ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಕಾರ್ಯ

blank

ತರೀಕೆರೆ: ಸರ್ಕಾರ ಪಂಚಗ್ಯಾರಂಟಿ ಯೋಜನೆಗೆ ಬೃಹತ್ ಮೊತ್ತ ಮೀಸಲಿರಿಸಿದ್ದು, ಇದರಿಂದ ಎದುರಾಗಿರುವ ಆರ್ಥಿಕ ಸಂಕಷ್ಟದ ನಡುವೆಯೂ ಉತ್ತಮ ಕಾರ್ಯಕ್ರಮ ಅನುಷ್ಟಾನಗೊಳಿಸಲು ಯೋಜನೆ ರೂಪಿಸುತ್ತಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಶಾಸಕರ ಅನುದಾನದಲ್ಲಿ ತಾಲೂಕಿನ ಗೋಪಾಲ ಗ್ರಾಮದಲ್ಲಿ 80 ಲಕ್ಷ ರೂ. ಬಿ ಮತ್ತು ಬಿ.ಗುರುಪುರದಲ್ಲಿ 1 ಕೋಟಿ ರೂ. ಹಾಗೂ ಬರಗೇನಹಳ್ಳಿ ಗ್ರಾಪಂ ವ್ಯಾಪ್ತಿಯ ಗೌಳಿಗರ ಕ್ಯಾಂಪ್‌ನಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ 94 ಸಿ ಮತ್ತು ಡಿ ಸಮಸ್ಯೆ ತೀವ್ರಗೊಂಡಿದ್ದು, ಈ ದಿಸೆಯಲ್ಲಿ ಸರ್ಕಾರಕ್ಕೆ ಕಂದಾಯ ಹಾಗೂ ಉಪ ಗ್ರಾಮರಚನೆಗೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ. ಅಜ್ಜಂಪುರ ಹಾಗೂ ತರೀಕೆರೆ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಿಂದ ಹಾಳಾದ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿ ವಿಶೇಷ ಅನುದಾನದಲ್ಲಿ ಹಣ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಮಂಜೂರಾದ ಕೂಡಲೇ ಆದ್ಯತೆ ಅನುಸಾರ ಕಾಮಗಾರಿ ಆರಂಭಿಸಲಾಗುವುದು ಎಂದರು.
ವರುಣನ ಕೃಪೆಯಿಂದ ಸಮೃದ್ಧ ಮಳೆಯಾಗಿದ್ದು, ಜಲಮೂಲ ಭರ್ತಿಯಾಗಿ ರೈತರ ಸಮಸ್ಯೆ ನೀಗಿದೆ. ಇಷ್ಟಾದರೂ ನೀರಾವರಿ ಯೋಜನೆ ಅನುಷ್ಟಾನಕ್ಕೆ ಚಿಂತನೆ ನಡೆದಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅದಕ್ಕೆ ಬೇಕಾದ ಅನುದಾನದ ಬೇಡಿಕೆ ಸಲ್ಲಿಸಲಾಗುವುದು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಮುನಿರಾಜು, ತಾಪಂ ಮಾಜಿ ಸದಸ್ಯ ಕೆಂಪೇಗೌಡ, ಕಾಂಗ್ರೆಸ್ ಪ್ರಮುಖರಾದ ಕೆ.ರವಿಕಿಶೋರ್, ಎಚ್.ವಿಶ್ವನಾಥ್, ಶಿವಕುಮಾರ್, ರವಿ ಮತ್ತಿತರರಿದ್ದರು.

Share This Article

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗಲು ಕಾರಣ ಏನು ಗೊತ್ತಾ?; ಇಲ್ಲಿದೆ ಕಂಪ್ಲೀಟ್​ ಮಾಹಿತಿ | Health Tips

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಸಹಜ. ಈ ಅವಧಿಯಲ್ಲಿ ತೂಕ ಹೆಚ್ಚಾಗುವುದು ಮಗು ಸರಿಯಾಗಿ ಬೆಳೆಯುತ್ತಿದೆ ಎಂಬುದರ…

ಗರ್ಭಿಣಿಯರು ಈ ಪದಾರ್ಥಗಳಿಂದ ದೂರವಿರಿ; ಇಲ್ಲವಾದಲ್ಲಿ ಮಗುವಿಗೆ ಅಪಾಯ ತಪ್ಪಿದ್ದಲ್ಲ | Health Tips

ಪ್ರತಿಯೊಬ್ಬ ಮಹಿಳೆಯೂ ತನ್ನ ಗರ್ಭಾವಸ್ಥೆಯು ಆರೋಗ್ಯಕರವಾಗಿರಬೇಕು ಎಂದು ಬಯಸುತ್ತಾರೆ. ಇದರಿಂದ ತಾಯಿ ಮತ್ತು ಭ್ರೂಣದ ಆರೋಗ್ಯವು…

ಮದುವೆಯಾಗಲು ಸೂಕ್ತ ವಯಸ್ಸು ಯಾವುದು?; ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ … | Marriage

ನಮ್ಮಲ್ಲಿ ಹೆಚ್ಚಿನವರು ತಾವು ಬಯಸಿ ಅಥವಾ ಬಯಸದಿದ್ದರೂ ಒಂದು ಹಂತದಲ್ಲಿ ಮದುವೆಯಾಗಲು ಒತ್ತಡವನ್ನು ಅನುಭವಿಸುತ್ತಾರೆ. ವಯಸ್ಸು…