ಗೂಗಲ್​ ಪ್ಲಸ್​ನಲ್ಲಿ ಬಗ್​: ಗ್ರಾಹಕರ ಆವೃತ್ತಿ 10 ತಿಂಗಳು ಸ್ಥಗಿತಗೊಳಿಸಲು ನಿರ್ಧಾರ

ಗೂಗಲ್​ನ ಸಾಮಾಜಿಕ ಜಾಲತಾಣ ಗೂಗಲ್​ ಪ್ಲಸ್​ನ ಗ್ರಾಹಕ ಆವೃತ್ತಿಯ ಸುಮಾರು 5,00,000 ಬಳಕೆದಾರರ ದತ್ತಾಂಶ ಸೋರಿಕೆಯಾಗಬಹುದಾದ ಸಾಧ್ಯತೆ ಹೆಚ್ಚಾಗಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಗೂಗಲ್​ ನಿರ್ಧರಿಸಿದೆ.

ಗೂಗಲ್​ ಪ್ಲಸ್​ನಲ್ಲಿ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ಬಗ್​ವೊಂದು (ತಂತ್ರಾಂಶ ಲೋಪ) ಉಳಿದುಕೊಂಡಿದ್ದು, ಅದನ್ನು ಸರಿಪಡಿಸುವ ಹಿನ್ನೆಲೆಯಲ್ಲಿ 10 ತಿಂಗಳ ಕಾಲ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗೂಗಲ್​ ತನ್ನ ಬ್ಲಾಗ್​ನಲ್ಲಿ ತಿಳಿಸಿದೆ.

ಗೂಗಲ್​ ಪ್ಲಸ್​ನಲ್ಲಿ ಇರುವ ದೋಷವನ್ನು ಮಾರ್ಚ್​ನಲ್ಲೇ ಪತ್ತೆಹಚ್ಚಿದ ಗೂಗಲ್​, ಅದನ್ನು ಸರಿಪಡಿಸಲು ಯತ್ನಿಸಿತ್ತು. ಆಗಲೂ ಬಳಕೆದಾರರ ದತ್ತಾಂಶ ಲೀಕ್​ ಆಗುತ್ತಿರುವ ಬಗ್ಗೆ ಯಾವುದೇ ಬಲವಾದ ಸಾಕ್ಷಿ ಸಿಕ್ಕಿರಲಿಲ್ಲ. ಯಾರಾದರೂ ಡೆವಲಪರ್ಸ್​ ಗೆ ಇದು ತಿಳಿದಿದೆಯಾ? ಅದರಲ್ಲಿರುವ ದೋಷವನ್ನು ಹೇಗೆ ಸರಿಪಡಿಸಬೇಕು ಎಂಬ ಬಗ್ಗೆಯೂ ಗೂಗಲ್​ ಪರಿಶೀಲಿಸಿತ್ತು ಎಂದು ಸಂಸ್ಥೆ ಮಾಹಿತಿ ನೀಡಿದೆ.
ಗೂಗಲ್​ ಪ್ಲಸ್​ನಲ್ಲಿನ ದೋಷದ ಬಗ್ಗೆ ಯಾರಾದರೂ ಹೊರಗಿನ ಡೆವಲಪರ್ಸ್​ಗೆ ತಿಳಿದಿತ್ತಾ ಅಥವಾಎಪಿಐನ್ನು ದುರುಪಯೋಗ ಪಡಿಸಿಕೊಂಡಿಕೊಂಡಿರುವ ಬಗ್ಗೆ ನಮ್ಮ ಬಳಿ ಪುರಾವೆಗಳಿಲ್ಲ. ಹಾಗೇ ಯಾವುದೇ ಪ್ರೊಫೈಲ್​ಗಳು ದುರ್ಬಳಕೆಯಾಗಿದ್ದಕ್ಕೂ ದಾಖಲೆಗಳಿಲ್ಲ ಎಂದು ಹೇಳಿದೆ. (ಏಜೆನ್ಸೀಸ್​)