ಉಪ್ಪಿನಬೆಟಗೇರಿ: ಅಧಿಕಾರ ಯಾರಿಗೂ ಶಾಶ್ವತವಲ್ಲ, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸಿರುವ ತೃಪ್ತಿ ನನಗಿದೆ ಎಂದು ಗ್ರಾಪಂ ನಿಕಟಪೂರ್ವ ಅಧ್ಯಕ್ಷ ಮಂಜುನಾಥ ಮಸೂತಿ ಹೇಳಿದರು.
ಗ್ರಾಪಂ ಕಚೇರಿಯಲ್ಲಿ ಮಂಗಳವಾರ ಏರ್ಪಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ನನ್ನ ಅಧಿಕಾರದ ಅವಧಿ ಇನ್ನೂ ಇರುವಾಗಲೇ ವೈಯಕ್ತಿಕ ಕಾರಣದಿಂದ ರಾಜೀನಾಮೆ ನೀಡಿದ್ದೇನೆ. ಮುಂದಿನ 15 ತಿಂಗಳ ಅವಧಿಗೆ ಯಾರೇ ಅಧ್ಯಕ್ಷರಾದರು ಕೂಡ ಸಂಪೂರ್ಣ ಸಹಕಾರ ನೀಡುತ್ತೇನೆ’ ಎಂದರು.
ಸದಸ್ಯ ಮಹಾವೀರ ಅಷ್ಟಗಿ ಮಾತನಾಡಿದರು. ನಂತರ ಮಂಜುನಾಥ ಮಸೂತಿ, ಉಪಾಧ್ಯಕ್ಷೆ ಜೈಬುನಬಿ ಜೋರಮ್ಮನವರನ್ನು ಗೌರವಿಸಲಾಯಿತು.
ಪಿಡಿಒ ಬಿ.ಎ. ಬಾವಾಕಾನವರ, ಕಾರ್ಯದರ್ಶಿ ವೈ.ಬಿ. ಹಂದೂರ ಇತರರಿದ್ದರು. ವಿರೂಪಾಕ್ಷಪ್ಪ ಬಮ್ಮಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.