18.1 C
Bangalore
Saturday, December 7, 2019

ಭಾರತಕ್ಕೆ ಅಭಿನಂದನ್

Latest News

ಅಂಗನವಾಡಿಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಿ

ಕಾರವಾರ: ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.

ಖರೀದಿ ಕೇಂದ್ರ ತೆರೆಯಲು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ಕೃಷಿ ಮಾರಾಟ ಇಲಾಖೆ

ಚಿತ್ರದುರ್ಗ: ಬೆಂಬಲ ಬೆಲೆ ಯೋಜನೆಯಡಿ ಶೇಂಗಾ, ಮೆಕ್ಕೆಜೋಳ ಮತ್ತಿತರ ಬೆಳೆಗಳ ಖರೀದಿ ಕೇಂದ್ರ ತೆರೆಯಲು ಹಾಗೂ ಏಜೆನ್ಸಿ ನಿಗದಿಪಡಿಸಲು ಕೋರಿ ಕೃಷಿ ಮಾರಾಟ...

ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಿಲ್ಲೆಯ ನೂರಾರು ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಅಂಗವನಾಡಿ ನೌಕರರ ಸಂಘದ...

ಅಂಬೇಡ್ಕರ್ ಸಂವಿಧಾನದ ಗುಮಾಸ್ತರಲ್ಲ

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಇತ್ತೀಚೆಗೆ ಕೆಲವರು ಸಂವಿಧಾನದ ಗುಮಾಸ್ತನ ರೀತಿ ನೋಡುತ್ತಿರುವುದು ಮನಸ್ಸಿಗೆ ತೀವ್ರ ನೋವು ಉಂಟುಮಾಡುತ್ತಿದೆ ಎಂದು...

ಅಂಬೇಡ್ಕರ್ ಚಿಂತನೆಗಳೇ ದೇಶಕ್ಕೆ ಸಂಪತ್ತು

ಮೈಸೂರು: ಶಿಕ್ಷಣದ ಏಕಸ್ವಾಮ್ಯ ಮುರಿದು, ಶಿಕ್ಷಣದ ಮೂಲಕ ಎಲ್ಲರಿಗೂ ಬಿಡುಗಡೆಯ ಕ್ರಾಂತಿ ಮೊಳಗಿಸಿದ ಅಂಬೇಡ್ಕರ್ ಅವರ ಶ್ರಮ, ಹೋರಾಟ ಮತ್ತು ವ್ಯಕ್ತಿತ್ವ ವಿದ್ಯಾರ್ಥಿಗಳಿಗೆ...

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ವಹಿವಾಟು, ಸಂಪರ್ಕಕ್ಕೆ ಕೊಂಡಿಯಾಗಿರುವ ವಾಘಾ ಗಡಿ ಶುಕ್ರವಾರ ಸಂಜೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ವೈಮಾನಿಕ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಪ್ರದೇಶದಲ್ಲಿ ವಿಮಾನ ಪತನಹೊಂದಿ, ಅಲ್ಲಿನ ಸೇನೆಯಿಂದ ಬಂಧಿತರಾಗಿದ್ದ ಭಾರತೀಯ ವಾಯುಪಡೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ರನ್ನು ಶುಕ್ರವಾರ ಪಾಕಿಸ್ತಾನ ಸರ್ಕಾರ ಭಾರತಕ್ಕೆ ಒಪ್ಪಿಸಿತು. ವಾಘಾ ಗಡಿಯಲ್ಲೇ ಹಸ್ತಾಂತರ ಪ್ರಕ್ರಿಯೆ ನಡೆಯಿತು.

ವಿಳಂಬ ಪ್ರಕ್ರಿಯೆಗೆ ಟೀಕೆ: ಶಾಂತಿಯ ಉದ್ದೇಶಕ್ಕಾಗಿ ಅಭಿನಂದನ್​ರನ್ನು ಬಿಡುಗಡೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಪಾಕ್, ಹಸ್ತಾಂತರ ಪ್ರಕ್ರಿಯೆ ವೇಳೆಯೂ ತನ್ನ ಬುದ್ಧಿ ಪ್ರದರ್ಶಿಸಿ ಟೀಕೆಗೆ ಗುರಿಯಾಗಿದೆ. ಮಧ್ಯಾಹ್ನ 5 ಗಂಟೆ ಸುಮಾರಿಗೆ ವಾಘಾ ಗಡಿ ಬಳಿ ಅಭಿನಂದನ್​ರನ್ನು ಕರೆತಂದಿದ್ದ ಪಾಕ್ ಅಧಿಕಾರಿಗಳು, ರಾತ್ರಿ 9.20ಕ್ಕೆ ಭಾರತಕ್ಕೆ ಒಪ್ಪಿಸಿದರು. ಹಸ್ತಾಂತರ ಸಮಯವನ್ನು ಎರಡು ಬಾರಿ ಮುಂದೂಡಲಾಯಿತು. ಬಿಡುಗಡೆಗೂ ಮುನ್ನ ಅಭಿನಂದನ್ ಅವರನ್ನು ವಾಘಾ ಗಡಿ ಬಳಿಯ ಸೇನಾ ಕ್ಯಾಂಪ್​ನಲ್ಲಿ ಪಾಕಿಸ್ತಾನ ಮತ್ತೊಂದು ಬಾರಿ ವಿಚಾರಣೆಗೆ ಒಳಪಡಿಸಿದೆ ಎನ್ನಲಾಗುತ್ತಿದೆ.

ವಿಂಗ್ ಕಮಾಂಡರ್ ಅಭಿನಂದನ್​ರಿಗೆ ಸ್ವಾಗತ. ನಿಮ್ಮ ಆದರ್ಶಪ್ರಾಯ ಸಾಹಸಕ್ಕೆ ದೇಶ ಹೆಮ್ಮೆ ಪಡುತ್ತಿದೆ. ನಮ್ಮ ಸೇನೆಯು 130 ಕೋಟಿ ಭಾರತೀಯರಿಗೆ ಸ್ಪೂರ್ತಿಯಾಗಿದೆ. ವಂದೇ ಮಾತರಂ.

| ನರೇಂದ್ರ ಮೋದಿ ಪ್ರಧಾನಿ

ಬಿಡುಗಡೆಯ ಕ್ಷಣಗಳು

# ರಾವಲ್ಪಿಂಡಿಯಿಂದ ಲಾಹೋರ್​ಗೆ ವಿಶೇಷ ವಿಮಾನದ ಮೂಲಕ ಅಭಿನಂದನ್​ರನ್ನು ಕರೆ ತಂದ ಪಾಕ್ ಸೇನೆ

# ಲಾಹೋರ್​ನಲ್ಲಿ ಸುಮಾರು 3 ಗಂಟೆಗಳ ಕಾಲ ವಿಳಂಬ, 2 ಬಾರಿ ಸಮಯ ಬದಲಾವಣೆ

# ಮಧ್ಯಾಹ್ನ 3 ಗಂಟೆಯ ಬದಲಿಗೆ, 5ಕ್ಕೆ ಹಸ್ತಾಂತರ ಎಂದಿದ್ದ ಪಾಕ್. ಬಳಿಕ 8ಕ್ಕೆ ವಿಸ್ತರಣೆ.

# ಸುಮಾರು 6 ಗಂಟೆಗಳ ವಿಳಂಬ ಬಳಿಕ ಲಾಹೋರ್​ನಿಂದ ವಾಘಾ ಗಡಿಗೆ ರಸ್ತೆ ಮಾರ್ಗದ ಮೂಲಕ ಅಭಿನಂದನ್ ಕರೆ ತಂದ ಪಾಕ್ ಸೇನೆ.

# 9 ಗಂಟೆ 21 ನಿಮಿಷಕ್ಕೆ ವಾಘಾ ಗಡಿಯಲ್ಲಿ ಭಾರತದ ಸೇನಾಧಿಕಾರಿಗಳಿಗೆ ಅಭಿನಂದನ್ ಹಸ್ತಾಂತರ

# ಏರ್​ವೈಸ್ ಮಾರ್ಷಲ್ ಆರ್.ಜಿ.ಕೆ. ಕಪೂರ್ ಅವರಿಂದ ಅಭಿನಂದನ್ ಸ್ವಾಗತ

# ವಾಘಾ ಗಡಿಯಿಂದ ಅಮೃತಸರ ವಾಯುನೆಲೆಗೆ ಕರೆ ತಂದ ಸೇನೆ.

# ಅಲ್ಲಿಂದ ದೆಹಲಿಗೆ ವಿಶೇಷ ವಿಮಾನದ ಮೂಲಕ ಅಭಿನಂದನ್ ಪ್ರಯಾಣ.

ಪಾಕ್​ನಲ್ಲೇ ಇದ್ದಾನಂತೆ ಮಸೂದ್

ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿ, 40 ಭಾರತೀಯ ಯೋಧರನ್ನು ಬಲಿ ಪಡೆದಿದ್ದ ಜೈಷ್ ಎ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಸ್ವತಃ ಪಾಕ್ ವಿದೇಶಾಂಗ ಸಚಿವ ಮೆಹಮೂದ್ ಖುರೇಷಿ ದೃಢಪಡಿಸಿದ್ದಾರೆ. ‘ಆತ ಅನಾರೋಗ್ಯದಿಂದ ಬಳಲುತ್ತಿದ್ದು, ಮನೆ ಹೊರಗೆ ಹೋಗಲೂ ಸಾಧ್ಯವಾಗುತ್ತಿಲ್ಲ’ ಎಂದು ಅಂತಾರಾಷ್ಟ್ರೀಯ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಖುರೇಷಿ ಹೇಳಿದ್ದಾರೆ.

ಮತ್ತೆ ಅದೇ ರಾಗ: ಮಸೂದ್ ಉಗ್ರ ದಾಳಿಗೆ ಸಂಚು ರೂಪಿಸಿರುವ ಕುರಿತು ಭಾರತ ಸರಿಯಾದ ಸಾಕ್ಷ್ಯಳನ್ನು ನೀಡಿದರೆ, ಕೋರ್ಟ್ ನಿರ್ದೇಶನ ಮೇರೆಗೆ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದರೆ ಈ ವರೆಗೆ ಭಾರತ ಯಾವುದೇ ಪ್ರಬಲ ಸಾಕ್ಷ್ಯ ನೀಡಿಲ್ಲ ಎಂದು ಖುರೇಷಿ ಪ್ರತಿಕ್ರಿಯಿಸಿದ್ದಾರೆ. ಪುಲ್ವಾಮಾ ದಾಳಿಯಲ್ಲಿ ಜೈಷ್ ಉಗ್ರರ ಕೈವಾಡ ಇರುವ ಕುರಿತು ಹಾಗೂ ಪಾಕಿಸ್ತಾನದಲ್ಲಿ ಇದರ ಯೋಜನೆ ರೂಪಿಸಲಾಗಿತ್ತು ಎಂಬ ಬಗ್ಗೆ ಭಾರತ ಗುರುವಾರವಷ್ಟೇ ಪಾಕಿಸ್ತಾನಕ್ಕೆ ದಾಖಲೆಗಳನ್ನು ಹಸ್ತಾಂತರಿಸಿತ್ತು. ಆದರೆ ಇದನ್ನು ಗಂಭೀರವಾಗಿ ಪರಿಗಣಿಸದ ಪಾಕಿಸ್ತಾನ, ಮಸೂದ್ ರಕ್ಷಣೆಗೆ ನಿಂತಿರುವುದು ಮತ್ತೊಮ್ಮೆ ಸಾಬೀತಾಗಿದೆ.

ವಿಡಿಯೋ ಮಾಡಿ ರಿಲೀಸ್

ಅಭಿನಂದನ್ ಹಸ್ತಾಂತರಕ್ಕೂ ಕೆಲ ನಿಮಿಷದ ಮುನ್ನ ಪಾಕಿಸ್ತಾನ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ಅಭಿನಂದನ್ ಪಾಕ್ ಸೇನೆಯನ್ನು ಶ್ಲಾಘಿಸುತ್ತಿರುವ ದೃಶ್ಯಗಳು ಇದರಲ್ಲಿದೆ. ‘ನಾನು ಪಾಕಿಸ್ತಾನದ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಬಂದಿದ್ದೆ. ನನ್ನ ವಿಮಾನವನ್ನು ಪಾಕ್ ವಾಯುಪಡೆ ಹೊಡೆದುರುಳಿಸಿತು. ಪಾಕ್ ವಾಯುಪಡೆ ಅತ್ಯಾಧುನಿಕವಾಗಿದೆ. ಪಾಕಿಸ್ತಾನ ಸೇನೆಯೇ ನನ್ನನ್ನು ರಕ್ಷಣೆ ಮಾಡಿದೆ’ ಎಂದು ವಿಡಿಯೋದಲ್ಲಿ ಅಭಿನಂದನ್ ಹೇಳಿದ್ದಾರೆ. ಹಲವು ಬಾರಿ ಇದನ್ನು ಎಡಿಟ್ ಮಾಡಲಾಗಿದೆ. ಅವರಿಂದ ಒತ್ತಾಯಪೂರ್ವಕವಾಗಿ ಈ ಹೇಳಿಕೆ ಪಡೆದಿರುವ ಶಂಕೆ ಇದೆ.

ಬಿಡುಗಡೆಯಲ್ಲೂ ಕುತಂತ್ರ

ಅಭಿನಂದನ್ ಹಸ್ತಾಂತರ ಪ್ರಕ್ರಿಯೆಯಲ್ಲೂ ಪಾಕಿಸ್ತಾನ ತನ್ನ ಹಿತಾಸಕ್ತಿ ಪ್ರದರ್ಶಿಸಿದೆ. ವಾಯುಪಡೆಯ ವಿಮಾನದಲ್ಲಿ ಅವರನ್ನು ಕರೆದುಕೊಂಡು ಬರುವ ಬಗ್ಗೆ ಭಾರತ ಪ್ರಸ್ತಾವನೆ ಮುಂದಿಟ್ಟಿತ್ತು. ಆದರೆ ಇದನ್ನು ತಿರಸ್ಕರಿಸಿ ಪಾಕಿಸ್ತಾನ ವಾಘಾ ಗಡಿಯ ಮೂಲಕವೇ ಹಸ್ತಾಂತರ ಪ್ರಕ್ರಿಯೆ ನಡೆಸುವುದಾಗಿ ತಿಳಿಸಿತ್ತು. ಸಂಜೆ ಗಡಿಯಲ್ಲಿ ಕವಾಯತು, ಸುದೀರ್ಘ ಹಸ್ತಾಂತರ ಪ್ರಕ್ರಿಯೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಪಡೆಯುವುದು ಪಾಕಿಸ್ತಾನದ ಉದ್ದೇಶವಾಗಿತ್ತು.

ಮುಗಿಲು ಮುಟ್ಟಿದ ಹರ್ಷ

ಭದ್ರತಾ ದೃಷ್ಟಿಯಿಂದ ಬೀಟಿಂಗ್ ರೀಟ್ರೀಟ್ (ಕವಾಯತು) ರದ್ದುಗೊಳಿಸಿದ ಭಾರತ, ವಾಘಾ ಗಡಿಯಲ್ಲಿ ಸಾರ್ವಜನಿಕರ ಪ್ರವೇಶ ನಿರಾಕರಿಸಿತ್ತು. ಆದರೂ ಈ ಪ್ರದೇಶದ ಹೊರಭಾಗದಲ್ಲಿ ಶುಕ್ರವಾರ ಮಧ್ಯಾಹ್ನದಿಂದಲೇ ಅಭಿನಂದನ್​ರನ್ನು ಸ್ವಾಗತಿಸಲು ಸಾವಿರಾರು ಜನರು ನೆರೆದಿದ್ದರು. ಹಲವರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು.

Stay connected

278,740FansLike
581FollowersFollow
620,000SubscribersSubscribe

ವಿಡಿಯೋ ನ್ಯೂಸ್

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...

VIDEO: ಎನ್​ಕೌಂಟರ್ ನಡೆಸಿದ ಪೊಲೀಸರನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸಿದ...

ಹೈದರಾಬಾದ್​​: ಪಶುವೈದ್ಯೆ ದಿಶಾ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಎನ್​ಕೌಂಟರ್​​ನಲ್ಲಿ ಹತ್ಯೆಗೈದ ಪೊಲೀಸರನ್ನು ಹೈದರಾಬಾದ್​​ ಜನತೆ ಹೆಗಲ ಮೇಲೆ ಹೊತ್ತು ಜಯಘೊಷ ಕೂಗಿ ಸಂಭ್ರಮಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಆರೋಪಿಗಳ ಎನ್​ಕೌಂಟರ್​ ಸುದ್ಧಿ...

ಉಪಚುನಾವಣೆ ಮತದಾನ ಅಂತ್ಯ: ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿಯದ್ದೇ ಮೇಲುಗೈ

ಬೆಂಗಳೂರು: ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಗುರುವಾರ ಸಂಜೆ 6 ಗಂಟೆಗೆ ಪೂರ್ಣಗೊಂಡಿತು. ಸಣ್ಣಪುಟ್ಟ ಗಲಾಟೆಗಳು ಹಾಗೂ ಅಲ್ಲಲ್ಲಿ ಕೆಲ ಇವಿಎಂಗಳ ದೋಷ ಹೊರತುಪಡಿಸಿದರೆ ಉಪಚುನಾವಣೆಯ ಮತದಾನ...

VIDEO| ವಿಕೆಟ್​ ಕಿತ್ತ ಖುಷಿಯಲ್ಲಿ ಕರವಸ್ತ್ರವನ್ನು ಕಡ್ಡಿಯನ್ನಾಗಿಸಿ ಸಂಭ್ರಮ: ಬೌಲರ್​ನ...

ನವದೆಹಲಿ: ಯಾವುದೇ ಆಟವಾಗಿರಲಿ ಆಟಗಾರರಿಗೆ ತಮ್ಮ ಸಂಭ್ರಮದ ಕ್ಷಣ ಸ್ಮರಣೀಯವಾಗಿರುತ್ತದೆ. ಹಲವರು ವಿಭಿನ್ನ ರೀತಿಯಲ್ಲಿ ಸಂಭ್ರಮಿಸುವ ಪ್ರಯತ್ನವನ್ನು ಮೈದಾನದಲ್ಲಿ ಮಾಡುತ್ತಿರುತ್ತಾರೆ. ಇದೀಗ ದಕ್ಷಿಣ ಆಫ್ರಿಕಾ ಬೌಲರ್​ ಒಬ್ಬರು ವಿಕೆಟ್​ ಪಡೆದ...