ಎನ್.ಆರ್.ಪುರ: ಪ್ರಸ್ತುತ ಪಿಸಿಎಂಆರ್ಡಿ ಬ್ಯಾಂಕ್ ನಷ್ಟದಲ್ಲಿರುವುದರಿಂದ ಸರ್ಕಾರ ಬ್ಯಾಂಕ್ನ ರೈತರ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಬೇಕು ಎಂದು ಶನಿವಾರ ಕೃಷಿ ಭವನದಲ್ಲಿ ನಡೆದ ಪಿಸಿಎಂಆರ್ಡಿ ಬ್ಯಾಂಕ್ನ 2018-19ನೇ ಸಾಲಿನ ಸರ್ವಸದಸ್ಯರ ಸಭೆಯಲ್ಲಿ ಸರ್ವ ಸದಸ್ಯರು ಒತ್ತಾಯಿಸಿದರು.
ಹಿರಿಯ ಸದಸ್ಯ ಬಿ.ಕೆ.ಜಾನಕಿರಾಂ ಮಾತನಾಡಿ, ಆಡಳಿತ ಮಂಡಳಿ ಈ ಬಗ್ಗೆ ಗಂಭೀರ ಚಿಂತನೆ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್ ಮತ್ತಷ್ಟು ನಷ್ಟವಾಗಲಿದೆ. ಈ ಕುರಿತು ಆಡಳಿತ ಮಂಡಳಿ ಸದಸ್ಯರು ಸಿಎಂಗೆ ಮನವಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಬ್ಯಾಂಕ್ನ ವ್ಯವಸ್ಥಾಪಕ ಎಚ್.ಎ.ಪ್ರದ್ಯುಮ್ನ ಮಾತನಾಡಿ, ಮುಂದಿನವಾರ ಶಿಕಾರಪುರಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದು ಈ ವೇಳೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳ 16 ಪಿಸಿಎಆರ್ಡಿ ಬ್ಯಾಂಕ್ನ ಅಧ್ಯಕ್ಷರು, ಎರಡು ಜಿಲ್ಲೆಯ ಶಾಸಕರು ಸೇರಿ ಮುಖ್ಯಮಂತ್ರಿಗಳಿಗೆ ಬಡ್ಡಿ ಹಾಗೂ ಸುಸ್ತಿ ಬಡ್ಡಿ ಮನ್ನಾ ಮಾಡಲು ಮನವಿ ಸಲ್ಲಿಸಲಾಗುವುದು ಎಂದರು.