ಪ್ರಜಾಪ್ರಭುತ್ವ ಹಬ್ಬದ ಸಂಭ್ರಮ ಗೂಗಲ್​ ಡೂಡಲ್​ನಲ್ಲಿ ; ಮತದಾನ ಪ್ರಕ್ರಿಯೆ ಮಾಹಿತಿ, ಏಳು ಹಂತಗಳ ವಿವರ

ನವದೆಹಲಿ: ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವೆನಿಸಿಕೊಂಡ ಭಾರತದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದಿನಿಂದ ಶುರುವಾಗಿದ್ದು, ಗೂಗಲ್​ ಡೂಡಲ್​ ಕೂಡ ಈ ಮತದಾನ ಪ್ರಾರಂಭವನ್ನು ಸಂಭ್ರಮಿಸಿದೆ.

ತೋರು ಬೆರಳಿಗೆ ಶಾಯಿ ಹಚ್ಚಿದ ಚಿತ್ರವನ್ನು ಗೂಗಲ್​ ಡೂಡಲ್​ ಇಂದು ತೋರಿಸಿದೆ. ಮತದಾನ ಮಾಡಿದ ಬೆರಳಿಗೆ ಶಾಯಿ ಹಚ್ಚಿದ ಚಿತ್ರದ ಮೇಲೆ ಕ್ಲಿಕ್​ ಮಾಡಿದರೆ ಅಲ್ಲಿ ಮತದಾನದ ಪ್ರಕ್ರಿಯೆಗಳ ವಿವರಣೆ ಇದೆ. ಅಷ್ಟೇ ಅಲ್ಲದೆ, ಇದೇ ಮೊದಲ ಬಾರಿಗೆ ಮತದಾನ ಮಾಡುವವರಿಗೆ ಅಗತ್ಯ ಮಾಹಿತಿಗಳನ್ನೂ ಗೂಗಲ್​ ಡೂಡಲ್​ ನೀಡಿದೆ.

ಒಟ್ಟು ಏಳು ಹಂತದಲ್ಲಿ ನಡೆಯಲಿರುವ ಚುನಾವಣೆಯ ಮೊದಲ ಹಂತ ಇಂದು ಪ್ರಾರಂಭವಾಗಿದ್ದು, ಏಪ್ರಿಲ್​ 18, 23, 29, ಮೇ 6, ಮೇ 12 ಮತ್ತು ಮೇ 19ರಂದು ಮತದಾನ ಪ್ರಕ್ರಿಯೆ ನಡೆಯಲಿದೆ.

Leave a Reply

Your email address will not be published. Required fields are marked *