ಗೂರ್ಖನನ್ನು ನಂಬಿ ತಿರುಪತಿಗೆ ಹೋಗಿ ಬರುವಷ್ಟರಲ್ಲಿ ಎಲ್ಲಾ ಮಾಯ!

ಬೆಂಗಳೂರು: ನಂಬಿಕೆಗೆ ಮತ್ತೊಂದು ಹೆಸರೇ ಗೂರ್ಖಾ ಎಂಬ ಮಾತನ್ನು ಇಲ್ಲೊಬ್ಬ ಗೂರ್ಖಾ ಹುಸಿ ಮಾಡಿದ್ದಾನೆ. ಗೂರ್ಖನ ನಂಬಿ ಮೂರ್ಖರಾದ ಕುಟುಂಬಕ್ಕೆ ಬೇಲಿಯೇ ಎದ್ದು ಹೊಲ ಮೇದಂತಾಗಿದೆ.

ಬನಶಂಕರಿಯಲ್ಲಿ ಗೂರ್ಖನನ್ನು ನಂಬಿ ತಿರುಪತಿಗೆ ತೆರಳಿದ ಮನೆಯೊಂದರ ಮಾಲೀಕರು ಮೋಸ ಹೋಗಿದ್ದಾರೆ. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋಗುತ್ತಿದ್ದೇವೆ ಮನೆ ಕಡೆ ನೋಡಿಕೋ ಎಂದು ಏರಿಯಾದ ಗೂರ್ಖ ಬಹುದ್ದೂರ್ ಥಾಪಾನಿಗೆ ಹೇಳಿ ಹೋಗಿದ್ದೇ ದೊಡ್ಡ ಪ್ರಮಾದವಾಗಿದೆ.

ಮನೆಯವರು ತಿರುಪತಿಗೆ ಹೋಗಿ ಬರುವಷ್ಟರಲ್ಲಿ ಗೂರ್ಖ ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ. ಗೂರ್ಖ ಮನೆಯನ್ನು ಗುಡಿಸಿ ಗುಂಡಾಂತರ ಮಾಡಿದ ಕಳ್ಳತನದ ದೃಶ್ಯಾವಳಿಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. (ದಿಗ್ವಿಜಯ ನ್ಯೂಸ್) 

Leave a Reply

Your email address will not be published. Required fields are marked *