More

    ಇಂದು 25ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಗೂಗಲ್‌, ಎಲ್ಲಾ ಪ್ರಶ್ನೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿರುವ ಟೆಕ್ ದಿಗ್ಗಜ ಕಂಪೆನಿ ‘ಗೂಗಲ್‌’

    ತನ್ನ ಕೇವಲ 25ನೇ ವಯಸ್ಸಿನಲ್ಲೇ ನಮ್ಮ ಎಲ್ಲಾ ಅನುಮಾನಗಳನ್ನು ಮತ್ತು ಪ್ರಶ್ನೆಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿರುವ ಟೆಕ್ ದಿಗ್ಗಜ ಕಂಪೆನಿ ‘ಗೂಗಲ್‌’ ಇಂದು ತನ್ನ 23ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮಾಚರಣೆಯನ್ನು ಒಂದು ಚಿಕ್ಕ ಡೂಡಲ್ ಮೂಲಕ ಆಚರಿಸಿಕೊಂಡಿದೆ.
    ಬ್ರಹ್ಮಾಂಡದ ಭವಿಷ್ಯವನ್ನು ಮೊದಲೇ ಊಹಿಸಿ, ಹೊಸ ಹೊಸ ತಂತ್ರಜ್ಞಾನಗಳನ್ನು ಡೆವಲಪ್ ಮಾಡುವ ಮೂಲಕ ವಿಶ್ವದ ಮನೆ ಮಾತಾಗಿರುವ ಗೂಗಲ್‌ನ ಇಂದಿನ ಹೊಸ ಟ್ಯಾಬ್ ತೆರೆದಂತೆ ಗೂಗಲ್ ಡೂಡಲ್ ಮೇಲೆ ‘G25gle’ ಎಂದು ಬರೆಯಲಾಗಿದೆ. ನೀವು ಅದರ ಮೇಲೆ ಕ್ಲಿಕ್​ ಮಾಡಿದ್ರೆ ಶೈನಿಂಗ್​​ ಮತ್ತು ಗ್ಲಿಟ್ಟರ್​​​ ಪೃಪರ್​​ಗಳ ಸುರಿಮಳೆಯಾಗುತ್ತಿದೆ.


    ಕಳೆದ 25 ವರ್ಷಗಳ ಹಿಂದೆ 1998 ರಲ್ಲಿ ಗೂಗಲ್ ಎಂಬ ಸಣ್ಣ ಸರ್ಚ್ ಎಂಜಿನ್ ಕಂಪೆನಿಯನ್ನು ಸ್ಥಾಪಿಸಿದಾಗ ಇದು ಇಷ್ಟೊಂದು ದೊಡ್ಡ ಮಟ್ಟಕ್ಕೆ ಬೆಳೆಯುತ್ತದೆ ಎಂದು ಅವರು ಊಹಿಸಿರಲಿಲ್ಲ. ಹಾಗಾದರೆ, ಗೂಗಲ್ ಎಂಬ ಮಾಯಾ ಪ್ರಪಂಚ ಬೆಳೆದು ಬಂದಿದ್ದು ಹೇಗೆ ಎಂಬುದನ್ನು ಇಂದು ತಿಳಿಯೋಣ.


    ಸರ್ಚ್ ಎಂಜಿನ್ ಬಗ್ಗೆ ತಿಳಿಯದ ಯಾವೊಬ್ಬ ವ್ಯಕ್ತಿಯೂ ಇಲ್ಲ ಎನ್ನಬಹುದಾದ ‘ಗೂಗಲ್’ ಎಂಬ ಹೆಸರೇ ಅಗಾದ ಎನಿಸುತ್ತದೆ. ವಿಶ್ವದ ಬಹುತೇಕ ಎಲ್ಲಾ ಮಾಹಿತಿಯನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಈ ‘ಗೂಗಲ್’ ಈಗ ಆಂಡ್ರಾಯ್ಡ್, ಯೂಟ್ಯೂಬ್, ಜಿಮೇಲ್, ಡ್ರೈವ್, ಹೀಗೆ ನೂರಾರು ಸೇವೆಗಳನ್ನು ನೀಡುವ ಒಂದು ಅಸಾಧಾರಣ ಸಂಸ್ಥೆಯಾಗಿ ಹೊರಹೊಮ್ಮಿದೆ. ಆಗ ಕೇವಲ 1 ಮಿಲಿಯನ್ ಡಾಲರಿಗೆ ಮಾರಾಟಕ್ಕಿದ್ದ ಗೂಗಲ್ ಇಂದು ಒಂದು ಸಾವಿರ ಬಿಲಿಯನ್ ಡಾಲರ್ ಬೆಲೆಬಾಳುವ ಕಂಪನಿಯಾಗಿ ರೂಪುಗೊಂಡಿರೋದು ಆಶ್ಚರ್ಯ.


    ಕಳೆದ ತಿಂಗಳು, ಗೂಗಲ್ ಸಿಇಒ ಸುಂದರ್ ಪಿಚೈ ಕಂಪನಿಯು ತನ್ನ 25 ನೇ ಹುಟ್ಟುಹಬ್ಬವನ್ನು ಆಚರಿಸುವ ಬಗ್ಗೆ ಬ್ಲಾಗ್ ಬರೆದಿದ್ದಾರೆ. ಇನ್ನೂ ದೊಡ್ಡ ಪ್ರಮಾಣದಲ್ಲಿ ಮುಖ್ಯವಾದ ಕೆಲಸಗಳನ್ನು ಮಾಡಲು AI ಜೊತೆಗಿನ ಅವಕಾಶಗಳ ಕುರಿತು ಕೆಲವು ಆಲೋಚನೆಗಳನ್ನು ಹಂಚಿಕೊಂಡಿದ್ದಾರೆ.


    ಈ ಗೂಗಲ್ ಕಂಪೆನಿ ಹುಟ್ಟಿದ್ದು ಹೇಗೆ?

    ಅಮೆರಿಕದ ಪ್ರತಿಷ್ಠಿತ ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳಾಗಿದ್ದ ಲ್ಯಾರಿ ಪೇಜ್‌ ಹಾಗೂ ಸೆರ್ಗಿ ಬ್ರಿನ್‌ ಅವರು ಗೂಗಲ್ ಅನ್ನು ಸೆಪ್ಟೆಂಬರ್ 4 1998 ರಂದು ಹುಟ್ಟುಹಾಕಿದರು. ಇಂಟರ್ನೆಟ್ ಮಾಹಿತಿಯನ್ನು ಸುಲಭವಾಗಿ ವರ್ಗೀಕರಿಸಿಕೊಳ್ಳುವ ಸೌಲಭ್ಯ ನಿರ್ಮಿಸುವ ಹಂಬಲದೊಂದಿಗೆ ಗೂಗಲ್ ಅಂದು ಜನ್ಮತಾಳಿತ್ತು. ಇದಕ್ಕೆ ಗೂಗಲ್ ಎಂದು ಹೆಸರು ಬರಲು ಸಹ ಒಂದು ವಿಶೇಷ ಕಾರಣವಿತ್ತು. ಗೂಗಲ್ ಅನ್ನು ಈ ಮೊದಲು ಅಪರಿಮಿತ ಎಂಬುದ ಪದಕ್ಕೆ ಅರ್ಥವಾಗಿ ಬಳಸುತ್ತಿದ್ದರು.

    ಇದಕ್ಕೆ ಉದಾಹರಣೆಯನ್ನು ಹೀಗೆ ನೀಡಲಾಗಿದ್ದು, ಈ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಈ ಗೂಗಲ್ ಎಂದು ಕರೆಯುತ್ತಾರೆ. ಸಿಂಪಲ್ ಆಗಿ `1′ ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ ಈ ಗೂಗಲ್’!


    ನಾವೆಲ್ಲಾ ಕೇಳುತ್ತಿರುವ ಕೃತಕ ಬುದ್ದಿಮತ್ತೆ ಅಥವಾ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಎಂಬ ಆಧುನಿಕ ಪ್ರಪಂಚಕ್ಕೆ ಗೂಗಲ್ ಕಂಪೆನಿಯು ಹತ್ತಾರು ವರ್ಷಗಳ ಹಿಂದೆಯೇ ಕಾಲಿಟ್ಟಿದೆ. ಹುಡುಕಾಟಕ್ಕೆಂದೇ ನಿರ್ಮಿತವಾದ ವಿಶೇಷ ಆಲ್ಗಾರಿದಮ್ ಅನ್ನು ಗೂಗಲ್ ಹೊಂದಿದೆ. ಈ ವಿಶೇಷ ಆಲ್ಗಾರಿದಮ್ ಗೂಗಲ್‌ನ ಮೆದುಳಾಗಿದ್ದು, ಈ ಮಾಹಿತಿಯನ್ನು ಗೂಗಲ್ ಯಾವುದೇ ಕಾರಣಕ್ಕೂ ಇತರರಿಗೆ ಬಿಟ್ಟುಕೊಡುವುದಿಲ್ಲ.

    ರಾಜ್ಯೋತ್ಸವ ರಸಪ್ರಶ್ನೆ - 27

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts