ಹುಲ್ಲು ತುಂಬಿದ ಟ್ರಾಕ್ಟರ್ ಪಲ್ಟಿ

ಗೊರೇಬಾಳ (ರಾಯಚೂರು): ಸಮೀಪದ ಶಾಂತಿನಗರ ಗ್ರಾಮದ ರಾಯಚೂರು-ಗಂಗಾವತಿ ರಾಜ್ಯ ಹೆದ್ದಾರಿಯಲ್ಲಿ ಭತ್ತದ ಹುಲ್ಲು ತುಂಬಿದ ಟ್ರಾಕ್ಟರ್ ಸೋಮವಾರ ಪಲ್ಟಿಯಾಗಿದೆ. ಕುರುಕುಂದಾದಿಂದ ಮಾವಿನಮಡ್ಗು ಗ್ರಾಮಕ್ಕೆ ತೆರಳುತ್ತಿದ್ದ ವೇಳಿ ಈ ಅವಘಡ ಸಂಭವಿಸಿದೆ. ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದ್ದರಿಂದ ಹುಲ್ಲಿನ ಮೇಲೆ ಕುಳಿತಿದ್ದ ನಾಲ್ವರು ಕೂಲಿಕಾರರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಹಿಂದಿನಿಂದ ಬಂದ ಲಾರಿ ಟ್ರ್ಯಾಕ್ಟರ್‌ಅನ್ನು ಹಿಂದಿಕ್ಕುವಾಗ ಅದೇ ಸಮಯಕ್ಕೆ ಸಾರಿಗೆ ಬಸ್ ಎದುರು ಬಂದಿದ್ದರಿಂದ ಲಾರಿ ಟ್ರ್ಯಾಕ್ಟರ್‌ಗೆ ತಾಗಿದೆ. ಇದರಿಂದ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.