ರಿಪೇರಿಯಾದ ಆಸ್ಪತ್ರೆಯ ಜನರೇಟರ್

ವಿಜಯವಾಣಿ ವರದಿ ಪರಿಣಾಮ | ಶಾಶ್ವತ ಪರಿಹಾರ ಕಲ್ಪಿಸಲು ಒತ್ತಡ

ಹೊಸಪೇಟೆ: ಉಪವಿಭಾಗ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಮತ್ತು ಜನರೇಟರ್‌ಗಳು ಕೆಟ್ಟಿದ್ದರಿಂದ ಡಯಾಲಿಸಿಸ್ ಸೇರಿ ಇತರ ರೋಗಿಗಳಿಗೆ ತೊಂದರೆಯಾಗುತ್ತಿದ್ದ ಬಗ್ಗೆ ವಿಜಯವಾಣಿ ವರದಿ ಮಾಡಿದ ಪರಿಣಾಮ, ಎಚ್ಚೆತ್ತ ಆಸ್ಪತ್ರೆ ಅಧಿಕಾರಿಗಳು ಜನರೇಟರ್‌ಗಳನ್ನು ರಿಪೇರಿ ಮಾಡಿಸಿದ್ದಾರೆ. ಈ ಕುರಿತು ವಿಜಯವಾಣಿ ಸೋಮವಾರ ಏದುಸಿರು ಬಿಡುತ್ತಿದೆ ದೊಡ್ಡ ಆಸ್ಪತ್ರೆ ಎನ್ನುವ ಶೀರ್ಷಿಕೆಯಡಿ ವರದಿ ಮಾಡಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ ಪರಿಣಾಮ ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸಿದ್ದಾರೆ. ಇದೀಗ ರಿಪೇರಿಯಾಗಿರುವ ಜನರೇಟರ್‌ಗಳು ಆಸ್ಪತ್ರೆಯ ಎಲ್ಲ ವಿಭಾಗಕ್ಕೆ ಸಾಕಾಗುತ್ತಿಲ್ಲ. ಆದ್ದರಿಂದ ಇನ್ನಷ್ಟು ಜನರೇಟರ್‌ಗಳ ವ್ಯವಸ್ಥೆ ಕಲ್ಪಿಸಬೇಕಿದೆ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

(ಹೆಚ್ಚಿನ ಮಾಹಿತಿಗಾಗಿ ವಿಜಯವಾಣಿಯ ಫೆ.13ರ ಸಂಚಿಕೆ ನೋಡಿ)