ನಾಯಕನಹಟ್ಟಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಚಿಂತನೆ ನಡೆಸಿಲ್ಲ ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಮಾರಮ್ಮ ದೇವಿ ಜಾತ್ರೋತ್ಸವ ಪ್ರಯಕ್ತ ವಿವಿಧ ಗ್ರಾಮಗಳಿಗೆ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಅವರ ಜತೆಗೆ ಬುಧವಾರ ಭೇಟಿ ನೀಡಿದ್ದ ಸಂದರ್ಭ ಮಾತನಾಡಿದರು.
ಬಳ್ಳಾರಿ ಗ್ರಾಮಾಂತರ ಕ್ಷೇತ್ರದಿಂದ ಕ್ಷೇತ್ರದಿಂದ ಗೆದ್ದು, ಶಾಸಕನಾಗಿದ್ದೆ. ಈ ಕಾರಣಕ್ಕೆ ಸುದ್ದಿ ಹರಡಿರಬಹುದು ಎಂದ ಅವರು, ಮೊಳಕಾಲ್ಮೂರು ಕ್ಷೇತ್ರಕ್ಕೆ ಶಾಸಕನಾಗಿ ನಾಲ್ಕು ತಿಂಗಳು ಆಗಿದೆ. ಜನರ ನಿರೀಕ್ಷೆ ಹೆಚ್ಚಿದ್ದು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದರು.
ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂದು ಚಿಂತನೆ ಮಾಡಿದ್ದೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಪಪಂ ಮಾಜಿ ಸದಸ್ಯ ಬಸಣ್ಣ, ಮುಖಂಡರಾದ ಶ್ರೀಕಾಂತ್, ಮನ್ಸೂರ್, ಎನ್.ಮಾರುತಿ, ವಾಸೀಂ, ಹುಸೇನ್, ದಾದಾಪೀರ್, ಇಸ್ಮಾಯಿಲ್, ಗುರು ತಿಪ್ಪೇಶ್ ಮತ್ತಿತರರಿದ್ದರು.