ಬಸ್‌ಗೆ ಲಾರಿ ಡಿಕ್ಕಿ, ಪ್ರಯಾಣಿಕರು ಪಾರು

ಗೊರೇಬಾಳ (ರಾಯಚೂರು): ಗ್ರಾಮದ ಹತ್ತಿರ ಸಾರಿಗೆ ಬಸ್‌ಗೆ ಲಾರಿ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗ್ರಾಮದ ಹತ್ತಿರ ಭಾನುವಾರ ರಾತ್ರಿ 9.30 ಗಂಟೆಗೆ ಹಾನಗಲ್‌ದಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಸಾರಿಗೆ ಬಸ್‌ಗೆ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದ್ದು, ಹಲವರಿಗೆ ತರಚಿದ ಗಾಯಗಳಾಗಿವೆ. ಡಿಕ್ಕಿ ರಭಸಕ್ಕೆ ಬಸ್ ಗದ್ದೆಗೆ ನುಗ್ಗಿದೆ. ಚಾಲಕನ ಸಮಯಪ್ರಜ್ಞೆಯಿಂದ ಪಕ್ಕದಲ್ಲಿದ್ದ ಜೋಡು ವಿದ್ಯುತ್ ಕಂಬ ತಪ್ಪಿಸುವ ಮೂಲಕ ಪ್ರಯಾಣಿಕರ ಪ್ರಾಣ ರಕ್ಷಿಸಿದ್ದಾರೆ. ಬಳಿಕ ಬೇರೊಂದು ಬಸ್‌ನಲ್ಲಿ ಪ್ರಯಾಣಿಕರನ್ನು ಕಳಿಸಲಾಯಿತು. ಬಸ್, ಲಾರಿ ಜಖಂಗೊಂಡಿವೆ. ಲಾರಿ ಚಾಲಕನಿಗೆ ಸಣ್ಣಪ್ಟುಗಾಯಗಳಾಗಿದ್ದು, ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಲಾರಿ ಚಾಲಕನ ನಿರ್ಲಕ್ಷೃವೇ ಕಾರಣ ಎನ್ನಲಾಗಿದೆ.