ವಿಜೃಂಭಣೆಯ ಗೋಪಾಲಕೃಷ್ಣಸ್ವಾಮಿ ತೆಪ್ಪೋತ್ಸವ

ಕೊಣನೂರು: ಪಟ್ಟಣದ ಶ್ರೀ ಕೊಳಲು ಗೋಪಾಲಕೃಷ್ಣಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಕಾವೇರಿ ನದಿಯಲ್ಲಿ ಕೊಳಲು ಗೋಪಾಲಕೃಷ್ಣಸ್ವಾಮಿಯ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ರುಕ್ಮಣಿ ಸತ್ಯಭಾಮ ಸಮೇತ ಕೊಳಲುಗೋಪಾಲ ಉತ್ಸವಮೂರ್ತಿಯನ್ನು ಟ್ರ್ಯಾಕ್ಟರ್ ನಲ್ಲಿ ಕುಳ್ಳಿರಿಸಿ ಪ್ರಮುಖ ಬೀದಿಗಳಲ್ಲಿ ಉತ್ಸವ ಮಾಡಲಾಯಿತು. ನಂತರ ಕಾವೇರಿ ನದಿ ಬಳಿ ಕರೆತಂದು ತೆಪ್ಪದಲ್ಲಿಟ್ಟು ನದಿಯಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿದ ಬಳಿಕ ತೆಪ್ಪೋತ್ಸವ ನೆರವೇರಿಸಲಾಯಿತು.

ನದಿದಂಡೆಯಲ್ಲಿ ಹಾಕಲಾಗಿದ್ದ ವೇದಿಕೆಯಲ್ಲಿ ದೇವಾನಂದ ವರಪ್ರಸಾದ್ ತಂಡವು ನಡೆಸಿಕೊಟ್ಟ ಸುಗಮಸಂಗೀತ ಕಾರ್ಯಕ್ರಮ ನೆರೆದಿದ್ದ ಭಕ್ತರ ಮನಸೂರೆಗೊಂಡಿತು.