Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಸುಧಾರಣೆ ಹಾದಿಯಲ್ಲಿನ ನೋವು-ನಲಿವು

Friday, 29.06.2018, 3:03 AM       No Comments

ಮುಂಚೆ ಭಾರತದಲ್ಲಿ ಹೂಡಿಕೆ ಮಾಡುತ್ತಿದ್ದ ವಿದೇಶಿಗರು ಹಾಗೂ ಭಾರತೀಯ ಉದ್ಯಮಿಗಳು ಇಲ್ಲಿನ ಸಂಕೀರ್ಣ ತೆರಿಗೆ ವ್ಯವಸ್ಥೆಯನ್ನು ‘ತೆರಿಗೆ ಭಯೋತ್ಪಾದನೆ’ ಎಂದು ಟೀಕಿಸುತ್ತಿದ್ದರು. ದಶಕಗಳ ಯತ್ನದ ಬಳಿಕ ಭಾರತದಲ್ಲಿ ಐತಿಹಾಸಿಕ ಜಿಎಸ್​ಟಿ 2017ರ ಜು.1ರಂದು ಜಾರಿಯಾಯಿತು. ನೋಟು ಅಮಾನ್ಯೀಕರಣ ಜಾರಿಯಾದ ಕೆಲ ತಿಂಗಳಲ್ಲಿಯೇ ಜಿಎಸ್​ಟಿ ಕೂಡ ಜಾರಿಯಾಗಿ ಆರ್ಥಿಕ ಅಭಿವೃದ್ಧಿಗೆ ದೊಡ್ಡ ಹೊಡೆತ ಎಂಬ ಟೀಕೆಗೂ ಗುರಿಯಾಯಿತು. ಅದರೆ ಒಂದು ವರ್ಷದ ಬಳಿಕ ದೇಶದ ಆರ್ಥಿಕ ಸುಧಾರಣೆಯಲ್ಲಿ ಮೈಲಿಗಲ್ಲು ಎಂದು ಬಿಂಬಿತವಾಗುತ್ತಿದೆ. ಜಿಎಸ್​ಟಿ ಜಾರಿಯಾಗಿ ಜುಲೈ 1ಕ್ಕೆ ಒಂದು ವರ್ಷವಾಗುತ್ತಿರುವ ಹಿನ್ನೆಲೆಯಲ್ಲಿ ‘ವಿಜಯವಾಣಿ’ ಮೂರು ಕಂತುಗಳಲ್ಲಿ ಈ ಕುರಿತ ಅವಲೋಕನ ನೀಡಲಿದೆ.

| ಸಿ.ಎಸ್. ಸುಧೀರ್ , ಸಂಸ್ಥಾಪಕರು, ಸಿಇಒ ಇಂಡಿಯನ್​ವುನಿ ಡಾಟ್ ಕಾಂ

ಒಂದು ದೇಶ, ಒಂದು ತೆರಿಗೆ, ಒಂದು ವರ್ಷ. ಹೌದು, ಭಾರತದ ಅತಿ ದೊಡ್ಡ ತೆರಿಗೆ ಸುಧಾರಣೆಗೆ ಈಗ ವರ್ಷದ ಹರ್ಷ. ಹತ್ತು ವರ್ಷಗಳ ಕಾಯುವಿಕೆಯ ಬಳಿಕ 2017 ರ ಜುಲೈ 1ರಂದು ಜಾರಿಗೆ ಬಂದ ಜಿಎಸ್​ಟಿ(ಸರಕು ಮತ್ತು ಸೇವಾ ತೆರಿಗೆ) ಸ್ವಾತಂತ್ರ್ಯ ನಂತರದ ಅತಿ ದೊಡ್ಡ ಆರ್ಥಿಕ ಸುಧಾರಣೆ ಎಂದೇ ಬಿಂಬಿತವಾಗಿದೆ.

ಯಾವುದೇ ದೇಶದಲ್ಲಿ ತೆರಿಗೆ ಸುಧಾರಣೆಗಳಾಗುವುದು ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳ ನೆಲೆಗಟ್ಟಿನಲ್ಲಿ. ಹಾಗಾದರೆ ಜಿಎಸ್​ಟಿ ನಿಜಕ್ಕೂ ‘ಗುಡ್ ಆಡ್ ಸಿಂಪಲ್ ಟ್ಯಾಕ್ಸ್’ ವ್ಯವಸ್ಥೆಯಾ? ಅಥವಾ ಕೆಲವರು ಟೀಕಿಸುವಂತೆ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ಪದ್ಧತಿನಾ? ಜಿಎಸ್​ಟಿಯಿಂದ ಬಡವರಿಗೆ ಲಾಭವಾಗಿದೆಯಾ? ಭಾರತದ ಆರ್ಥಿಕತೆ ಸರಿದಾರಿಯಲ್ಲಿ ಸಾಗುತ್ತಿದೆಯಾ? ಇಂಥ ಹತ್ತಾರು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆದಿದೆ.

ಯಾವುದೇ ದೊಡ್ಡ ಯೋಜನೆಯನ್ನು ಕಾರ್ಯಗತಗೊಳಿಸಬೇಕಾದರೆ ಗೊಂದಲಗಳು ಸಹಜ. ಆದರೆ ಗೊಂದಲಗಳು ಉಂಟಾದ ವೇಳೆಯಲ್ಲೇ ಉತ್ತರವೂ ಸಿಗುತ್ತದೆ ಎನ್ನುವ ಮಾತಿನಂತೆ, ಕೇಂದ್ರ ಸರ್ಕಾರವು ಜಿಎಸ್​ಟಿ ವ್ಯವಸ್ಥೆಯಲ್ಲಿದ್ದ ಆರಂಭಿಕ ಅಡೆತಡೆಗಳನ್ನು ಕಾಲಕಾಲಕ್ಕೆ ನೀಗಿಸುತ್ತಾ ಸಾಗಿತು. ಹಾಗೆಂದ ಮಾತ್ರಕ್ಕೆ ಈಗ ಎಲ್ಲವೂ ಸರಿಯಿದೆ ಎಂದಲ್ಲ. ಈಗಲೂ ಲೋಪಗಳಿವೆ. ಆದರೆ ವ್ಯವಸ್ಥೆಯನ್ನು ಸರಿದಾರಿಗೆ ತರುವ ಎಲ್ಲ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿವೆ.

ಹತ್ತಾರು ಮಾದರಿಯ ತೆರಿಗೆಗಳನ್ನು ಏಕೀಕೃತ ವ್ಯವಸ್ಥೆಯೊಳಗೆ ತರುವಲ್ಲಿ ಜಿಎಸ್​ಟಿ ಯಶ ಸಾಧಿಸಿದ್ದು, ವಾಣಿಜ್ಯ ವಹಿವಾಟಿಗೆ ಪೂರಕವಾದ ವಾತಾವರಣ ಸೃಷ್ಟಿ ಮಾಡುವಲ್ಲಿ ಇದು ಸಫಲವಾಗಿದೆ. ಇನ್ನೊಂದೆಡೆ ಆರ್ಥಿಕ ಅಭಿವೃದ್ಧಿ ದರ ಸುಧಾರಣೆಗೂ ಪರೋಕ್ಷವಾಗಿ ಇದರಿಂದ ನೆರವಾಗುತ್ತದೆ.

?ಆರ್ಥಿಕ ಸಮೀಕ್ಷೆ ಪ್ರಕಾರ 2017-18 ರ ಜಿಡಿಪಿ ದರ ಶೇ. 6.5 ರಿಂದ ಶೇ. 6.7ರವರೆಗೆ ಇರಲಿದೆ ಎಂದು ಅಂದಾಜು ಮಾಡಲಾಗಿದೆ. ? 2016- 17 ರ ಆರ್ಥಿಕ ಸಮೀಕ್ಷೆ ಪ್ರಗತಿ ದರ ಶೇ. 7.1ಕ್ಕೆ ಹೋಲಿಸಿದಾಗ ಇದು ಕಡಿಮೆ ಎನಿಸುತ್ತದೆ. ? ಜಿಎಸ್​ಟಿಯ ಅನುಷ್ಠಾನ ಹಂತದಲ್ಲಿ ಇದು ನಿರೀಕ್ಷಿತ ಎನ್ನುವುದನ್ನು ಮೊದಲೇ ಅಂದಾಜು ಮಾಡಲಾಗಿದೆ. ?2018 -19 ನೇ ಸಾಲಿನಲ್ಲಿ ಜಿಡಿಪಿ ದರ ಮತ್ತೆ ಶೇ.7 ರಿಂದ ಶೇ. 7.5ರಷ್ಟು ಪುಟಿದೇಳಲಿದ್ದು ಆರ್ಥಿಕತೆ ಮತ್ತಷ್ಟು ಚೇತರಿಕೆಯತ್ತ ಮುನ್ನಡೆ ಯಲಿದೆ. ?-ಠಿ; 80,000 ಕೋಟಿಯಿಂದ -ಠಿ;1 ಲಕ್ಷ ಕೋಟಿಯ ದಾಖಲೆ ತೆರಿಗೆ ಸಂಗ್ರಹ ಇದಕ್ಕೆ ಪೂರಕವಾಗಿದೆ.

ರಾಜಕೀಯ ಜಿದ್ದಾಜಿದ್ದಿಯ ನಡುವೆ ಅರಳಿದ ಜಿಎಸ್​ಟಿ

15 ವರ್ಷಗಳ ಹಗ್ಗಜಗ್ಗಾಟದ ನಡುವೆ ಜಿಎಸ್​ಟಿ ಜಾರಿಗೆ ತರುವ ಸರ್ಕಾರದ ಕೆಲಸ ಅಷ್ಟು ಸರಳ ವಾಗಿರಲಿಲ್ಲ. ಎಲ್ಲ ಪಕ್ಷಗಳನ್ನು ಒಗ್ಗೂಡಿಸುವ ಜತೆಗೆ, ರಾಜ್ಯಗಳಲ್ಲಿದ್ದ ವಿವಿಧ ಸರ್ಕಾರಗಳ ಮನವೊಲಿಸುವ ಮಹತ್ತರ ಜವಾಬ್ದಾರಿ ಕೇಂದ್ರ ಸರ್ಕಾರದ ಮೇಲಿತ್ತು. ತೆರಿಗೆ ಸಂಗ್ರಹ ಕುಠಿತವಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯಗಳು ಜಿಎಸ್​ಟಿ ಅನುಷ್ಠಾನಕ್ಕೆ ಅಡ್ಡಗಾಲು ಹಾಕಿದ್ದವು. ಅದಾಗಿಯೂ ಬೇಕು, ಬೇಡ, ಟೀಕೆ, ಟಿಪ್ಪಣಿ, ಗೊಂದಲ, ಆತಂಕ, ಆರೋಪ- ಪ್ರತ್ಯಾರೋಪಗಳ ನಡುವೆ ನರೇಂದ್ರ ಮೋದಿ ಸರ್ಕಾರ ಐತಿಹಾಸಿಕ ಜಿಎಸ್​ಟಿ ಜಾರಿಗೊಳಿಸಿತು. ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ‘ಗುಡ್ ಆಂಡ್ ಸಿಂಪಲ್ ಟ್ಯಾಕ್ಸ್’ ಹಾಗೂ ‘ಗಬ್ಬರ್ ಸಿಂಗ್ ಟ್ಯಾಕ್ಸ್’ ವಾಗ್ವಾದಕ್ಕೆ ವೇದಿಕೆಯಾಯಿತು.

ಜಿಎಸ್​ಟಿ ದೋಷ ನಿವಾರಣೆ ಮತ್ತು ವೈರುಧ್ಯ

 • ಜಿಎಸ್​ಟಿ ಆರಂಭವಾದಾಗ ವಾರ್ಷಿಕ 75 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ಹೋಟೆಲ್​ಗಳಿಗೆ ಶೇ. 12ರಷ್ಟು ಮತ್ತು ಎಸಿ ಹಾಗೂ ಐಷಾರಾಮಿ ಹೋಟೆಲ್​ಗಳಿಗೆ ಶೇ.18 ತೆರಿಗೆ ಇತ್ತು.
 • ಈ ಬಗ್ಗೆ ದೇಶಾದ್ಯಂತ ವ್ಯಾಪಕ ಟೀಕೆ ವ್ಯಕ್ತವಾದಾಗ ಜಿಎಸ್​ಟಿ ಮಂಡಳಿ ತೆರಿಗೆಯನ್ನು ಶೇ.5ಕ್ಕೆ ಇಳಿಸಿತು.
 • ಈಗಲೂ ಜಿಎಸ್​ಟಿಯ ಕೆಲ ದರಗಳಲ್ಲಿ ವೈರುಧ್ಯಗಳಿವೆ. ಚಿನ್ನದ ಮೇಲೆ ಶೇ.3 ಜಿಎಸ್​ಟಿ ಮಾತ್ರ ಇದೆ. ಇದನ್ನು ಶೇ. 8 ರಿಂದ ಶೇ. 10 ಮಾಡಿದರೆ ಯಾವುದೇ ತಪ್ಪಿಲ್ಲ.
 • ಪೆಟ್ರೋಲ್ ಉತ್ಪನ್ನಗಳನ್ನು ಜಿಎಸ್​ಟಿ ವ್ಯಾಪ್ತಿಗೆ ತಂದಿಲ್ಲ. ಕೇಂದ್ರ ಮತ್ತು ರಾಜ್ಯದ ತೆರಿಗೆ ಭಾರ ಕೂಡಿದರೆ ಶೇ. 50 ತೆರಿಗೆಯನ್ನು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೇರಲಾಗುತ್ತಿದೆ.

ಜಿಎಸ್​ಟಿ ಹಿನ್ನೆಲೆ

 • ಜಿಎಸ್​ಟಿ ಮಾದರಿ ಕುರಿತ ವಿವರಣೆಗೆ 1999ರಲ್ಲಿ ವಾಜಪೇಯಿ ಸರ್ಕಾರದಿಂದ ಸಲಹಾ ಮಂಡಳಿ ರಚನೆ
 • ತೆರಿಗೆ ಸುಧಾರಣೆಗೆ ಸೂಕ್ತ ಶಿಫಾರಸು ನೀಡುವಂತೆ 2002ರಲ್ಲಿ ವಿಜಯ್ ಕೇಳ್ಕರ್ ಸಮಿತಿ ರಚನೆ
 • 2005ರಲ್ಲಿ ಜಿಎಸ್​ಟಿ ಜಾರಿಗೆ ಕೇಳ್ಕರ್ ಸಮಿತಿಯಿಂದ ಶಿಫಾರಸು
 • 2010ರಲ್ಲಿ ಯುಪಿಎ ಸರ್ಕಾರದಿಂದ ಜಿಎಸ್​ಟಿ ಜಾರಿಯ ಘೋಷಣೆ
 • ತೆರಿಗೆ ಪ್ರಮಾಣ ಕುರಿತು ಒಮ್ಮತ ಮೂಡದ ಹಿನ್ನೆಲೆಯಲ್ಲಿ ರಚನೆಯಲ್ಲಿ ವಿಳಂಬ
 • 2014ರಲ್ಲಿ ನರೇಂದ್ರ ಮೋದಿ ಸರ್ಕಾರ ಬಂದ ಬಳಿಕ ಜಿಎಸ್​ಟಿ ಅನುಷ್ಠಾನಕ್ಕೆ ವೇಗ
 • 2016ರ ಆಗಸ್ಟ್​ನಲ್ಲಿ ಜಿಎಸ್​ಟಿ ಕಾಯ್ದೆಗೆ ಉಭಯ ಸದನಗಳಿಂದ ಒಪ್ಪಿಗೆ

ಜಿಎಸ್​ಟಿಯ ಮೊದಲ ಯಶಸ್ಸು ಎಂದರೆ ಸಂಕೀರ್ಣ ತೆರಿಗೆ ವ್ಯವಸ್ಥೆಗೆ ತೆರೆ ಎಳೆದು, ಸರಳ ರೂಪ ನೀಡಿದ್ದು. ಜಿಎಸ್​ಟಿ ಜಾರಿ ಬಳಿಕ ಹೊಸದಾಗಿ 50 ಲಕ್ಷ ಜನರು ತೆರಿಗೆ ವ್ಯಾಪ್ತಿಗೆ ಬಂದಿದ್ದಾರೆ. ತೆರಿಗೆ ಸಂಗ್ರಹದಲ್ಲಿ ಶೇ.13ರ ಬೆಳವಣಿಗೆಯಾಗಿದೆ. ಬೇರೆ ದೇಶಗಳಲ್ಲಿನ ಜಿಎಸ್​ಟಿಗೆ ಹೋಲಿಸಿ ಭಾರತದಲ್ಲಿನ 4 ಹಂತದ ತೆರಿಗೆಯನ್ನು ಟೀಕಿಸಿದರೂ ಕೂಡ ಇದೇ ವ್ಯವಸ್ಥೆಯು ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

| ಹಸ್ಮುಖ್ ಅದಿಯಾ, ಕೇಂದ್ರ ಹಣಕಾಸು ಕಾರ್ಯದರ್ಶಿ

Leave a Reply

Your email address will not be published. Required fields are marked *

Back To Top