More

    ರಾಜಮನೆತನದ ವೈಭೋಗಕ್ಕೆ ಗುಡ್​ ಬೈ ಹೇಳಿದ ಪ್ರಿನ್ಸ್​ ಹ್ಯಾರಿ, ಮೆಘನ್​ ದಂಪತಿ: ಬಕಿಂಗ್​ಹ್ಯಾಮ್​ ಅರಮನೆ ಅಧಿಕೃತ ಘೋಷಣೆ

    ಬಕಿಂಗ್​ಹ್ಯಾಮ್​: ರಾಜ ಮನೆತನದ ವೈಭೋಗಕ್ಕೆ ಗುಡ್​ ಬೈ ಹೇಳಿ ಸರಳ ಜೀವನಕ್ಕೆ ಹಲೋ ಹೇಳಿದ್ದಾರೆ ಹ್ಯಾರಿ ಮತ್ತು ಮಡದಿ ಮೆಘನ್.

    ರಾಜ ಮನೆತನದ ಈ ದಂಪತಿ ಇನ್ನು ಅವರ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಎಂದು ಬಕಿಂಗ್​ಹ್ಯಾಮ್​ ಅರಮನೆ ಘೋಷಿಸಿದೆ. ಅಲ್ಲದೆ 2020ರ ವಸಂತ ಋತುವಿನಲ್ಲಿ ಅರಮನೆ ಹೊಸ ವ್ಯವಸ್ಥೆಗಳು ಜಾರಿಯಾಗಲಿವೆ ಎಂದು ತಿಳಿಸಿದೆ.

    ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಹ್ಯಾರಿ ಮತ್ತು ಮೇಘನ್​ ದಂಪತಿ ರಾಜ ಮನೆತನದ ವೈಭೋಗಗಳನ್ನು ತೊರೆಯುವುದಾಗಿ ಘೋಷಿಸಿದ್ದರು. ರಾಜ ಮನೆತನಕ್ಕೆ ಇರುವ ಗೌರವಗಳಾದ ಘನತೆವೆತ್ತ ರಾಜ ಮತ್ತು ರಾಣಿ ಎಂಬ ಪದನಾಮಗಳನ್ನು ಬೇಡ ಎಂದಿದ್ದರು.

    ಪ್ರಿನ್ಸ್ ಚಾರ್ಲ್ಸ್ ಅವರೊಂದಿಗೆ ವಿಚ್ಚೇದನ ಪಡೆದಿದ್ದ ಹ್ಯಾರಿ ಅವರ ತಾಯಿ ಡಯನಾ ಅವರೂ ತಮ್ಮ ಹೆಸರಿನೊಂದಿಗಿದ್ದ ಘನತೆವೆತ್ತ ಎಂಬ ಪದನಾಮವನ್ನು ತೆಗೆದುಹಾಕಿದ್ದರು. ಆದರೆ ಹ್ಯಾರಿ ಅವರು ರಾಜ ಮನೆತನದ ವೈಭೋಗಗಳನ್ನು ತೊರೆದರೂ ಅವರು ಬ್ರಿಟಿಷ್​ ಸಿಂಹಾಸನದ ದೊರೆಯಾಗಿರಲಿದ್ದಾರೆ.

    ಅರಮನೆ ಜತೆಗಿನ ಒಪ್ಪಂದದಲ್ಲಿ ಹ್ಯಾರಿ ದಂಪತಿ ಅವರು ವಿಂಡ್ಸರ್​ ಕಾಸ್ಟಲ್​ನ ತಮ್ಮ ಮನೆಯ ನವೀಕರಣಕ್ಕಾಗಿ ವೆಚ್ಚ ಮಾಡಿರುವ ಸಾರ್ವಜನಿಕರ ತೆರಿಗೆ ಮೊತ್ತ 2.4 ಮಿಲಿಯನ್​ ಪೌಂಡ್ಸ್​ಗಳನ್ನು ಮರಳಿಸಬೇಕೆಂದು ತಿಳಿಸಲಾಗಿದೆ. ಇಂಗ್ಲೆಂಡ್​ನ ಫ್ರಾಗ್​ಮೋರ್​ ಕಾಟೇಜ್​ನಲ್ಲೆ ಇವರು ಉಳಿಯಲಿದ್ದಾರೆ.

    ಈ ಒಪ್ಪಂದ ಕೆಲ ದಿನಗಳ ಹಿಂದೆ ತಾವು ರಾಜಮನೆತನದ ವೈಭೋಗಗಳಿಂದ ದೂರವಾಗುತ್ತೇವೆ ಎಂದು ಘೋಷಣೆ ಮಾಡಿದ ನಂತರ ಈ ಒಪ್ಪಂದವನ್ನು ಮಾಡಲಾಗಿದೆ. ಆಗ ಅವರು ಕೆನಡಾದಲ್ಲಿ ತಾತ್ಕಾಲಿಕವಾಗಿ ತಂಗಲಿದ್ದರು ಎಂದು ತಿಳಿಸಿದ್ದರು.

    93 ವರ್ಷದ ರಾಣಿ ಎಲಿಜಬೆತ್​ 2, “ಅವರು ಯಾವಾಗಲೂ ರಾಜ ಮನೆತನದ ಗೌರವ, ವೈಭೋಗದಲ್ಲಿ ಇರಬೇಕೆಂಬುದು ನನ್ನ ಇಚ್ಛೆಯಾಗಿತ್ತು. ಹ್ಯಾರಿ, ಮೆಘನ್ ಮತ್ತು ಆರ್ಚೀ ಅವರು ನನ್ನ ಕುಟುಂಬದ ಹೆಚ್ಚು ಪ್ರೀತಿಸುವ ಸದಸ್ಯರು” ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮುಂದಿನ ಅವರ ಜೀವನದ ಬಗ್ಗೆ ಮತ್ತು ಅವರ ಖರ್ಚು ವೆಚ್ಚಗಳ ಬಗ್ಗೆ, ಅವರ ರಕ್ಷಣೆಯ ವೆಚ್ಚದ ಬಗ್ಗೆ ಅರಮನೆ ಯಾವ ಮಾಹಿತಿಯನ್ನು ನೀಡಿಲ್ಲ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts