ್ಲಿ ಗಮನಸೆಳೆದಿರುವ ಯಲ್ಲಾಪುರ ಕ್ಷೇತ್ರದ ಮತಎಣಿಕೆ ಕಾರ್ಯ ಪ್ರಗತಿಯಲ್ಲಿದ್ದು ಮೂರನೇ ಸುತ್ತು ಮುಕ್ತಾಯವಾದಾಗ ಬಿಜೆಪಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಬಿಜೆಪಿ...

ರಾಣೇಬೆನ್ನೂರಿನಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ ಮುನ್ನಡೆ

ಹಾವೇರಿ: ರಾಣೇಬೆನ್ನೂರು ವಿಧಾನಸಭಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಅರುಣ್​ ಕುಮಾರ್​ 417 ಮತಗಳ ಮುನ್ನಡೆ ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಕಾಂಗ್ರೆಸ್​ನ...

ಬೈಎಲೆಕ್ಷನ್ ರಿಸಲ್ಟ್| ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಬಿ ಸಿ ಪಾಟೀಲ್ ಮುನ್ನಡೆ

ಹಾವೇರಿ: ಕುತೂಹಲ ಕೆರಳಿಸಿರುವ ಕರ್ನಾಟಕ ಅಸೆಂಬ್ಲಿಯ ಬೈ ಎಲೆಕ್ಷನ್​ನ ಮತ ಎಣಿಕೆ ನಡೆಯುತ್ತಿದ್ದು, ಮೊದಲ ಎರಡು ಸುತ್ತಿನ ಮತ ಎಣಿಕೆಯಲ್ಲಿ ಬಿಜೆಪಿಯ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಮೊದಲ ಸುತ್ತಿನ ಮತಎಣಿಕೆ ಮುಕ್ತಾಯ: ಕೆ.ಆರ್​.ಪೇಟೆಯಲ್ಲಿ ಜೆಡಿಎಸ್​, ಹುಣಸೂರಿನಲ್ಲಿ ಕಾಂಗ್ರೆಸ್​ ಮುನ್ನಡೆ

ಹುಣಸೂರು/ಕೆ.ಆರ್​ಪೇಟೆ: ಕೆ.ಆರ್​.ಪೇಟೆ ಕ್ಷೇತ್ರದ ಉಪಚುನಾವಣೆಯ ಅಂಚೆ ಮತಎಣಿಕೆಯಲ್ಲಿ ಮುಂದಿದ್ದ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಮೊದಲ ಸುತ್ತಿನ ಮತಎಣಿಕೆಯಲ್ಲಿ ಹಿಂದೆ ಉಳಿದಿದ್ದು, ಜೆಡಿಎಸ್​ ಅಭ್ಯರ್ಥಿ...

ಬೈಎಲೆಕ್ಷನ್​ ರಿಸಲ್ಟ್​| ಚಿಕ್ಕಬಳ್ಳಾಪುರದಲ್ಲಿ 31 ಅಂಚೆಮತದಲ್ಲಿ 27 ಸ್ವೀಕೃತ, ಬಿಜೆಪಿ ಅಭ್ಯರ್ಥಿ ಸುಧಾಕರ್​ ಮುನ್ನಡೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಡೆದ ಅಂಚೆ ಮತಎಣಿಕೆಯಲ್ಲಿ ಚಲಾವಣೆಯಾದ ಒಟ್ಟು 31 ಅಂಚೆಮತದಲ್ಲಿ 27 ಸ್ವೀಕೃತವಾಗಿವೆ. ಅಂಚೆ ಮತೆಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸುಧಾಕರ್​...

ಬೆಂಗಳೂರು: ಆವಿಷ್ಕಾರ, ಸೇವಾ ಕ್ಷೇತ್ರಗಳ ಜತೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಕಾರವನ್ನು ಸರ್ಕಾರ ನೀಡಲಿದೆ. ಅದಕ್ಕೆ ಪೂರಕ ಕಾನೂನು ರೂಪಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ವತಿಯಿಂದ ಬೆಂಗಳೂರು ಅರಮನೆ ಅವರಣದಲ್ಲಿ ಏರ್ಪಡಿಸಿರುವ ಮೂರು ದಿನಗಳ ‘ಬೆಂಗಳೂರು ಟೆಕ್ ಸಮಿಟ್ 2019’ಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸ್ಟಾರ್ಟ್​ಅಪ್, ಐಟಿ-ಬಿಟಿ ಕ್ಷೇತ್ರಗಳ ಅಭಿವೃದ್ಧಿಗಾಗಿ ಸಕಾರ ಈಗಾಗಲೆ ಹಲವು ಯೋಜನೆಗಳನ್ನು ರೂಪಿಸಿದೆ. ಉತ್ತಮ ಕೌಶಲ ಹೊಂದಿರುವ ಮಾನವ ಸಂಪನ್ಮೂಲ ವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಆವಿಷ್ಕಾರಗಳಿಗೆ ಇರುವ ತೊಡಕುಗಳ ನಿವಾರಣೆಗಾಗಿ ಕರ್ನಾಟಕ ಆವಿಷ್ಕಾರ ಪ್ರಾಧಿಕಾರ ಆರಂಭಿಸಲಾಗಿದೆ. ಕಾನೂನು ಸಮಸ್ಯೆಗಳ ನಿವಾರಣೆಗಾಗಿ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ರೂಪಿಸಲಾಗುತ್ತಿದೆ. ನೀತಿ ಆಯೋಗ ಬಿಡುಗಡೆ ಮಾಡಿದ ಪಟ್ಟಿಯಂತೆ ಇನ್ನೋವೇಷನ್ ಸ್ಟೇಟ್ ಎಂಬ ಹೆಗ್ಗಳಿಕೆಗೆ ರಾಜ್ಯ ಪಾತ್ರವಾಗಿದೆ. ವಿಶ್ವದ ಅತಿ ಉತ್ತಮ ಸ್ಟಾರ್ಟ್​ಅಪ್​ಗಳು, ಯುನಿಕಾರ್ನ್ ಸಂಸ್ಥೆಗಳು ರಾಜ್ಯದಲ್ಲಿವೆ ಎಂದರು.

ಉಪಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಸ್ಟಾರ್ಟ್​ಅಪ್ ಇಕೋ ಸಿಸ್ಟಂನಲ್ಲಿ ಬೆಂಗಳೂರು ವಿಶ್ವದಲ್ಲಿ 11ನೇ ಸ್ಥಾನದಲ್ಲಿದೆ. ಅದನ್ನು ಇನ್ನಷ್ಟು ಉತ್ತಮಗೊಳಿಸುವತ್ತ ಗಮನಹರಿಸಲಾಗುವುದು. ಬೆಂಗಳೂರು ಟೆಕ್ ಸಮಿಟ್ ಅದಕ್ಕೆ ಪೂರಕವಾದ ವಾತಾವರಣ ನಿರ್ವಿುಸಲಿದೆ ಎಂದರು.

ಪೆರಿಫೆರಲ್ ರಿಂಗ್​ರಸ್ತೆ, ಉಪನಗರ ರೈಲು ಯೋಜನೆ, ಮೆಟ್ರೋ ವಿಸ್ತರಣೆಯಂತಹ ಯೋಜನೆಗಳು ಸಾಕಷ್ಟು ಸುಗಮ ಸಂಚಾರ ವ್ಯವಸ್ಥೆಗೆ ಪೂರಕವಾಗಿದೆ. ಅದರಿಂದ ಉದ್ದಿಮೆಗಳ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಬಯೋಕಾನ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕಿ ಡಾ. ಕಿರಣ್ ಮಜುಂದಾರ್ ಷಾ ಮಾತನಾಡಿ, 2019ರಲ್ಲಿ ಬೆಂಗಳೂರಿನ ಜೈವಿಕ ತಂತ್ರಜ್ಞಾನ ಕ್ಷೇತ್ರ 5 ಸಾವಿರ ಕೋಟಿ ರೂ. ಮೊತ್ತದ ವಹಿವಾಟು ನಡೆಸಿದೆ. 250 ಜೈವಿಕ ವಿಜ್ಞಾನ ಸಂಸ್ಥೆಗಳು, 3 ಸಾವಿರ ಜೈವಿಕ ಸ್ಟಾರ್ಟ್​ಅಪ್​ಗಳು ಬೆಂಗಳೂರಿನಲ್ಲಿವೆ. ಮಾಹಿತಿ ತಂತ್ರಜ್ಞಾನವಷ್ಟೇ ಅಲ್ಲದೆ, ಜೈವಿಕ ತಂತ್ರಜ್ಞಾನದಲ್ಲೂ ಬೆಂಗಳೂರು ವಿಶ್ವದ ಗಮನ ಸೆಳೆಯುತ್ತಿದೆ ಎಂದರು.

ಅರಿನ್ ಕ್ಯಾಪಿಟಲ್ ಅಧ್ಯಕ್ಷ ಮೋಹನ್​ದಾಸ್ ಪೈ ಮಾತನಾಡಿ, 2025ಕ್ಕೆ ಬೆಂಗಳೂರಿನಲ್ಲಿ 50 ಯುನಿಕಾರ್ನ್ ಸಂಸ್ಥೆಗಳು, 20 ಸಾವಿರ ಸ್ಟಾರ್ಟ್​ಅಪ್​ಗಳು ಸ್ಥಾಪನೆಯಾಗುವ ನಿರೀಕ್ಷೆಯಿದೆ. ಅದಕ್ಕೆ ತಕ್ಕಂತೆ ಬೆಂಗಳೂರಿನ ಐಟಿ-ಬಿಟಿ ಉದ್ಯಮ ಬೆಳೆಯುತ್ತಿದೆ. ಸರ್ಕಾರ ಕೂಡ ನೆರವು ನೀಡುತ್ತಿದೆ ಎಂದು ಹೇಳಿದರು.

ಆಸ್ಟೇಲಿಯಾದ ಹೈಕಮಿಷನರ್ ಹರಿಂದರ್ ಸಿಧು, ಬ್ರಿಟಿಷ್ ಹೈಕಮಿಷನರ್ ಸರ್ ಡೋಮಿನಿಕ್ ಆಂಥೋನಿ ಜೆರಾರ್ಡ್ ಅಸ್ಕಿ್ವ್, ಲಿಥುವೇನಿಯಾದ ರಾಯಭಾರಿ ಜೂಲಿಯಸ್ ಪ್ರೆನೆವಿಸಿಯಸ್, ಸಾಫ್ಟ್​ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾದ ಮಹಾ ನಿರ್ದೇಶಕ ಡಾ. ಓಂಕಾರ್ ರೈ ಮತ್ತಿತರರು ಉಪಸ್ಥಿತರಿದ್ದರು.

ಮುಖ ಗುರುತಿಸಿ ಹಾಜರಾತಿ ಹಾಕಿ

ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಗೆ ಪರ್ಯಾಯವಾಗಿ ಇದೀಗ ಫೇಸ್ ರೆಕಗ್ನೈಸ್ ಹಾಜರಾತಿ ವ್ಯವಸ್ಥೆ ಪರಿಚಯಿಸಲಾಗುತ್ತಿದೆ. ಮುಂಬೈ ಮೂಲದ ಪಿಕ್ಸಾಟ್ ಸಂಸ್ಥೆ ಅಂತಹದ್ದೊಂದು ಕ್ಯಾಮರಾ ಅಭಿವೃದ್ಧಿಪಡಿಸಿದೆ. ಕಾರ್ಖಾನೆ ಅಥವಾ ಸಂಸ್ಥೆ ಬಾಗಿಲಲ್ಲಿ ಕ್ಯಾಮರಾ ಅಳವಡಿಸಿ ಅದಕ್ಕೆ ಉದ್ಯೋಗಿಗಳ ಮಾಹಿತಿಯನ್ನು ಭರ್ತಿ ಮಾಡಬೇಕು. ಉದ್ಯೋಗಿ ಕಚೇರಿಗೆ ಪ್ರವೇಶಿಸಿದ ಕೂಡಲೇ ಅವರ ಮುಖವನ್ನು ತನ್ನಿಂದ ತಾನೇ ಸ್ಕಾ್ಯನ್ ಮಾಡಿ ಹಾಜರಾತಿ ಪಡೆಯಬಹುದಾಗಿದೆ. ಒಬ್ಬೊಬ್ಬರದ್ದೇ ಅಲ್ಲದೆ, ಒಮ್ಮೆಲೆ ನೂರಾರು ಜನರ ಮುಖ ಸ್ಕಾ್ಯನ್ ಮಾಡಿ ಹಾಜರಾತಿ ಪಡೆಯುವ ಸಾಮರ್ಥ್ಯವನ್ನು ಪಿಕ್ಸಾಟ್ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕ್ಯಾಮರಾ ಹೊಂದಿದೆ. ಅದರ ಜತೆಗೆ ಮಾನವರಹಿತ ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಪಿಕ್ಸಾಟ್ ಸಂಸ್ಥೆ ಪರಿಚಯಿಸತ್ತಿದೆ. ಟ್ರಾಫಿಕ್ ಸಿಗ್ನಲ್ ಅಥವಾ ರಸ್ತೆಗಳಲ್ಲಿ ಕ್ಯಾಮರಾ ಅಳವಡಿಸಿದರೆ ವಾಹನದ ವೇಗ, ಸಂಚಾರ ನಿಯಮ ಪಾಲನೆ ಕುರಿತ ಮಾಹಿತಿಯನ್ನು ಸಹಾಯವಾಣಿಗೆ ರವಾನಿಸಲಿದೆ.

ಬರುವ ವರ್ಷಕ್ಕೆ ಸಕಾಲ ಆನ್​ಲೈನ್ ವ್ಯವಸ್ಥೆ

ದೇಶದ ರಫ್ತು ಕ್ಷೇತ್ರದಲ್ಲಿ ರಕ್ಷಣೆ ಮತ್ತು ವಿಮಾನಗಳಿಗೆ ಸಂಬಂಧಿಸಿದಂತೆ ಶೇ. 60 ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇ. 33 ಪ್ರಮಾಣವನ್ನು ಬೆಂಗಳೂರು ಹೊಂದಿದೆ. ಹೊಸಬಗೆಯ ವಿನ್ಯಾಸ, ಆವಿಷ್ಕಾರ, ಉದ್ದಿಮೆಗಳಿಗೆ ರಾಜ್ಯ ತವರೂರಾಗುತ್ತಿದೆ. ರಾಜ್ಯ ಸರ್ಕಾರ ಕೂಡ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಕೆಲಸ ಮಾಡಲು ಮುಂದಾಗುತ್ತಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ತಿಳಿಸಿದರು. 2020ರ ವೇಳೆಗೆ ಸಕಾಲ ಅಡಿಯ 500 ಸೇವೆಗಳು ಆನ್​ಲೈನ್ ಮೂಲಕ ಸೇವೆ ನೀಡಲಿವೆ ಎಂದು ಹೇಳಿದರು.

ಮೊಬೈಲ್ ಬಿಟ್ಟು ಕನ್ನಡಕ ಧರಿಸಿ

ಕರೆ ಸ್ವೀಕರಿಸಲು, ಹಾಡು ಕೇಳಲು ಇನ್ನು ಮುಂದೆ ಹೆಡ್​ಫೋನ್ ಬಳಸುವ ಅವಶ್ಯಕತೆಯಿಲ್ಲ. ಏಕೆಂದರೆ, ಐ-ಮ್ಯಾಟ್ರಿಕ್ಸ್ ಸಂಸ್ಥೆಯು ಸ್ಪೀಕರ್ ಮತ್ತು ಮೈಕ್ ಅಳವಡಿಸಿದ ಕನ್ನಡಕವನ್ನು ಸಿದ್ಧಪಡಿಸಿದ್ದು, ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಸ್ಮಾಟ್​ಫೋನ್ ಮತ್ತು ಕನ್ನಡಕದ ನಡುವೆ ಬ್ಲೂಟೂಥ್ ಮೂಲಕ ಸಂಪರ್ಕ ಕಲ್ಪಿಸಿದರೆ, ಮೊಬೈಲ್ ರೀತಿ ಕನ್ನಡಕ ಕೆಲಸ ಮಾಡಲಿದೆ. ಅದರ ಜತೆಗೆ ಕನ್ನಡದಲ್ಲಿ ಸೆನ್ಸರ್ ಅಳವಡಿಸಿ ದೂರ ಮತ್ತು ಹತ್ತಿರದ ದೃಷ್ಟಿ ದೋಷ ಇರುವವರಿಗೆ ತಕ್ಕಂತೆ ಕನ್ನಡಕದ ಗಾಜನ್ನು ಅಡ್ಜಸ್ಟ್ ಮಾಡುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕನ್ನಡಕ ಸಿದ್ಧಪಡಿಸಲಾಗಿದ್ದು, ಶೀಘ್ರದಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ.

ಲೇಸರ್ ಮತ್ತು ರೋಬೋ ಸ್ವಾಗತ

ಕಾರ್ಯಕ್ರಮ ಆರಂಭಕ್ಕೂ ಮುನ್ನ ಬೆಂಗಳೂರಿನ ಇತಿಹಾಸ ಕುರಿತಂತೆ ಲೇಸರ್ ಬೆಳಕಿನ ಮೂಲಕ ವಿವರಿಸಲಾಯಿತು. ಕೆಂಪೇಗೌಡರ ಆಳ್ವಿಕೆ, ಬೆಂಗಳೂರು ನಿರ್ವಣ, ನಗರದ ಸಂಸ್ಕೃತಿ, ನೀರಿನ ಮೂಲ, ಐಟಿ-ಬಿಟಿಗೆ ನೀಡಲಾದ ಕೊಡುಗೆ ವಿವರಿಸಲಾಯಿತು. ಮಿತ್ರಾ ಮತ್ತು ಮೈತ್ರಿ ಹೆಸರಿನ ರೋಬೋಗಳು ಸಮಿಟ್​ಗೆ ಎಲ್ಲರನ್ನೂ ಸ್ವಾಗತಿಸಿದವು.

ದುಬಾರಿ ಡ್ರೋನ್​ಗಳ ನಡುವೆ ಕಡಿಮೆ ಬೆಲೆಗೆ ಹಗುರವಾದ ಡ್ರೋನ್ ಮಾರುಕಟ್ಟೆಗೆ ಪರಿಚಯಿಸ ಲಾಗಿದೆ. ಯಾವುದೇ ರಿಮೋಟ್​ನ ಅವಶ್ಯಕತೆ ಯಿಲ್ಲದೆ, ಮೊಬೈಲ್​ನಲ್ಲಿಯೇ ನಿರ್ವಹಿಸಬಹು ದಾದ ಡ್ರೋನ್ ಇದಾಗಿದೆ.

| ಶ್ರೀನಿವಾಸುಲು ರೆಡ್ಡಿ ಸ್ಕೈಕ್ರಾಫ್ಟ್್ಸ ಸಂಸ್ಥಾಪಕ

26 ಸಾವಿರಕ್ಕೆ ಡ್ರೋನ್ ಖರೀದಿಸಿ

ಕೇವಲ 26 ಸಾವಿರ ರೂ.ಗಳಿಗೆ ಹಗುರವಾದ ಡ್ರೋನ್ ಅನ್ನು ಸ್ಕೈಕ್ರಾಫ್ಟ್್ಸ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದೆ. ಪೇಪರ್​ಗಳನ್ನು ಬಳಸಿ ತಯಾರಿಸಲಾಗಿದೆ. ಖರೀದಿಸುವವರು ತಾವೇ ಜೋಡಿಸಿಕೊಂಡು, ವೈ-ಫೈ ಮೂಲಕ ಮೊಬೈಲ್​ಗೆ ಸಂಪರ್ಕ ಕಲ್ಪಿಸಿ ನಿರ್ವಹಣೆ ಮಾಡಬಹುದಾಗಿದೆ.

ಮನೆಯಲ್ಲಿಯೇ ಇಸಿಜಿ, ಸ್ಕಾ್ಯನ್

ನಿಮ್ಮ ದೇಹದಲ್ಲಿ ಮೂಳೆ ಮುರಿದಿದೆಯೇ ಎಂಬುದನ್ನು ತಿಳಿಯಲು, ಹೃದಯದ ಸದೃಢತೆ ಪರೀಕ್ಷೆಗೆ ಇನ್ನು ಮುಂದೆ ಆಸ್ಪತ್ರೆಗೆ ತೆರಳುವ ಅವಶ್ಯಕತೆಯಿಲ್ಲ. ಏಕೆಂದರೆ ಐಟಿಐಇ ಸಂಸ್ಥೆ ಮನೆಯಲ್ಲಿಯೇ ಸ್ಕಾ್ಯನ್ ಮಾಡುವ ಮತ್ತು ಇಸಿಜಿ ಮಾಡುವ ಯಂತ್ರ ಕಂಡುಹಿಡಿದಿದೆ. ಚಿಕ್ಕ ಕ್ಯಾಮರಾ ಮಾದರಿಯ ಯಂತ್ರವು ನಿಮ್ಮ ದೇಹದಲ್ಲಿ ಎಲ್ಲಿ ಮೂಳೆ ಮುರಿತ ಉಂಟಾಗಿದೆ ಎಂಬುದನ್ನು ತಿಳಿಸಿಕೊಡಲಿದೆ. ಆಮೂಲಕ ಪ್ರತಿ ನೋವಿಗೂ ಆಸ್ಪತ್ರೆಗೆ ತೆರಳಿ ಪರೀಕ್ಷೆಗೊಳಪಡುವ ಅನಿವಾರ್ಯತೆ ಇರುವುದಿಲ್ಲ.

ಗಾಳಿ ಶುದ್ಧೀಕರಿಸುವ ಲೀಫ್ ಬಾಕ್ಸ್

ಸಸಿ ಮತ್ತು ತಂತ್ರಜ್ಞಾನ ಒಟ್ಟುಗೂಡಿಸಿ ಮನೆಯೊಳ ಗಿನ ಗಾಳಿ ಶುದ್ಧೀಕರಿಸುವ ವ್ಯವಸ್ಥೆ ಪ್ರದರ್ಶನಗೊಳ್ಳುತ್ತಿದೆ. ಏರ್​ಲೀಫ್ ಬಾಕ್ಸ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಲೀಫ್​ಬಾಕ್ಸ್​ನಲ್ಲಿ ಸಸಿ ನೆಟ್ಟರೆ, ದೇಹಕ್ಕೆ ಕೆಡಕಾಗುವ ಗಾಳಿಯನ್ನು ತನ್ನೊಳಗೆ ತೆಗೆದುಕೊಂಡು ಉತ್ತಮ ಗಾಳಿ ಹೊರಬಿಡುತ್ತದೆ. 700 ಗಂಟೆವರೆಗೆ ಸಸಿಗೆ ನೀರು ಹಾಕಬೇಕಿಲ್ಲ.

ಕೃತಕ ಕೈಗಳು

ಕೈಯಿಲ್ಲದೆ ಸಮಸ್ಯೆ ಅನುಭವಿಸುತ್ತಿ ರುವವರಿಗಾಗಿ ಗ್ರಾಸ್ಪ್ ಬಯೋನಿಕ್ಸ್ ಸಂಸ್ಥೆ ಪುರಾಕ್ ವೇಯರೆಬಲ್ ಪ್ರೊಸ್ಥೆಟಿಕ್ ಆಮ್ರ್ ಹೆಸರಿನ ಕೃತಕ ಕೈಗಳನ್ನು ಸಿದ್ಧಪಡಿಸಿದೆ. ಅದನ್ನು ಧರಿಸಿದರೆ, ಸಹಜ ಕೈಗಳಂತೆಯೇ ಕೆಲಸ ಮಾಡಬಹುದಾಗಿದೆ.

ಆವಿಷ್ಕಾರಗಳ ಅನಾವರಣ

| ಗಿರೀಶ್ ಗರಗ ಬೆಂಗಳೂರು

ಐಟಿ-ಬಿಟಿ, ಸ್ಟಾರ್ಟ್​ಅಪ್​ಗಳ ಬಗೆಗಿನ ಮಾಹಿತಿಗಳು ಬೆಂಗಳೂರು ಟೆಕ್ ಸಮಿಟ್​ನಲ್ಲಿ ಅನಾವರಣಗೊಳ್ಳುತ್ತಿವೆ. ಅದಕ್ಕಿಂತ ಭಿನ್ನವಾಗಿ ಕಳೆದೆರಡು ತಿಂಗಳ ಹಿಂದೆ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹದ ಪರಿಣಾಮವನ್ನು ಜನರಿಗೆ ಪರಿಚಯಿಸುವ ಕೆಲಸವನ್ನು ಮಾಡಲಾಗುತ್ತಿದೆ.

ಶತಮಾನದಲ್ಲಿ ಕಂಡುಕೇಳರಿಯದ ಮಳೆಯಿಂದಾಗಿ ಎರಡು ತಿಂಗಳ ಹಿಂದೆ ಉತ್ತರ ಕನಾಟಕದ ಬಹುತೇಕ ಭಾಗ ಮುಳುಗಿಹೋಗಿತ್ತು. ಅದರಿಂದ ಲಕ್ಷಾಂತರ ಜನರು ನಿರ್ಗತಿಕರಾಗುವಂತಾಗಿತ್ತು. ಆದರಲ್ಲೂ ಕೃಷ್ಣಾ ನದಿ ಪ್ರವಾಹದಿಂದಾಗಿ ಬಹುತೇಕ ಭಾಗ ನೀರಿನಲ್ಲಿ ಮುಳುಗುವಂತಾಗಿತ್ತು. ಹೀಗೆ ಪ್ರವಾಹ ಸಂಭವಿಸಿದಾಗ ನೀರಿನಲ್ಲಿ ಮುಳುಗಿದ ಪ್ರದೇಶಗಳು, ಎಷ್ಟು ಭಾಗ ಮುಳುಗಿದ್ದವು, ಯಾವ ಪ್ರದೇಶ ಪ್ರವಾಹಕ್ಕೆ ತುತ್ತಾಗಿಲ್ಲ ಎಂಬೆಲ್ಲ ಮಾಹಿತಿಯ ಕುರಿತಂತೆ ರಾಜ್ಯ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್​ಆರ್​ಎಸ್​ಎಸಿ) ತ್ರಿಡಿ, ಜಿಐಎಸ್ ಮ್ಯಾಪಿಂಗ್ ಮಾಡಿದೆ. ಜತೆಗೆ ಅದರ ಕುರಿತಂತೆ ಬೆಂಗಳೂರು ಟೆಕ್ ಸಮಿಟ್​ನಲ್ಲಿ ಮಾಹಿತಿ ನೀಡುತ್ತಿದೆ.

8 ಮೀ.ವರೆಗೆ ನೀರು: ಕೆಎಸ್​ಆರ್​ಎಸ್​ಎಸಿ ಸಿದ್ಧಪಡಿಸಿರುವ ವರದಿ ಅನ್ವಯ ಬೆಳಗಾವಿಯ ಹಿಪ್ಪರಗಿ ಬ್ಯಾರೇಜ್ ವ್ಯಾಪ್ತಿಯ 50 ಕಿ.ಮೀ. ಉದ್ದದ ನದಿ ಪ್ರದೇಶದಲ್ಲಿ ಪ್ರವಾಹ ಸಂಭವಿಸಿದೆ. 2 ಮೀ.ನಿಂದ 8 ಮೀ.ವರೆಗೆ ನೀರು ನಿಂತಿದ್ದು, ಹಲವು ಮನೆಗಳು ಮುಳುಗಿವೆ. ಜತೆಗೆ ನದಿ ಪಾತ್ರದ 2.5 ಕಿ.ಮೀ.ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ನೀರು ಹರಿದು ಸಮಸ್ಯೆ ಉಂಟಾಗಿತ್ತು.

ತ್ರಿಡಿ ವಿವರಣೆ: ಪ್ರವಾಹ ಕುರಿತಂತೆ ಜನರಿಗೆ ವಿಶಿಷ್ಟ ರೀತಿಯಲ್ಲಿ ಮಾಹಿತಿ ನೀಡಲು ಕೆಎಸ್​ಆರ್​ಎಸ್​ಎಸಿ ತ್ರಿಡಿ ಮೂಲಕ ವಿವರಿಸಲು ಮುಂದಾಗಿದೆ. ತ್ರಿಡಿ ತಂತ್ರಜ್ಞಾನ ಬಳಸಿ ಮ್ಯಾಪಿಂಗ್ ಮಾಡಿದ್ದು, ತ್ರಿಡಿ ಗ್ಲಾಸ್ ಧರಿಸಿ ಮ್ಯಾಪ್ ನೋಡಿದರೆ ಯಾವ ಪ್ರದೇಶದಲ್ಲಿ ನೀರು ನಿಂತಿತ್ತು ಎಂಬುದನ್ನು ಸಲೀಸಾಗಿ ತಿಳಿಯಬಹುದು. ಜತೆಗೆ ಡಿಜಿಟಲ್ ಎಲಿವೇಷನ್ ಮಾಡಿ ಮ್ಯಾಪಿಂಗ್ ಮಾಡಲಾಗಿದೆ.

ಪ್ರವಾಹ ಕುರಿತಂತೆ ಮಾಹಿತಿ ನೀಡಲು ತಂತ್ರಜ್ಞಾನ ಬಳಸಿ ಮ್ಯಾಪಿಂಗ್ ಮಾಡಲಾಗಿದೆ. ತ್ರಿಡಿ, ಡಿಜಿಟಲ್ ಎಲಿವೇಷನ್ ಮೂಲಕ ಮ್ಯಾಪ್ ಸಿದ್ಧಪಡಿಸಿ ಪ್ರದರ್ಶಿಸಲಾಗುತ್ತಿದೆ.

| ಚಿತ್ರಾ ಯೋಜನಾ ವಿಜ್ಞಾನಿ, ಕೆಎಸ್​ಆರ್​ಎಸ್​ಎಸಿ

Stay connected

278,743FansLike
583FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...

VIDEO| ಕೇಸ್ರಿಕ್ ವಿರುದ್ಧ ಸೇಡು ತೀರಿಸಿಕೊಂಡ ಕೊಹ್ಲಿ!

ಹೈದರಾಬಾದ್: ಮೊದಲ ಟಿ20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಭಾರತ ತಂಡವನ್ನು ಗೆಲ್ಲಿಸಿದ ನಾಯಕ ವಿರಾಟ್ ಕೊಹ್ಲಿ, ಹಳೆಯ ಲೆಕ್ಕವೊಂದನ್ನೂ ಚುಕ್ತಾ ಮಾಡಿದರು. ಭಾರತದ ಚೇಸಿಂಗ್ ವೇಳೆ ಇನಿಂಗ್ಸ್​ನ 16ನೇ...

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...